ಕರಾವಳಿರಾಜ್ಯ ವಾರ್ತೆ

ಪಿಲಿಕುಳ ಮೃಗಾಲಯದಲ್ಲಿ ಸಂತಸದ ಸಂಭ್ರಮ!!

ಮಂಗಳೂರು: ಪಿಲಿಕುಲ ಮೃಗಾಲಯಕ್ಕೆ ಒರಿಸ್ಸಾದ ನಂದನ್. ಕಾನನ್ ಮೃಗಾಲಯದಿಂದ ಆರು ವರ್ಷದ "ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ, ಮತ್ತು ಅಪರೂಪದ ಪಕ್ಷಿಗಳಾದ ಎರಡು "ಸಿಲ್ವರ್ ಫೆಸೆಂಟ್' ಎರಡು "ಯೆಲ್ಲೋ ಗೋಲ್ಡನ್ ಫೆಸೆಂಟ್" ಗಳು ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಇಂದು ಪಿಲಿಕುಳ ಮೃಗಾಲಯಕ್ಕೆ ಆಗಮಿಸಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಪಿಲಿಕುಲ ಮೃಗಾಲಯಕ್ಕೆ ಒರಿಸ್ಸಾದ ಹೊಸ ಅತಿಥಿಗಳ ಆಗಮನ.

ಮೃಗಾಲಯಕ್ಕೆ ಒರಿಸ್ಸಾದ ನಂದನ್. ಕಾನನ್ ಮೃಗಾಲಯದಿಂದ ಆರು ವರ್ಷದ “ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ, ಮತ್ತು ಅಪರೂಪದ ಪಕ್ಷಿಗಳಾದ ಎರಡು “ಸಿಲ್ವರ್ ಫೆಸೆಂಟ್’ ಎರಡು “ಯೆಲ್ಲೋ ಗೋಲ್ಡನ್ ಫೆಸೆಂಟ್” ಗಳು ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಇಂದು ಪಿಲಿಕುಳ ಮೃಗಾಲಯಕ್ಕೆ ಆಗಮಿಸಿವೆ.

SRK Ladders

ಪಿಲಿಕುಳದಿಂದ ನಾಲ್ಕು “ಕಾಡು ನಾಯಿ/ ಧೋಲ್”, ಅಪರೂಪದ ನಾಲ್ಕು ‘ರೇಟಿಕುಲೆಟೆಡ್ ಹೆಬ್ಬಾವು, ಎರಡು “ಬ್ರಾಹಿಣಿ ಗಿಡುಗಗಳು ಮೂರು “ಏಶಿಯನ ಪಾಮ್ ಸಿವೇಟ, ಎರಡು ‘ಲಾರ್ಜ್ ಇಗರೇಟ್‌ಗಳನ್ನು ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗುವುದು. ವಿನಿಮಯದಲ್ಲಿ ಪಿಲಿಕುಲದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಲ ಮೃಗಾಲಯದಲ್ಲೇ ಜನಿಸಿದವುಗಳಾಗಿದೆ.

ಮೃಗಾಲಯದಲ್ಲಿ ಜೊತೆಯಿಲ್ಲದ ಪ್ರಾಣಿಗಳಿಗೆ ಜೊತೆಗಾಗಿ ಮತ್ತು ಶುದ್ಧ ರಕ್ತ ಸಂಬಂಧ ಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಪಿಲಿಕುಲದಲ್ಲಿ ಮೂರು ಸಿಂಹಗಳಿದ್ದು, ಜೊತೆಗಾರನಾಗಿ ಒಂದು ಗಂಡು ಏಷ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತೀ ಕಡಿಮೆ ಇರುವುದರಿಂದ ದೂರದ ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ.

ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಎರಡು ಪಶುವೈದ್ಯಾಧಿಕಾರಿ ಮತ್ತು ಎಂಟು ಪ್ರಾಣಿ ಪರಿಪಾಲಕರು, ಪ್ರಾಣಿಗಳೊಡನೆ ಅವುಗಳ ಆರೈಕೆ ನೋಡಿಕೊಂಡು ಆಗಮಿಸಿರುತ್ತಾರೆ. ಪ್ರಾಣಿ ವಿನಿಮಯದ ಜವಾಬ್ದಾರಿಯನ್ನು ಎರಡು ಮೃಗಾಲಯಗಳು ಸರಿ ವಹಿಸಿಕೊಳ್ಳಬೇಕಾಗುತ್ತದೆ.

ಪಿಲಿಕುಲ ಮೃಗಾಲಯವು ಸುಮಾರು 1200 ಕ್ಕೂ ಹೆಚ್ಚು ಪ್ರಾಣಿ, ಪಕ್ಷಿ ಮತ್ತು ಉರಗಗಳನ್ನು ಹೊಂದಿದ್ದು ದೇಶದ 18 ಬೃಹತ್‌ ಮೃಗಾಲಯಗಳಲ್ಲಿ ಒಂದಾಗಿದೆ. ಪಂಜಾಬಿನ ಚಟ್ಟಬಿರ್ ಮೃಗಾಲಯ, ಬಾಂಬೆನ ಬೈಕುಳ ಮತ್ತು ಮದರಾಸ್‌ ಕೊಕೊಡೈಲ್ ಬ್ಯಾಂಕ್ ನಿಂದ ಪ್ರಾಣಿ, ಪಕ್ಷಿಗಳ ವಿನಿಮಯದ ಬಗ್ಗೆ ಒಪ್ಪಂದ ನಡೆಯುತ್ತಿದೆ. ವಿಶೇಷವಾಗಿ “ಅನಕೊಂಡ” ಉರಗ, “Humboldt ಪೆಂಗ್ವಿನ್” ಪಕ್ಷಿಗಳನ್ನು ತರಿಸಿ ಪಿಲಿಕುಳ ಮೃಗಾಲಯದಲ್ಲಿ ಪ್ರಯತ್ನಿಸಲಾಗುತ್ತಿದೆ.

Humboldt penguin ಗಳನ್ನು ಮೃಗಾಲಯದಲ್ಲಿ ಸಂರಕ್ಷಣೆ ಮಾಡುವುದಕ್ಕೆ ಅವುಗಳಿಗೆ ವಿಶೇಷವಾದ ಆವರಣಗಳನ್ನು ಸೃಷ್ಟಿಸಬೇಕಾಗುತ್ತದೆ. ಇದಕ್ಕೆ ದುಬಾರಿ ವೆಚ್ಚ ತಗಲುವುದರಿಂದ ಕೆಲವು ದಾನಿಗಳು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿರುತ್ತಾರೆ.

ಅಪರೂಪದ ಪ್ರಾಣಿ ಪಕ್ಷಿಗಳನ್ನು ಮೃಗಾಲಯದಲ್ಲಿ ವೀಕ್ಷಣೆಗೆ ಸೇರಿಸಿದರೆ, ಪಿಲಿಕುಲದ ಆದಾಯವು ಹಲವು ಪಟ್ಟು ಹೆಚ್ಚಾಗಿ, ಮೃಗಾಲಯವನ್ನು ಸ್ವಂತ ನೆಲೆಯಲ್ಲಿ ನಡೆಸಲು ಅನುಕೂಲವಾಗುತ್ತದೆ. ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ  ಅಪರೂಪದ ಪ್ರಾಣಿ ಪಕ್ಷಿಗಳನ್ನು ಮೃಗಾಲಯದಲ್ಲಿ ವೀಕ್ಷಣೆಗೆ ಸೇರಿಸಿದರೆ, ಪಿಲಿಕುಲದ ಆದಾಯವು ಹಲವು ಪಟ್ಟು ಹೆಚ್ಚಾಗಿ, ಮೃಗಾಲಯವನ್ನು ಸ್ವಂತ ನೆಲೆಯಲ್ಲಿ ನಡೆಸಲು ಅನುಕೂಲವಾಗುತ್ತದೆ. ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ (Quarantine Ward) ನಲ್ಲಿ ಇರಿಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವುದು. ಪಿಲಿಕುಲದ ಪ್ರಾಣಿ ವಿನಿಮಯ ಕಾರ್ಯಕ್ರಮದ ಇತಿಹಾಸದಲ್ಲಿಯೇ ಅತೀ ದೂರದಿಂದ ಪ್ರಾಣಿಗಳನ್ನು (ಸರಿ ಸುಮಾರು 2,000 ಕಿಲೋ ಮೀಟರ್) ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗುತ್ತಿದ್ದು ಇದು ಹೊಸ ದಾಖಲೆಯಾಗಿದೆ.ಈ ಹಿಂದೆ ರಾಜಸ್ಥಾನದ ಉದಯಪುರ ಮೃಗಾಲಯದಿಂದ (ಸರಿ ಸುಮಾರು 1,700 ಕಿಲೋ ಮೀಟರ್) ದೂರದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮವನ್ನು ನಡೆಸಿದ್ದು ದಾಖಲೆಯಾಗಿದೆ

.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…

1 of 3