ರಾಜ್ಯ ವಾರ್ತೆ

ಬದಲಾದ ಬಂಗಾರಾ: ಅವನಲ್ಲ, ಅವಳಾದ ಅನಾಯಾ!!

ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಪುತ್ರ ಆರ್ಯನ್ ಬಂಗಾರ್ ಅವರು ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಗಾಗಿದ್ದು, ತಮ್ಮ ಹೆಸರನ್ನು ಅನಾಯಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಪುತ್ರ ಆರ್ಯನ್ ಬಂಗಾರ್ ಅವರು ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಗಾಗಿದ್ದು, ತಮ್ಮ ಹೆಸರನ್ನು ಅನಾಯಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

23 ವರ್ಷದ ಆರ್ಯನ್ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಭಾರತದ ಮಾಜಿ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯೊಂದಿಗೆ ಮತ್ತು ಅವರ ತಂದೆಯೊಂದಿಗೆ ಕೆಲವು ಹಳೆಯ ಚಿತ್ರಗಳನ್ನು ಪೋಸ್ಟ್ ಲಿಂಗ ಬದಲಾವಣೆಯ ಥೆರಪಿಯೊಂದಿಗೆ ಹಂಚಿಕೊಂಡಿದ್ದಾರೆ.

SRK Ladders

ಶಸ್ತ್ರಚಿಕಿತ್ಸೆಯ 10 ತಿಂಗಳ ನಂತರ, ಕ್ರಿಕೆಟಿಗ ತನ್ನನ್ನು ಅನಾಯಾ ಎಂದು ಗುರುತಿಸಿಕೊಂಡಿದ್ದಾಳೆ. ತನ್ನ ತಂದೆಯಂತೆಯೇ ಕ್ರಿಕೆಟಿಗ, ಆರ್ಯನ್ ಎಡಗೈ ಬ್ಯಾಟರ್ ಮತ್ತು ಸ್ಥಳೀಯ ಕ್ಲಬ್ ಕ್ರಿಕೆಟ್‌ನಲ್ಲಿ ಇಸ್ಲಾಂ ಜಿಮ್ಹಾನಾ ಪರ ಆಡುತ್ತಿದ್ದರು. ಅಲ್ಲದೇ ಲೀಸೆಸ್ಟರ್‌ಶೈರ್‌ನ ಹಿಂಕ್ಲ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸಿದರು.

ಇಂದು, ನಾನು ಯಾವುದೇ ಮಟ್ಟ ಅಥವಾ ವರ್ಗದಲ್ಲಿ ನಾನು ಪ್ರೀತಿಸುವ ಕ್ರೀಡೆಯ ಭಾಗವಾಗಲು ಹೆಮ್ಮೆಪಡುತ್ತೇನೆ, ನನ್ನ ಈ ದಾರಿ ಸುಲಭವಿಲ್ಲ ಆದರೆ ನನ್ನ ನಿಜವಾದ ಆತ್ಮವನ್ನು ಹುಡುಕುವುದು ಎಲ್ಲದಕ್ಕಿಂತ ದೊಡ್ಡ ಗೆಲುವಾಗಿದೆ ಎಂದು ಅನಾಯಾ ಬರೆದುಕೊಂಡಿದ್ದಾರೆ.

ಸದ್ಯ ಅನಯಾ ಮ್ಯಾಂಚೆಸ್ಟರ್‌ನಲ್ಲಿದ್ದು, ಅಲ್ಲಿನ ಕೌಂಟಿ ಕ್ಲಬ್‌ ಒಂದರಲ್ಲಿ ಆಡುತ್ತಿದ್ದಾರೆ. ಎಂದು ಅವರ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿನ ಕ್ಲಿಪ್ ಒಂದರಲ್ಲಿ 145ರನ್ ಗಳಿಸಿದ್ದಾರೆ ಎಂದು ತೋರಿಸುತ್ತದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ಕರ್ನಾಟಕ ನಿವೃತ್ತ  ನೌಕರರ ರಾಜ್ಯಮಟ್ಟದ ಪ್ರತಿಭಟನಾ ಸಮಾವೇಶ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಸಲು ಹಾಗೂ ಆರ್ಥಿಕ ಸೌಲಭ್ಯವನ್ನು ನೀಡುವಲ್ಲಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ನಡೆಸುತ್ತಿರುವ…

1 of 2