ಸ್ಥಳೀಯ

ವಿಟ್ಲ: ಪುತ್ತಿಲ ಪರಿವಾರದಿಂದ ಗೃಹ ರಕ್ಷಕ ಸಿಬ್ಬಂದಿಗೆ ರೈನ್ ಕೋಟ್

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲದ ವತಿಯಿಂದ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಿಸಲಾಯಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ನಡೆದ ಸಮಾರಂಭದಲ್ಲಿ ರೈನ್ ಕೋಟ್ ವಿತರಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಸಾರ್ವಜನಿಕರು ನಿಮ್ಮ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಅವರ ಅಭಿಮಾನಕ್ಕೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಬೇಕೆಂಬುದು ನಮ್ಮೆಲ್ಲರ ಆಶಯ. ವಿಟ್ಲ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾಮಾಜಿಕ, ಧಾರ್ಮಿಕ ಕೆಲಸ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಜನರ ಅಭಿಮಾನಕ್ಕೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲೂ ವಿಟ್ಲ ಭಾಗದಲ್ಲಿ ಸಮಾಜಮುಖಿ ಕೆಲಸ ಮಾಡಲು ವಿಟ್ಲ ಪಂಚಲಿಂಗೇಶ್ವರ ದೇವರು ಶಕ್ತಿ ನೀಡಲೆಂದ ಅವರು, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆಯೂ ಅಗತ್ಯವಿದ್ದರೆ ನಮ್ಮ ಟ್ರಸ್ಟ್ ನಿಮಗೆ ಯಾವತ್ತೂ ಸಹಕಾರ ನೀಡುತ್ತದೆ ಎಂದರು.
ಸಾರ್ವಜನಿಕ ದುರ್ಗಾ ಪೂಜಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶ್ರೀಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಶೆಟ್ಟಿ, ರಘುನಾಥ್ ರೈ, ಹರೀಶ್ ಮರುವಾಳ, ಉಮೇಶ್ ಕೊಡಿಬೈಲು, ಶ್ರೀಕೃಷ್ಣ ವಿಟ್ಲ, ಕೃಷ್ಣಯ್ಯ ಬಲ್ಲಾಳ್ ಸೇರಿದಂತೆ ಟ್ರಸ್ಟ್ ಮತ್ತು ಪೂಜಾ ಸಮಿತಿ ಪದಾಧಿಕಾರಿಗಳು ಮತ್ತು ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

1 of 108