ರಾಜ್ಯ ವಾರ್ತೆ

ಕೆ.ಎಸ್.ಆರ್.ಟಿ.ಸಿ. – ಕೆನರಾ ಬ್ಯಾಂಕ್ ಒಡಂಬಡಿಕೆ|ನಿಗಮದ ನೌಕರರಿಗೆ ಪ್ರೀಮಿಯಂ ರಹಿತ 1 ಕೋಟಿ ರೂ. ಅಪಘಾತ ವಿಮಾ ಯೋಜನೆ

ಕೆ.ಎಸ್.ಆರ್.ಟಿ.ಸಿ. - ಕೆನರಾ ಬ್ಯಾಂಕ್ ಒಡಂಬಡಿಕೆ ನಿಗಮದ ನೌಕರರಿಗೆ ಪ್ರೀಮಿಯಂ ರಹಿತ 1 ಕೋಟಿ ರೂ. ಅಪಘಾತ ವಿಮಾ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಮತ್ತು ಮುಜರಾಯಿ ಖಾತೆಯ ಸಚಿವರಾದ ಶ್ರೀ,ರಾಮಲಿಂಗಾರೆಡ್ಡಿರವರ ಅಧ್ಯಕ್ಷತೆಯಲ್ಲಿ ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಂ.ರಾಚಪ್ಪ ಮತ್ತು ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ,ವಿಜಯಕುಮಾರ್ ಅವರು  ಒಡಂಬಡಿಕೆ ವಿನಿಮಯ ಮಾನ್ಯ ಸಾರಿಗೆ ಸಚಿವರ ಸಮ್ಮುಖದಲ್ಲಿ ಮಾಡಿಕೊಳ್ಳಲಾಯಿತು. 

ಸದರಿ ಒಡಂಬಡಿಕೆಯಲ್ಲಿ ನಿಗಮದ ನೌಕರರ ವೇತನ ಖಾತೆಗಳನ್ನು ಕೆನರಾ ಬ್ಯಾಂಕಿನ “ಪೇ-ರೋಲ್ ಪ್ಯಾಕೇಜ್ ಸ್ಕೀಮ್” ಅಡಿಯಲ್ಲಿ ತೆರೆದು ಸದರಿ ವಿಮಾ ಸೌಲಭ್ಯವನ್ನು ಎಲ್ಲಾ ನೌಕರರು ಶುಲ್ಕ ರಹಿತವಾಗಿ ಪಡೆಯಬಹುದಾಗಿರುತ್ತದೆ.

SRK Ladders

ಮಾನ್ಯ ಸಚಿವರು ನಿಗಮದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತದಿಂದಾಗಿ ಆಗುತ್ತಿರುವ ಸಾವು-ನೋವುಗಳ ಪ್ರಮಾಣವನ್ನು ಗಮನಿಸಿ,ನಿಗಮವು ನೌಕರರ ವೈಯಕ್ತಿಕ ಮತ್ತು ಕರ್ತವ್ಯ ನಿರತ ಸಮಯದಲ್ಲಿ  ಅಪಘಾತದಿಂದಾಗಿ ನೌಕರರು ನಿಧನರಾದಲ್ಲಿ ರೂ.1.00ಕೋಟಿ ಗಳ ಅಪಘಾತ ವಿಮೆಯ ಪರಿಹಾರ ಮೊತ್ತವನ್ನು ಹಾಗೂ ಡೆಬೀಟ್ ಕಾರ್ಡ  ಹೊಂದಿದಲ್ಲಿ ರೂ.6.00ಲಕ್ಷ ದಿಂದ ರೂ.14.00ಲಕ್ಷ ಹಾಗೂ  ಪ್ರೀಮಿಯಂ ರಹಿತ ರೂ.1.00ಲಕ್ಷ  ದಿಂದ ರೂ.6.00 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ನಾಮನಿರ್ದೇಶಿತರಿಗೆ ವಿತರಿಸಲಾಗುವುದುವೆಂದು ತಿಳಿಸಿದರು.

 ಅಪಘಾತದಿಂದಾಗಿ ಅಂಗನ್ಯೂನ್ಯತೆ ಉಂಟಾದಲ್ಲಿ ಗಣನೀಯ ಮೊತ್ತದಷ್ಟು ಪರಿಹಾರ ಮೊತ್ತವನ್ನು ನೌಕರರಿಗೆ ದೊರಕಿಸಿಕೊಡುವ ಯೋಜನೆಯನ್ನು ರೂಪಿಸಿರುವುದಕ್ಕೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. 

ಕ.ಕ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ, ವಿತವ್ಯಯ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ, ನೌಕರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿರುತ್ತದೆ. ನಿಗಮದಲ್ಲಿ ಈಗಾಗಲೇ ಎಸ್.ಬಿ.ಐ ಬ್ಯಾಂಕಿನಲ್ಲಿ, ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಅಪಘಾತ ವಿಮೆಗೆ ಒಳಪಟ್ಟಿರುತ್ತಾರೆ. 

ಸದರಿ ಬ್ಯಾಂಕುಗಳನ್ನು ಹೊರತುಪಡಿಸಿ ಕೆನರಾ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ಸುಮಾರು 3000 ನೌಕರರಿಗೂ ಕೂಡ ಅಪಘಾತ ವಿಮೆಯ ಸೌಲಭ್ಯವನ್ನು ವಿಸ್ತರಿಸುವುದು ಅವಶ್ಯಕತೆ ಇರುವುದನ್ನು ಮನಗಂಡು ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗಮದ ನೌಕರರಿಗೆ ಅಪಘಾತ ವಿಮೆ ಸೌಲಭ್ಯವನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು. ಅಪಘಾತ ಹೊರತುಪಡಿಸಿ, ಇತರೇ ನೈರ್ಸಗಿಕ ಸಾವುಗಳಿಗೆ ಕೆನರಾ ಬ್ಯಾಂಕಿನವರು ಪ್ರೀಮಿಯಂ ರಹಿತ ರೂ.6.00 ಲಕ್ಷಗಳವರೆಗೆ ಉಚಿತ “Term Insurance” ಪಾಲಿಸಿಯನ್ನು ನೀಡುತ್ತಾರೆ ಅಲ್ಲದೆ ನೌಕರರ ಮಕ್ಕಳ ವಿಧ್ಯಾಬ್ಯಾಸ, ಗೃಹ ಸಾಲ ಹಾಗೂ ವೈಯಕ್ತಿಕ ಮತ್ತು ವಾಹನ ಸಾಲಗಳಲ್ಲಿ ವಿಶೇಷ ಬಡ್ಡಿ ದರವನ್ನು ನೀಡುತ್ತಾರೆಂದು ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರವರು ವಿವರಿಸಿದರು.

ಸದರಿ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ವಕ್ಫ್ ಬೋರ್ಡ್ ಹೆಸರಿನಲ್ಲಿ ಎಷ್ಟು ಜಾಗವಿದೆ? ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್  ಹೇಳಿಕೆ ವೈರಲ್!!

ವಕ್ಫ್‌ ಬೋರ್ಡ್ ಹೆಸರಿನಲ್ಲಿ ಒಂದು ಎಕರೆ ಬಿಡಿ ಒಂದಿಂಚು ಭೂಮಿಯೂ ಇಲ್ಲ. ಈ ಆಸ್ತಿಗಳು ದರ್ಗಾ,…

ಕರ್ನಾಟಕ ನಿವೃತ್ತ  ನೌಕರರ ರಾಜ್ಯಮಟ್ಟದ ಪ್ರತಿಭಟನಾ ಸಮಾವೇಶ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಸಲು ಹಾಗೂ ಆರ್ಥಿಕ ಸೌಲಭ್ಯವನ್ನು ನೀಡುವಲ್ಲಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ನಡೆಸುತ್ತಿರುವ…

1 of 2