ಸಂಶೋಧನೆ ವೇಳೆ ಮಣ್ಣು ಕುಸಿತ; ಪಿಎಚ್‌ಡಿ ವಿದ್ಯಾರ್ಥಿನಿ ಜೀವಂತ ಸಮಾಧಿ!! ಪ್ರೊಫೆಸರ್ ಸ್ಥಿತಿ ಗಂಭೀರ!!
G L Acharya Jewellers
ರಾಜ್ಯ ವಾರ್ತೆ

ಸಂಶೋಧನೆ ವೇಳೆ ಮಣ್ಣು ಕುಸಿತ; ಪಿಎಚ್‌ಡಿ ವಿದ್ಯಾರ್ಥಿನಿ ಜೀವಂತ ಸಮಾಧಿ!! ಪ್ರೊಫೆಸರ್ ಸ್ಥಿತಿ ಗಂಭೀರ!!

Karpady sri subhramanya
ದಿಢೀರ್ ಮಣ್ಣು ಕುಸಿದ ಪರಿಣಾಮ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಜೀವಂತ ಸಮಾಧಿಯಾದ ಘಟನೆ ಗುಜರಾತ್‌ನ ಲೋಥಾಲ್‌ನಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Karpady jathre

ದಿಢೀರ್ ಮಣ್ಣು ಕುಸಿದ ಪರಿಣಾಮ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಜೀವಂತ ಸಮಾಧಿಯಾದ ಘಟನೆ ಗುಜರಾತ್‌ನ ಲೋಥಾಲ್‌ನಲ್ಲಿ ನಡೆದಿದೆ.

SRK Ladders

ಪುರಾತತ್ವ ಇಲಾಖೆಯ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ದಿಢೀರ್ ಮಣ್ಣು ಕುಸಿದು ಐಐಟಿ ದೆಹಲಿಯ ವಿದ್ಯಾರ್ಥಿನಿ ಸುರಭಿ ವರ್ಮಾ(23) ಮೃತಪಟ್ಟಿದ್ದಾರೆ. ಇತರೆ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ದೆಹಲಿ ಐಐಟಿಯ ಪ್ರೊಫೆಸರ್ ಯಮಾ ದೀಕ್ಷಿತ್ (45) ಎಂಬುವರ ಆರೋಗ್ಯ ಗಂಭೀರವಾಗಿದೆ. ದೀಕ್ಷಿತ್ ಐಐಟಿ ದೆಹಲಿಯ ವಾತಾವರಣ ವಿಜ್ಞಾನ ಕೇಂದ್ರದಲ್ಲಿ (ಸಿಎಎಸ್) ಸಹಾಯಕ ಪ್ರಾಧ್ಯಾಪಕರಾಗಿದ್ದು, ಸುರಭಿ ವರ್ಮಾ ಅವರ ನಿರ್ದೇಶನದಲ್ಲಿ ಸಂಶೋಧನೆ ನಡೆಸುತ್ತಿದ್ದರು. ತಂಡದ ಇತರ ಇಬ್ಬರು ಸದಸ್ಯರಾದ ಅಸೋಸಿಯೇಟ್ ಪ್ರೊಫೆಸರ್ ವಿ.ಎನ್.ಪ್ರಭಾಕರ್ ಮತ್ತು ಹಿರಿಯ ಸಂಶೋಧಕಿ ಶಿಖಾ ರೈ ಕೂಡ ಸ್ಥಳದಲ್ಲಿದ್ದರು.

ಅಹಮದಾಬಾದ್‌ನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಪುರಾತನ ಸಿಂಧೂ ನಾಗರಿಕತೆಯ ಸ್ಥಳದಲ್ಲಿ ಸಂಶೋಧನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಐಟಿ ದೆಹಲಿ ಮತ್ತು ಐಐಟಿ ಗಾಂಧಿನಗರದ ತಲಾ ಇಬ್ಬರು ಸೇರಿ ನಾಲ್ವರು ಸಂಶೋಧಕರ ತಂಡ ಅಧ್ಯಯನಕ್ಕಾಗಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ಹರಪ್ಪ ಬಂದರು ನಗರ ಲೋಥಾಲ್‌ಗೆ ತೆರಳಿತ್ತು. ಮಣ್ಣು ಪರೀಕ್ಷೆಗೆಂದು ತೆಗೆದ 10 ಅಡಿ ಆಳದ ಗುಂಡಿಗೆ ನಾಲ್ವರೂ ಇಳಿದಿದ್ದಾರೆ. ಈ ವೇಳೆ ಹಠಾತ್ ಗೋಡೆ ಕುಸಿದು ಮಣ್ಣಿನ ರಾಶಿಯಡಿಯಲ್ಲಿ ಎಲ್ಲರೂ ಹೂತು ಹೋಗಿದ್ದರು.

ಮಣ್ಣು ಜಿಗುಟಾಗಿದ್ದುದರಿಂದ ಮತ್ತು ನೀರಿನ ಮಟ್ಟ ಹಠಾತ್ ಏರಿದ್ದರಿಂದ ಕೆಸರಿನಲ್ಲಿ ಮುಳುಗಿದ್ದ ಸುರಭಿ ವರ್ಮಾ ಹೊರ ಬರಲಾರದೇ ಉಸಿರುಗಟ್ಟಿ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಶೋಧಕಿ ಸುರಭಿ ವರ್ಮಾ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಓಂಪ್ರಕಾಶ್ ಜಾಟ್ ಮಾಹಿತಿ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Kerala Astrologer

Related Posts

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರಾಗಿ ಶ್ರೀನಿವಾಸ್‌ ನಾಯಕ್ ಇಂದಾಜೆ ನೇಮಕ

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್‌ ಪಾಸ್‌ ವಿತರಣೆ ಮಾಡಲು ಸರಕಾರ ರಚಿಸಿರುವ…

ಗೋಬಿಯಲ್ಲೂ ಪತ್ತೆಯಾಯ್ತು ಅಪಾಯಕಾರಿ ರಾಸಾಯನಿಕ! | ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರದಿಂದ ನಾಳೆಯೇ ಘೋಷಣೆ?

ಬೆಂಗಳೂರು: ಜನರ ನೆಚ್ಚಿನ ತಿನಿಸುಗಳಲ್ಲಿ ಒಂದಾದ ಗೋಬಿ ಮಂಚೂರಿ ರಾಜ್ಯದಲ್ಲಿ ಶೀಘ್ರದಲ್ಲೇ…