ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನ ಭಾರತ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ ಜಲ್ ಮಿತ್ರ ತರಬೇತಿಯ 17 ದಿವಸಗಳ ತರಗತಿ ಅವಧಿ ಸಮಾರೋಪ ಸಮಾರಂಭ ನರಿಮೊಗ್ರು ಸರಕಾರಿ ಐಟಿಐ ಸಂಸ್ಥೆಯಲ್ಲಿ ಜೂನ್ 23ರಂದು ನಡೆಯಿತು.
ಅಧ್ಯಕ್ಷತೆಯನ್ನು ಸರಕಾರಿ ಐಟಿಐ ಸಂಸ್ಥೆ ಪ್ರಭಾರ ಪ್ರಾಂಶುಪಾಲೆ ರಾಜೀವಿ ವಹಿಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ಸಹಾಯಕ ನಿರ್ದೇಶಕಿ ಸತ್ಯಲತಾ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಸಾಂಖ್ಯಿಕ ಅಧಿಕಾರಿ ವಿಜಯಲಕ್ಷ್ಮಿ, ಪುತ್ತೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ದೊಡ್ಡಮನಿ, ಎನ್ ಆರ್ ಎಲ್ ಎಂ ಜಿಲ್ಲಾ ವ್ಯವಸ್ಥಾಪಕಿ ಶಕುಂತಲಾ, ಪಂಚಾಯತ್ ರಾಜ್ ತಾಲೂಕು ಸಹಾಯಕ ನಿರ್ದೇಶಕ ನಾಗೇಶ್, ನರಿಮೊಗ್ರು ಸರಕಾರಿ ಐಟಿಐ ಸಂಸ್ಥೆ JTO ಸಂಪನ್ಮೂಲ ವ್ಯಕ್ತಿ ಯೋಗೇಶ್, ಎನ್ ಆರ್ ಎಲ್ ಎಮ್ ಪುತ್ತೂರು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ, ನರಿಮೊಗ್ರು ಸರಕಾರಿ ಐಟಿಐ ಸಂಸ್ಥೆಯ ಆಡಳಿತ ಅಧಿಕಾರಿ ಹೇಮಲತಾ, ಕೃಷಿಯೇತರ ಚಟುವಟಿಕೆಯ ತಾಲೂಕು ವ್ಯವಸ್ಥಾಪಕಿ ನಳಿನಾಕ್ಷಿ, ನರಿಮೊಗ್ರು ಸರಕಾರಿ ಐಟಿಐ ಕಾಲೇಜು JTO ಉಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
