ಪುತ್ತೂರು: ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಮರಾಟಿ ಯುವ ವೇದಿಕೆ ವತಿಯಿಂದ ಸೇಡಿಗುಳಿ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲಾ ಸಂಸ್ಥಾಪನಾ ದಿನದಂದು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಭವ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಕಟ್ಟಡದ ಸ್ಥಳದಾನಿ ಬಾಲಕೃಷ್ಣ ಮಣಿಯಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವ ವೇದಿಕೆಯ ಅಧ್ಯಕ್ಷರಾದ ವಸಂತ ಆರ್ಯಾಪು ಇವರನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಬಾಲಕೃಷ್ಣ ಮಣಿಯಾಣಿ ಶಾಲು ಹೊದಿಸಿ, ಶ್ರೀಮತಿ ಭವ್ಯ ಸ್ಮರಣಿಕೆ ನೀಡಿ ಗೌರವಿಸಿದರು.
ಖಜಾಂಚಿ ಜಗದೀಶ್ ಎಲಿಕ, ಮಾಜಿ ಅಧ್ಯಕ್ಷರಾದ ಸಂದೀಪ್ ಆರ್ಯಾಪು, ಗೋಪಾಲ ಪಡುಮಲೆ, ವೆಂಕಪ್ಪ ಬರೆಪ್ಪಾಡಿ, ಉಪಾಧ್ಯಕ್ಷ ನವೀನ್ ಕುಮಾರ್ ಕೆ, ಸಾಂಸ್ಕೃತಿಕ ಕಾರ್ಯದರ್ಶಿ ಯಶಸ್ವಿನಿ ಸಾಲ್ಮರ, ಸದಸ್ಯರಾದ ವಿಜಯ ಮಠಂತಬೆಟ್ಟು, ನವೀನ್ ಕುಮಾರ್ ಮೈರ, ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಅತಿಥಿ ಶಿಕ್ಷಕಿ ಶೋಭಿತಾ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ರಾಮ ನಾಯ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.