ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರ ಅಧಿಕೃತ ಬೇಟಿ ಕಾರ್ಯಕ್ರಮ ಮಾರ್ಚ್ 19ರಂದು ನಡೆಯಲಿದ್ದು, ಅಂದು ರೋಟರಿ ಯುವದಿಂದ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಎದೆಹಾಲು ನೀಡುವ ಹಾಗೂ ಶಿಶು ಪಾಲನ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷೆ ಅಶ್ವಿನಿ ಮುಳಿಯ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಗವರ್ನರ್ ಅವರನ್ನು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಸ್ವಾಗತಿಸಿ ಕೊಳ್ಳಲಾಗುವುದು. ಕ್ಲಬ್ ವತಿಯಿಂದ ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ ಪ್ರಾಯೋಜಕತ್ವದಲ್ಲಿ ದೇವಸ್ಥಾನಕ್ಕೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಿದ್ದೇವೆ. 11 ಗಂಟೆಗೆ ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಮಹಿಳೆಯರ ಕೊಠಡಿಯಲ್ಲಿ ಮಕ್ಕಳಿಗೆ ಎದೆಹಾಲು ನೀಡುವ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದರು.
ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ಮಾಡಿ ಪ್ರಾಜೆಕ್ಟ್ ವೀಕ್ಷಣೆ ಹಾಗೂ ಶಾಸಕರ ಭವನದ ಬಳಿಯಲ್ಲಿ ನವೀಕೃತಗೊಂಡ ಮಹಿಳಾ ಸಾಂತ್ವನ ಕೇಂದ್ರಕ್ಕೆ ಅಗತ್ಯ ಪೀಠೋಪಕರಣಗಳ ಕೊಡುಗೆ ರೋಟರಿ ಕ್ಲಬ್ ಪುತ್ತೂರು ವತಿಯಿಂದ ನಡೆಯಲಿದೆ. ನಂತರ ಫಿಲೋ ನಗರದಲ್ಲಿ ಸಚ್ಚಿದಾನಂದ ಸಭಾಂಗಣದಲ್ಲಿ ಕ್ಯೂಬ್ ಅಸೆಂಬ್ಲಿ ನಡೆಯಲಿದೆ ಎಂದರು.
ಸಂಜೆ 7 ಗಂಟೆಗೆ ಪುತ್ತೂರು ಎ.ಪಿ.ಎಂ.ಸಿ. ರಸ್ತೆಯ ದಿ ಪುತ್ತೂರು ಗಾರ್ಡನ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ವಲಯ 5ರ ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್, ಲೆಫ್ಟಿನೆಂಟ್ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವಚನಾ ಜಯರಾಂ, ಡಾ. ಹರ್ಷ ಕುಮಾರ್ ರೈ, ಪಶುಪತಿ ಶರ್ಮಾ, ಕುಸುಮಾಕರ್ ಉಪಸ್ಥಿತರಿದ್ದರು.