Gl harusha
ಸ್ಥಳೀಯ

ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಧನಸಹಾಯ

ಕುಂಜೂರುಪಂಜ ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ದಿ ವಿಭಾಗದಿಂದ 50 ಸಾವಿರ ರೂ. ಮಂಜೂರಾಗಿದ್ದು, ಚೆಕ್ ಅನ್ನು ಶ್ರೀದುರ್ಗಾ ಭಜನಾ ಮಂದಿರದಲ್ಲಿ ಹಸ್ತಾಂತರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕುಂಜೂರುಪಂಜ ಇರುವೆರ್ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ದಿ ವಿಭಾಗದಿಂದ 50 ಸಾವಿರ ರೂ. ಮಂಜೂರಾಗಿದ್ದು, ಚೆಕ್ ಅನ್ನು ಶ್ರೀದುರ್ಗಾ ಭಜನಾ ಮಂದಿರದಲ್ಲಿ ಹಸ್ತಾಂತರಿಸಲಾಯಿತು.

srk ladders
Pashupathi
Muliya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಬಿ ಸಿ ಟ್ರಸ್ಟ್ ಯೋಜನಾಧಿಕಾರಿ ಶಶಿಧರ ಎಂ. ಹಾಗೂ ಪುತ್ತೂರು ತಾಲೂಕಿನ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಅವರು ಇರುವೆರ್ ಉಳ್ಳಾಕುಲು ದೈವಸ್ಥಾನ ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ಜಿ.ಟಿ. ನಾರಾಯಣ ಶೆಟ್ಟಿ, ಶ್ರೀ ದುರ್ಗಾ ಸೇವಾ ಸಮಿತಿ ಅಧ್ಯಕ್ಷ ರಾದಕೃಷ್ಣ ಗೌಡ ಅವರಿಗೆ ಹಸ್ತಾoತರಿಸಿದರು.

ಈ ಸಂದರ್ಭ ಕುಂಜೂರು ಪಂಜ ಒಕ್ಕೂಟ ಅಧ್ಯಕ್ಷ ಮಹಾಲಿಂಗ ನಾಯ್ಕ, ಉಪಾಧ್ಯಕ್ಷೆ ಉಮಾವತಿ, ಬಲ್ನಾಡು ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಜೆ., ಸೇವಾ ಪ್ರತಿನಿಧಿ ಆಶಾಲತಾ, ಶ್ರೀ ದುರ್ಗಾ ಸೇವಾ ಸಮಿತಿ ಸದಸ್ಯರು, ಇರುವೆರ್ ಉಳ್ಳಾಕುಲು ದೈವಸ್ಥಾನ ಜೀರ್ಣೋದ್ದಾರಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts