ಪುತ್ತೂರು:ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವ ಇದರ 2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಜರಗಿದ್ದು ನೂತನ ಅಧ್ಯಕ್ಷರಾಗಿ ಕುಸುಮ್ ರಾಜ್, ಕಾರ್ಯದರ್ಶಿಯಾಗಿ ಅಭೀಷ್ ಕೆ, ಕೋಶಾಧಿಕಾರಿಯಾಗಿ ಸಚಿನ್ ನಾಯಕ್ ರವರು, ವಲಯ ಸೇನಾನಿಯಾಗಿ ಕ್ಲಬ್ ಸದಸ್ಯ ಭರತ್ ಪೈರವರು ಅಯ್ಕೆಯಾಗಿರುತ್ತಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಉಪಾಧ್ಯಕ್ಷೆ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ವಚನ ಜಯರಾಮ್, ಸಾರ್ಜಂಟ್ ಎಟ್ ಆರ್ಮ್ಸ್ ಹರಿಪ್ರಸಾದ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಸುದರ್ಶನ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಶರತ್ ಶ್ರೀನಿವಾಸ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಸುದರ್ಶನ್ ಹಾರಕರೆ, ಯೂತ್ ಸರ್ವಿಸ್ ನಿರ್ದೇಶಕರಾಗಿ ಪ್ರಜ್ಞಾ ಸಿದ್ದಾರ್ಥ್ ಮುಳಿಯ, ಬುಲೆಟಿನ್ ಎಡಿಟರ್ ಆಗಿ ರಾಜೇಶ್ವರಿ ಆಚಾರ್, ಚೇರ್ಮನ್ ಗಳಾಗಿ ಸೋನಾ ಪ್ರದೀಪ್(ಮೆಂಬರ್ ಶಿಪ್), ಅನೂಪ್(ಟಿ.ಆರ್.ಎಫ್), ಡಾ.ಯದುರಾಜ್(ಪಬ್ಲಿಕ್ ಇಮೇಜ್), ಹರ್ಷಕುಮಾರ್(ಜಿಲ್ಲಾ ಪ್ರಾಜೆಕ್ಟ್), ತ್ರಿವೇಣಿ ಗಣೇಶ್ (ಸಿಎಲ್‌ಸಿಸಿ), ಅನಿಲ್ ಮುಂಡೋಡಿ(ಪಲ್ಸ್ ಪೋಲಿಯೊ), ಅಜಯ್ ರಾಮ್ ಕೋಡಿಬೈಲು( ಸಾಂಸ್ಕೃತಿಕ), ಚೇತನ್ ಪ್ರಕಾಶ್ ಕಜೆ(ಕ್ರೀಡೆ) ರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ :
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕುಸುಮ್ ರಾಜ್ ಎಸ್.ಕೆರವರು ಸುಳ್ಯ ತಾಲೂಕಿನ ಗೋಳ್ತಿಲ ಮನೆತನದವರು. ಬೆಂಗಳೂರಿನಲ್ಲಿ ಬಿ.ಎ ಪದವಿ ಪೂರೈಸಿದ ನಂತರ ಜಗದಾಲೆ ಗ್ರೂಪ್ ಆಫ್ ಕಂಪೆನಿ ಬೆಂಗಳೂರಿನಲ್ಲಿ ಮತ್ತು ಪುತ್ತೂರುನಲ್ಲಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪತ್ನಿಗೆ ಜೊತೆಯಾಗಿ ಪುತ್ತೂರಿನ ಹೃದಯ ಭಾಗದಲ್ಲಿ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಉತ್ಕೃಷ್ಟ ಗುಣಮಟ್ಟದ ಡ್ರೈಫ್ರಟ್ ಮತ್ತು ಚಾಕೋಲೇಟ್ಸ್ ಅನ್ನು ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಪರಿಚಯಿಸಿ”ಲಹರಿ ಡ್ರೈ ಫೂಟ್ ಅಂಡ್
ಮೋರ್ “ಎಂಬ ಸ್ವ-ಉದ್ಯಮವನ್ನು ಆರಂಭಿಸಿ,
ಮುನ್ನಡೆಸುತ್ತಿದ್ದಾರೆ. 2021 ರಲ್ಲಿ ಕೊರೋನಾ ಮಹಾಮಾರಿ ಬಂದ ಸಂದರ್ಭ ತೆಂಗು ಬೆಳೆಗೆ ದರ ತೀವ್ರ ಕುಸಿತವಾಗಿ ರೈತರು ಕಂಗಾಲಾಗಿದ್ದ ಸಂದರ್ಭದಲ್ಲಿ ತೆಂಗಿನ
ಮೌಲ್ಯವರ್ಧನೆಯ ಮೂಲಕ ತೆಂಗು ರೈತರ ಪಾಲಿಗೆ ಆಶಾದಾಯಕವಾಗಿ, ವಿವಿಧ ಕ್ಷೇತ್ರದ ಅನುಭವಸ್ತ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ದಕ್ಷಿಣ ಕನ್ನಡ
ತೆಂಗು ರೈತ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಿದರು .ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿ ತೆಂಗು ಬೆಳೆಗೆ ಪೂರಕವಾಗಿ ಹುಟ್ಟಿಕೊಂಡ ಈ ಸಂಸ್ಥೆಯು ಪ್ರಸ್ತುತ 18
ಭಾರತದ ಅತೀ ದೊಡ್ಡ ತೆಂಗು ರೈತರ ಸಂಸ್ಥೆಯಾಗಿ ಹೊರತುಪಡಿಸಿ ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಮೂಲಕ ಹೊಮ್ಮಿದೆ . ಜಿಲ್ಲೆಯ ತಾಲೂಕಿನಾದ್ಯಂತ ಶಾಖೆಗಳನ್ನು ಹೊಂದಿದ್ದು, ತೆಂಗಿನಲ್ಲಿ ಗರಿಯಿಂದ ಹಿಡಿದುವವ್ಯವನ್ನು ಬದಲಾಯಿಸುವ ಕನಸನ್ನು ಬೇರಿನವರೆಗೂ ಮೌಲ್ಯವರ್ದಿಸಿ, ತೆಂಗು ಬೆಳೆಗಾರರ
ತೆಂಗು ಬೆಳೆಗಾರರ ಭವಿಷ್ಯವನ್ನು ಬದಲಾಯಿಸುವ ಕನಸನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಈ ಸಂಸ್ಥೆಯು ಅದೆಷ್ಟೋ ರೈತರಿಗೆ ಸಹಕಾರ, ಬೆಂಬಲ ಮತ್ತು ಜನರಿಗೆ ಉದ್ಯೋಗ ನೀಡಿ ಸ್ವಾವಲಂಬಿ ಬದುಕನ್ನು ಕಟ್ಟಿ ಕೊಟ್ಟಿದೆ.
ಈ ಕೃಷಿ ಪರ ಸಾಧನೆಗಾಗಿ ಚಿತ್ತಾರ ಸಂಸ್ಥೆಯು ” ಚಿತ್ತಾರ ಸ್ಟಾರ್ ” ಪ್ರಶಸ್ತಿ, ಜೇಸಿ ಸಂಸ್ಥೆಯಲ್ಲಿ ಸುಮಾರು ೧೯ ವರ್ಷಗಳ ಸೇವೆಯನ್ನು ಸಲ್ಲಿಸಿ 2019 ರಲ್ಲಿ “ಸಾಧನಶ್ರೀ ” ಪ್ರಶಸ್ತಿ, ಪ್ರತಿಷ್ಠಿತ ಬಿ.ಜಿ.ಯಸ್ ಸಂಸ್ಥೆಯಿಂದ 2024ರಲ್ಲಿ ಕರಾವಳಿ ರತ್ನ ಪ್ರಶಸ್ತಿ ಕೂಡ ಲಭಿಸಿದೆ .
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಭೀಷ್ ಕೆ.ರವರು ಕೊಳಕೆಮಾರ್ ನಿವಾಸಿಯಾಗಿದ್ದು ಕೃಷಿ ಕುಟುಂಬದಿಂದ ಬಂದವರು. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಿಂದ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಪದವಿ (ಬಿಸಿಎ) ಪೂರ್ಣಗೊಳಿಸಿ, 2019 ರಲ್ಲಿ ರೋಟರಿ ಪುತ್ತೂರು ಯುವವನ್ನು ಸೇರ್ಪಡೆಯಾಗಿ ವಿವಿಧ ಹುದ್ದೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಪರವಾಗಿ, ಅವರು ಸಪ್ತಗಿರಿ ಸ್ಟೀಲ್ಸ್ ಮತ್ತು ಮೆಟಲ್ಸ್‌ನ ಮಾಲೀಕರಾಗಿದ್ದಾರೆ ಮತ್ತು ತೆಂಕಿಲದ ಪುಷ್ಪಾ ಸ್ಟೋರ್ ವಾಣಿಜ್ಯ ಸಂಕೀರ್ಣದ ವ್ಯವಸ್ಥಾಪಕ ಪಾಲುದಾರರಾಗಿ ನಿರ್ವಹಿಸುತ್ತಿದ್ದಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಸಚಿನ್ ನಾಯಕ್ ರವರು ದರ್ಬೆ ನಿವಾಸಿ. ಸಗಟು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಅನುಭವ ಹೊಂದಿರುವ ಕ್ರಿಯಾಶೀಲ ಮತ್ತು ದೂರದೃಷ್ಟಿಯ ಉದ್ಯಮಿ. ದಕ್ಷಿಣ ಕನ್ನಡದಲ್ಲಿ ದಿನಸಿ, ಸಿಮೆಂಟ್, ಉಕ್ಕು ಮತ್ತು ನಿರ್ಮಾಣ ಸಾಮಗ್ರಿಗಳ ವಿತರಣೆಯಲ್ಲಿ ಬಹಳ ಪ್ರಸಿದ್ಧರಾದ ಸಚಿನ್ ಟ್ರೇಡಿಂಗ್ ಕಂಪನಿಯ ಸ್ಥಾಪಕರು. ಕಾರ್ಯತಂತ್ರದ ವ್ಯವಹಾರ ವಿಸ್ತರಣೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಗೆ ಹೆಸರುವಾಸಿಯಾದ ಅವರು ರೆಡಿ-ಮಿಕ್ಸ್ ಕಾಂಕ್ರೀಟ್ ಪೈಪ್‌ಗಳು ಮತ್ತು ಪ್ಲಂಬಿಂಗ್ ಸರಬರಾಜುಗಳಲ್ಲಿ ಯಶಸ್ವಿಯಾಗಿ ವೈವಿಧ್ಯಗೊಂಡಿದ್ದಾರೆ. ಅತ್ಯುತ್ತಮ ಮಾರಾಟ ಮತ್ತು ವ್ಯವಹಾರ ಕಾರ್ಯಕ್ಷಮತೆಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. 2024 ರಲ್ಲಿ ದುಬೈನಲ್ಲಿ ಟೈರ್-1 ಮತ್ತು ಟೈರ್-2 ನಗರಗಳಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಗುರುತಿಸಲ್ಪಟ್ಟರು ಮತ್ತು ಲಂಡನ್ 2022 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಸಿಮೆಂಟ್ ಮಾರಾಟಕ್ಕಾಗಿ ಪ್ರಶಸ್ತಿ ಪಡೆದಿರುತ್ತಾರೆ.
ವಲಯ ಸೇನಾನಿ ಪರಿಚಯ:
ರೋಟರಿ ವಲಯ ಐದರ ವಲಯ ಸೇನಾನಿಯಾಗಿ ಆಯ್ಕೆಯಾದ ಭರತ್ ಪೈರವರು ಬೆಂಗಳೂರಿನ ಆರ್.ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಪದವಿ ಪಡೆದಿದ್ದು, ಫ್ರೆಂಚ್ ಬಹುರಾಷ್ಟ್ರೀಯ ಕಂಪನಿಯಾದ ಷೇಯ್ದರ್ ಎಲೆಕ್ಟಿಕ್‌ನಲ್ಲಿ 7 ವರ್ಷಗಳ ಕಾಲ ಆರ್ & ಡಿ ಎಂಜಿನಿಯರ್ ಆಗಿ ಕೆಲಸ ಮಾಡಿರುತ್ತಾರೆ. ಫ್ರಾನ್ಸ್‌ನ ಗ್ರೆನೋಬಲ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ವೃತ್ತಿಪರ ತರಬೇತಿ ಕಾರ್ಯಾಚರಣೆಯನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವಿದ್ಯುತ್ ಸ್ವಿಚ್ ಬೋರ್ಡ್‌ಗಳಿಗೆ ಸಕ್ರಿಯ ರಕ್ಷಣೆಯ ಕುರಿತು ಸಂಶೋಧಕರಾಗಿ ಪೇಟೆಂಟ್ ಹೊಂದಿದ್ದಾರೆ. ನಿಖರ ಎಂಜಿನ್ ಕಾರ್ಯಾಚರಣೆಗಳಿಗಾಗಿ ಗಣಕೀಕೃತ ಯಂತ್ರೋಪಕರಣಗಳಲ್ಲಿ ಪರಿಣತಿ ಹೊಂದಿರುವ ಅವರು ಆಟೋಮೊಬೈಲ್ ಮತ್ತು ಲೇಥ್ ಉದ್ಯಮವಾದ ಶ್ರೀ ಲಕ್ಷ್ಮಿ ಎಂಜಿನಿಯರಿಂಗ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ಪಾಲುದಾರರಾಗಿದ್ದು, ದರ್ಬೆಯಲ್ಲಿರುವ ಐಒಸಿ ಪೆಟ್ರೋಲ್ ಪಂಪ್‌ನ ಪಿ.ಸಿ ಪೈ & ಕೋ.ನಲ್ಲಿ ಪಾಲುದಾರರಾಗಿದ್ದಾರೆ. 2021-22ರ ಅವಧಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷರಾಗಿದ್ದು ಅವರು ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಶಾಲೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜು.9:ಪದ ಪ್ರದಾನ..
ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.9 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಲಿದೆ. ಪದ ಪ್ರದಾನ ಅಧಿಕಾರಿಯಾಗಿ ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಲಿದ್ದಾರೆ. ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ವಲಯ ಸೇನಾನಿ ಭರತ್ ಪೈ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಭಾಗವಹಿಸಲಿದ್ದಾರೆ.