ಮಕ್ಕಳಿಗೆ ಹಾಗೂ ಹಿರಿಯರಿಗೂ ಈ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಮಹಿಳೆಯರ ಈಜು ತರಬೇತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಂದು ತಿಂಗಳ ಕಾಲ ಅಂದರೆ ಮಾರ್ಚ್ 25ರಿಂದ ಏಪ್ರಿಲ್ 24ರವರೆಗೆ ತರಬೇತಿ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ ತಿಳಿಸಿದ್ದಾರೆ.
ಈಜು ಶಿಬಿರ ಉದ್ಘಾಟನೆಯಲ್ಲಿ ಕಾರ್ಯದರ್ಶಿ ಕೆ. ವಿಶ್ವಾಸ್ ಶೆಣೈ, ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಂ ಆಳ್ವ, ನಿತಿನ್ ಪಕ್ಕಳ, ಚಂದ್ರಶೇಖರ್, ಪ್ರಶಾಂತ್ ಶೆಣೈ ಉಪಸ್ಥಿತರಿದ್ದರು.