Gl harusha
ಸ್ಥಳೀಯ

ಗಾನಸಿರಿ ಕಿರಣ್ ಕುಮಾರ್ ರಿಗೆ ಸುಗಮ ಸಂಗೀತ ಸೇವಾ ರತ್ನ ರಾಜ್ಯಪ್ರಶಸ್ತಿ

ಪುತ್ತೂರಿನ ಖ್ಯಾತ ಗಾಯಕರು ಮತ್ತು ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಸಂಗೀತ ಗುರುಗಳು ಡಾ. ಕಿರಣ್ ಕುಮಾರ್ ಗಾನಸಿರಿಯವರಿಗೆ ಸುಗಮ ಸಂಗೀತ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯ ಮ್ಯೂಸಿಕ್ ಸ್ಕೂಲ್, ಜ್ಞಾನಭಾರತಿ, ಬೆಂಗಳೂರು ಇವರು ಖ್ಯಾತ ಸಂಗೀತ ನಿರ್ದೇಶಕರಾದ ದಿ. ರಾಜನ್ ನಾಗೇಂದ್ರ ಸವಿ ನೆನಪಿನಲ್ಲಿ ಸುಗಮ ಸಂಗೀತ ಕ್ಷೇತ್ರದ ಅನುಪಮ ಸೇವೆಗಾಗಿ ಪುತ್ತೂರಿನ ಖ್ಯಾತ ಗಾಯಕರು ಮತ್ತು ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಸಂಗೀತ ಗುರುಗಳು ಡಾ. ಕಿರಣ್ ಕುಮಾರ್ ಗಾನಸಿರಿಯವರಿಗೆ ಸುಗಮ ಸಂಗೀತ ಸೇವಾ ರತ್ನ
ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.

Muliya
srk ladders
Pashupathi

ಪ್ರಶಸ್ತಿ ಪ್ರಧಾನ ಸಮಾರಂಭ ಸಪ್ತಸ್ವರ ಸಂಗೀತೋತ್ಸವವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 9 ರಂದು ನಡೆಯಲಿದೆ.

ಖ್ಯಾತ ಸಂಗೀತ ನಿರ್ದೇಶಕರು ಶ್ರೀ ಹರಿಕೃಷ್ಣ ಸೇರಿದಂತೆ ಗಣ್ಯಾತಿ ಗಣ್ಯರ ಸಮಕ್ಷಮದಲ್ಲಿ ಕಿರಣ್ ಕುಮಾರ್ ರವರು
ಸುಗಮ ಸಂಗೀತ ಸೇವಾ ರತ್ನ  ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ

ಕಳೆದ 23 ವರ್ಷಗಳಲ್ಲಿ ತನ್ನ ಗಾನಸಿರಿ ಕಲಾ ಕೇಂದ್ರ ಸಂಸ್ಥೆಯ ಮೂಲಕ ಇದುವರೆಗೆ 37 ಸಾವಿರ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿರುವ ಕಿರಣ್ ಕುಮಾರ್ ರವರು ವಿಭಿನ್ನ ಮತ್ತು ವಿಶಿಷ್ಟ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ಭಾವಗೀತೆಗಳಿಗೆ ಜೀವತುಂಬಿ ಹಾಡುವ ಅದ್ಭುತ ಗಾಯಕರು ಮಾತ್ರವಲ್ಲದೆ ಲಯ ಪ್ರಧಾನ ಜನಪದ ಗೀತೆಗಳನ್ನೂ ಹಾಡಿ ಮನರಂಜಿಸಬಲ್ಲ ಅದ್ಭುತ ಗಾಯಕರು ಗಾನಸಿರಿ ಕಿರಣ್ ಕುಮಾರ್

ನಾಡಿನಾದ್ಯಂತ 5000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಈಗಾಗಲೇ ಸುಗಮ ಸಂಗೀತ ರತ್ನ, ವಿಶ್ವಮಾನ್ಯ ಕನ್ನಡಿಗ, ಮತ್ತು ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಕಿರಣ್ ಕುಮಾರ್ ರವರು 2022 ರಲ್ಲಿ ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ಬೆಂಗಳೂರು ಈ ಸಂಸ್ಥೆಯಿಂದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪಡೆದಿರುತ್ತಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ