ರಾಜ್ಯ ವಾರ್ತೆ

Mangalore: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ 

ದುಬ್ಬಾ ಮತ್ತು ಅಬುಧಾಬಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 1.15 ಕೋ.ರೂಮೌಲ್ಯದ ಚಿನ್ನ, ಕೇಸರಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ದುಬ್ಬಾ ಮತ್ತು ಅಬುಧಾಬಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 1.15 ಕೋ.ರೂಮೌಲ್ಯದ ಚಿನ್ನ, ಕೇಸರಿಯನ್ನು (Gold, Saffron) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಡಿ.8 ಮತ್ತು 11ರ ನಡುವೆ ಏರ್ ಇಂಡಿಯಾ(Ar India) ಮತ್ತು ಇಂಡಿಗೋ (Indigo) ವಿಮಾನಗಳಲ್ಲಿ ಬಂದ ಕಾಸರಗೋಡು ಮತ್ತು ಹೊನ್ನಾವರದ ಮೂವರು ಪ್ರಯಾಣಿಕರ ಅನುಮಾನಾಸ್ಪದ ಚಲನ ವಲನಗಳನ್ನು ಗಮನಿಸಿದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದಾಗ ಒಳ ಉಡುಪುಗಳಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ.

SRK Ladders

ಇನ್ನೊಂದು ಪ್ರಕರಣದಲ್ಲಿ ಗುದದ್ವಾರದಲ್ಲಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ರಟ್ಟಿನ ಪೆಟ್ಟಿಗೆಯ ತಳದಲ್ಲಿ ಅಂಟಿಸಿ ಪುಡಿ ರೂಪದಲ್ಲಿ ಚಿನ್ನ ಸಾಗಿಸುತ್ತಿರುವುದನ್ನು ಪತ್ತೆ ಮಾಡಲಾಗಿದೆ. 1,429 ಗ್ರಾಂ ಚಿನ್ನದ ಆಭರಣಗಳು ಮತ್ತು 478 ಗ್ರಾಂ ತೂಕದ ಕೇಸರಿ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ಬೌನ್ಸರ್ ಜತೆ ಪೊಲೀಸರ ಸಭೆ, ಇದೇ ಮೊದಲು!! ಬೌನ್ಸರ್’ಗಳಿಗೆ ನೀಡಿದ ಕಿವಿಮಾತೇನು? ಪಡೆದುಕೊಂಡ ಸಲಹೆಗಳೇನು?

ಹೊಸ ವರ್ಷ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಹೆಚ್ಚಿನ ಭದ್ರತೆಗಾಗಿ ಬೆಂಗಳೂರು ಕೇಂದ್ರ…

1 of 2