ಪುತ್ತೂರು: ಪುತ್ತೂರು ರೋಟರಿ ಕ್ಲಬ್ಬಿನ ನಿರ್ಗಮಿತ ಕಾರ್ಯದರ್ಶಿ, ನಿಯೋಜಿತ ಯೂತ್ ಸರ್ವೀಸ್ ಡೈರೆಕ್ಟರ್ ಆಗಿರುವ ದರ್ಬೆ ಪ್ರಿಸಿಷನ್ ಕಾರ್ ಕೇರ್ ಸೆಂಟರಿನ ಸುಜಿತ್ ಡಿ. ರೈ ಅವರಿಗೆ 2024-25ನೇ ಸಾಲಿನಲ್ಲಿ Maruti Suzuki (India) LTD ಇದರ “Best Performance Award” ಹಾಗೂ “Focus Parts Target Award”ಗೆ ಭಾಜನರಾಗಿದ್ದಾರೆ.
ಮೇ ತಿಂಗಳಿನಲ್ಲಿ ಥೈಲ್ಯಾಂಡಿನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
2016ರಲ್ಲಿ ಮಾರುತಿ ಸುಜುಕಿಯ “ANMOL RATAN” Award ಪಡೆದಿರುವ ಇವರು 2017, 2018, 2019ರಲ್ಲಿ ಸತತವಾಗಿ 3 ಬಾರಿ Best performance Award ಪಡೆದಿದ್ದಾರೆ. ಸಮಾಜ ಸೇವೆ, ಧಾರ್ಮಿಕ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.