ರಾಜ್ಯ ವಾರ್ತೆ

ಯುವ ಐಪಿಎಸ್‌ ಅಧಿಕಾರಿ ಮೃತ್ಯು!!

ಹಾಸನ: ಟೈ‌ರ್ ಸ್ಪೋಟಗೊಂಡು ಜೀಪು ನಿಯಂತ್ರಣ ತಪ್ಪಿಜೀಪ್ ರಸ್ತೆ ಬದಿಗೆ ಉರುಳಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್  ಹರ್ಷವರ್ಧನ್‌ (25) .ಮೃತ ದುರ್ದೈವಿ. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಸೋಮವಾರ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. 

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಟೈ‌ರ್ ಸ್ಪೋಟಗೊಂಡು ಜೀಪು ನಿಯಂತ್ರಣ ತಪ್ಪಿ

akshaya college

ಜೀಪ್ ರಸ್ತೆ ಬದಿಗೆ ಉರುಳಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ 

ಹರ್ಷವರ್ಧನ್‌ (25) .ಮೃತ ದುರ್ದೈವಿ. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಸೋಮವಾರ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಮೈಸೂರಿನ ದಕ್ಷಿಣ ವಲಯ ಐಜಿ ಅವರ ಬಳಿ ವರದಿ ಮಾಡಿಕೊಂಡು ಹಾಸನಕ್ಕೆ ಜೀಪ್ ನಲ್ಲಿ ಬರುವಾಗ ಕಿತ್ತಾನೆ ಬಳಿ ಸಂಜೆ 4.30 ರ ವೇಳೆಗೆ ಜೀಪ್ ನ ಟೈರ್ ಸ್ಫೋಟವಾದ ಕಾರಣ ಜೀಪ್ ಮೂರು ಸುತ್ತು ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದಿತ್ತು.

ಜೀಪ್ ಚಾಲಕ ಮಂಜೇಗೌಡರಿಗೂ ಗಾಯಗಳಾಗಿದ್ದು, ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶೂನ್ಯ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಕರೆದೊಯ್ಯುವ ಚಿಂತನೆ ಮಾಡಿ ಆಂಬ್ಯುಲೆನ್ಸ್‌ ಕರೆಸಿದ್ದರು. ಏನೆಲ್ಲ ಪ್ರಯತ್ನ ಮಾಡಿದರೂ ವಿಧಿಯ ಲೀಲೆ ಹರ್ಷಬರ್ಧನ್ ಪ್ರಾಣಪಕ್ಷಿ ಹಾರಿಹೋಯಿತು.

ಮೂಲತಃ ಬಿಹಾರದ ಹರ್ಷವರ್ಧನ್ ಮಧ್ಯಪ್ರದೇಶದ ರೇವಾಜಿಲ್ಲೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸ್‌ ಮೂಲ ತಿಳಿಸಿದೆ. ಮಧ್ಯಪ್ರದೇಶದ ಐಐಟಿಯಲ್ಲಿ ಡಿಎವಿಇ ಎಂಜಿನಿಯರಿಂಗ್ ಪದವಿ ಪಡೆದು 2022-23 ರ ಯುಪಿಎಸ್‌ಇ ಪರೀಕ್ಷೆಯಲ್ಲಿ 153ನೇ ರ್ಯಾಂಕ್ ಪಡೆದು ಐಪಿಎಸ್ ಬ್ಯಾಚ್ ನಲ್ಲಿ ತೇರ್ಗಡೆ ಹೊಂದಿದ್ದ ಇವರು ಕರ್ನಾಟಕ ಕೇಡರ್ ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು.

ಮೃತರ ತಂದೆ ಕೂಡ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲ ತಿಳಿಸಿದೆ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts