ಸ್ಥಳೀಯ

ವಿಜಯ ಸಾಮ್ರಾಟ್ ಆಶ್ರಯದಲ್ಲಿ ಸೆ. 27, 28ರಂದು ಪಿಲಿಗೊಬ್ಬು-2025 ಸೀಸನ್-3: ಪೂರ್ವಭಾವಿ ಸಭೆ

ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಸೆಪ್ಟೆಂಬರ್ 27 ಹಾಗೂ 28 ರಂದು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಸೆಪ್ಟೆಂಬರ್ 27 ಹಾಗೂ 28 ರಂದು ನಡೆಯುವ ಪಿಲಿಗೊಬ್ಬು-2025 ಸೀಸನ್-3 ಇದರ ಪೂರ್ವಭಾವಿ ಸಭೆಯು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರ ಅಧ್ಯಕ್ಷತೆಯಲ್ಲಿ ದರ್ಭೆಯ ಶ್ರೀ ರಾಮ ಸೌಧ ಕಟ್ಟಡದಲ್ಲಿ ನಡೆಯಿತು.

akshaya college

ಸೆಪ್ಟೆಂಬರ್-27 ನೇ ತಾರೀಖಿಗೆ ಫುಡ್ ಫೆಸ್ಟ್ ಗೆ ಚಾಲನೆ ನೀಡಿ, ಸೆಪ್ಟೆಂಬರ್- 28ರಂದು ಪಿಲಿಗೊಬ್ಬು ಕಾರ್ಯಕ್ರಮ ನಡೆಯಲಿದೆ.

ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಕುರಿತು ಚರ್ಚೆ ನಡೆಯಿತು.

ವೇದಿಕೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷರಾದ ಶಂಕರ್ ಭಟ್ ಈಶಾನ್ಯ, ಸಂಚಾಲಕರಾದ ನಾಗರಾಜ್ ನಡುವಡ್ಕ, ಕಾರ್ಯಾದ್ಯಕ್ಷರಾದ ಸುಜಿತ್ ರೈ ಪಾಲ್ತಾಡ್ ಸೇರಿದಂತೆ ಸಂಸ್ಥೆಯ ನೂರಾರು ಸದಸ್ಯರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107