ರಾಜ್ಯ ವಾರ್ತೆ

ಶಬರಿಮಲೆಗೆ ಹುಬ್ಬಳ್ಳಿ – ಕೊಟ್ಟಾಯಂ ನಡುವೆ ವಿಶೇಷ ರೈಲು!  ರೈಲು ಹಾದು ಹೋಗುವ ನಿಲ್ದಾಣಗಳ ವಿವರ ಇಲ್ಲಿದೆ…

tv clinic
ಶಬರಿಮಲೆ ಯಾತ್ರಿರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆ ಪ್ರಾರಂಭಿಸಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಶಬರಿಮಲೆ ಯಾತ್ರಿರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆ ಪ್ರಾರಂಭಿಸಲಿದೆ.

core technologies

ನವೆಂಬರ್ 19 ರಿಂದ ಜನವರಿ 15ರವರೆಗೆ ಈ ರೈಲು ಸಂಚರಿಸಲಿದೆ ಇದರ ಜೊತೆಗೆ ವಾರಕ್ಕೊಮ್ಮೆ ಹೆಚ್ಚುವರಿ ರೈಲು ಸಹ ಸಂಚರಿಸಲಿದೆ.

akshaya college

ಹುಬ್ಬಳ್ಳಿ ಹಾಗೂ ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ ಒಂಬತ್ತು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಒದಗಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ರೈಲು ಸಂಖ್ಯೆ 07371 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 19 ರಿಂದ 2025ರ ಜನವರಿ 14ರವರೆಗೆ ಸಂಚರಿಸಲಿದೆ.

ರೈಲು ಸಂಖ್ಯೆ 07372 ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 20 ರಿಂದ 2025ರ ಜನವರಿ 15ರವರೆಗೆ ಸಂಚರಿಸಲಿದೆ.

2 ಎಸಿ ಟು ಟೈರ್, 2 ಎಸಿ ತ್ರಿ ಟೈಯರ್, 6 ಕ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಸೇರಿದಂತೆ 18 ಬೋಗಿಗಳನ್ನು ಹೊಂದಿರಲಿದೆ.

ಇನ್ನು ಹೆಚ್ಚುವರಿಯಾಗಿ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಾರಕ್ಕೊಮ್ಮೆ ಒಂದು ವಿಶೇಷ ರೈಲು ಸಂಚರಲಿಸಲಿದೆ. ಈ ರೈಲು ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಹೊರಟು ಮರುದಿನ ಬುಧವಾರ ಕೊಟ್ಟಾಯಂ ತಲುಪಲಿದೆ

ರೈಲು ಸಂಖ್ಯೆ 07371 ಹುಬ್ಬಳ್ಳಿ-ಕೊಟ್ಟಾಯಂ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 3:15ಕ್ಕೆ ಎಸ್ ಎಸ್‌ಎಸ್‌ ಹುಬ್ಬಳ್ಳಿಯಿಂದ ಹೊರಟು ಮರುದಿನ ಬುಧವಾರ ಮಧ್ಯರಾತ್ರಿ 12ಕ್ಕೆ ಕೊಟ್ಟಾಯಂ ತಲುಪಲಿದೆ.

ರೈಲು ಸಂಖ್ಯೆ 07372 ಕೊಟ್ಟಾಯಂ-ಹುಬ್ಬಳ್ಳಿ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯರಾತ್ರಿ 12:50ಕ್ಕೆ ಕೊಟ್ಟಾಯಂನಿಂದ ಹೊರಟು ಮರುದಿನ ಬುಧವಾರ ಮಧ್ಯಾಹ್ನ 03:00ಕ್ಕೆ ಹುಬ್ಬಳ್ಳಿ ತಲುಪಲಿದೆ.

ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸಿಕೆರೆ, ತುಮಕೂರು, ಚಿಕ್ಕಬಣಾವರ, ಎಸ್‌ಎಂಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪೂರು, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಅಲುವ, ಎರ್ನಾಕುಲಂ ಟೌನ್, ಎಟ್ಟುಮನೂರ್ ಮತ್ತು ಕೊಟ್ಟಾಯಂ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟರೆ ಎಚ್ಚರಿಕೆ! ಬೀದಿ ನಾಯಿಗಳಿಗೆ ಆಹಾರ ಹಾಕಲು ಜಾಗ ಗುರುತು

ಸಾಕು ನಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು…

ಬೀದಿ ನಾಯಿಗಳಿಗೆ ಪುನರ್ವಸತಿ : ಜಾಗ ನಿಗದಿ ಮಾಡಿ ಸೂಕ್ತ ವ್ಯವಸ್ಥೆಗೆ ಉಸ್ತುವಾರಿ ಸಚಿವರು ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಅರಣ್ಯ ಆರೋಗ್ಯ…