ರಾಜ್ಯ ವಾರ್ತೆ

ಸಿನೆಮಾ ಮಾದರಿ…! ಟ್ಯಾಂಕರ್‌ನಲ್ಲಿ ಅಕ್ರಮ ಗೋವುಗಳ ಸಾಗಾಟ: 

ಹೊರಗಿನಿಂದ ಪೆಟ್ರೋಲ್ ಟ್ಯಾಂಕರ್ ರೀತಿಯಲ್ಲೇ ಕಾಣುವ ವಾಹನವೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುವ ಗೋ ಕಳ್ಳರ ತಂಡವೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊರಗಿನಿಂದ ಪೆಟ್ರೋಲ್ ಟ್ಯಾಂಕರ್ ರೀತಿಯಲ್ಲೇ ಕಾಣುವ ವಾಹನವೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುವ ಗೋ ಕಳ್ಳರ ತಂಡವೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.

akshaya college

ಜಮ್ಮು ಕಾಶ್ಮೀರದ ನೋಂದಣಿ ಹೊಂದಿರುವ ವಾಹನ ನೋಡಲು ಪೆಟ್ರೋಲ್ ಟ್ಯಾಂಕರ್ ರೀತಿ ಕಾಣುತ್ತಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಇದು ಟ್ಯಾಂಕ‌ರ್ ಅಲ್ಲ, ಬದಲಿಗೆ ಗೋವುಗಳನ್ನು ಅಕ್ರಮವಾಗಿ ಸಾಗಿಸಲು ಮಾಡಿದ ವಾಹನ ಎಂಬುದು ಗೊತ್ತಾಗುತ್ತಿದ್ದಂತೆ ಇದನ್ನು ಕಂಡ ಜನರು ಕೂಡಾ ಬೆಚ್ಚಿ ಬಿದ್ದಿದ್ದಾರೆ.

ಗೋವುಗಳನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುವ ಮಾಹಿತಿ ಪಡೆದ ಜಮ್ಮು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಅಗ ಟ್ಯಾಂಕರ್‌ ಒಳಗೆ ಇರುವುದು ಪೆಟ್ರೋಲ್ ಅಲ್ಲ, ಬದಲಿಗೆ ಗೋವುಗಳು ಎಂಬುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಬುಲ್ಡೋಜರ್ ತರಿಸಿ ಟ್ಯಾಂಕರ್ ನ ಒಂದು ಭಾಗ ತೆರೆದು ನೋಡಿದಾಗ ಟ್ಯಾಂಕರ್ ಒಳಗೆ ದನಗಳ ರಾಶಿ ಕಂಡು ಪೊಲೀಸರೇ ದಂಗಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts