ರಾಜ್ಯ ವಾರ್ತೆ

ಚೆಸ್ ನಮ್ಮ ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ: ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್

ನಮ್ಮ  ವ್ಯಕ್ತಿತ್ವವನ್ನು ಬೆಳೆಸಲು ಚೆಸ್ ಅತ್ಯುತ್ತಮ ಆಟವಾಗಿದೆ ಎಂದು ಚೆಸ್ ನಲ್ಲಿ  16 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಆಗಿರುವ ಕರ್ನಾಟಕದ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್ ಅವರು   ಹೇಳಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ನಮ್ಮ  ವ್ಯಕ್ತಿತ್ವವನ್ನು ಬೆಳೆಸಲು ಚೆಸ್ ಅತ್ಯುತ್ತಮ ಆಟವಾಗಿದೆ ಎಂದು ಚೆಸ್ ನಲ್ಲಿ  16 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಆಗಿರುವ ಕರ್ನಾಟಕದ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್ ಅವರು   ಹೇಳಿದ್ದಾರೆ.

akshaya college

ಅವರು ಭಾನುವಾರ ಕೆಎಸ್‌ಸಿಎ ಮತ್ತು   ಬುಯುಡಿಸಿಎ  ಆಶ್ರಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ  ಐಕ್ಯೂಎಸಿ ಉಪಕ್ರಮದಡಿ ಕೋಳೂರಿನ ಯೂನಿವರ್ಸಲ್ ಕ್ಯಾಂಪಸ್‌ನಲ್ಲಿ ಯೂನಿವರ್ಸಲ್ ಫಸ್ಟ್ ಏಜ್  ವಯೋಮಾನದ ಮಕ್ಕಳ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಚೆಸ್ ನಲ್ಲಿ  ಸಾಧನೆಗೆ ನಿರಂತರ ಅಭ್ಯಾಸ ಅಗತ್ಯ  ಎಂದು ಅವರು ಹೇಳಿದರು

ಯುಜಿಐ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ಮಾತನಾಡಿ, ಚೆಸ್ ವಿಶ್ವಕ್ಕೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ. ಮಕ್ಕಳ ಕೌಶಲ್ಯ, ಮಾನಸಿಕ ಸಾಮರ್ಥ್ಯವನ್ನು ಚುರುಕುಗೊಳಿಸುವುದರೊಂದಿಗೆ ಅವರ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ  ಸಾಧನೆಗೆ  ಚೆಸ್ ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.

9-19 ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಜೆ ಸಂತೋಷ್ ಶೆಟ್ಟಿ, ಯುನಿವರ್ಸಲ್ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಪ್ರದಾದ್, ಐಕ್ಯೂಎಸಿ ಸಂಯೋಜಕಿ ಸುಚಿತ್ರಾ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಜಲಕ್ ಶರ್ಮಾ, ಕೆಡಿಸಿಎ ಸಂಸ್ಥಾಪಕ ಅಧ್ಯಕ್ಷ ಜಯಪಾಲ ಚಂದಾಡಿ,  ಬುಯುಡಿಸಿಎ   ಅಧ್ಯಕ್ಷೆ ಸೌಮ್ಯ ಎಂ.ಯು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts