pashupathi
ರಾಜ್ಯ ವಾರ್ತೆ

ಪ್ರಜ್ವಲ್ ಮಾದರಿಯ ಮತ್ತೊಂದು ಪ್ರಕರಣ: ಮಹಿಳೆಯರ 2500 ರಾಸಲೀಲೆ ವಿಡಿಯೋದ ಆರೋಪ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು:  ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕನ ಬಳಿ ಬೇರೆ ಬೇರೆ ಮಹಿಳೆಯರ ಅಶ್ಲೀಲ ವಿಡಿಯೋಗಳು ಇವೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

akshaya college

ಬೆಂಗಳೂರಿನಲ್ಲಿ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ಮ್ಯಾಥ್ಯೂ ಎನ್ನುವಾತನ ವಿರುದ್ಧ ಮಹಿಳೆ ಆರೋಪಿಸಿದ್ದು, ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಮ್ಯಾಥ್ಯೂ ಸೆರೆ ಹಿಡಿದುಕೊಂಡಿದ್ದಾನೆ. ಸುಮಾರು 2500 ವಿಡಿಯೋಗಳಿವೆ ಎಂಬುವುದಾಗಿ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಮ್ಯಾಥ್ಯೂ ವಿರುದ್ಧ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾಳೆ ಎಂದು ತಿಳಿದುಬಂದಿದೆ.

ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು, ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇದಲ್ಲದೇ, ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನು ಸಹ ಮ್ಯಾಥ್ಯೂ ಸೆರೆಹಿಡಿದುಕೊಂಡಿದ್ದು, ಒಟ್ಟು 2500 ವಿಡಿಯೋಗಳು ಆತನ ಬಳಿಯಿವೆ ಎಂಬ ಆರೋಪ ಕೇಳಿಬಂದಿದೆ.

ಸಂತ್ರಸ್ತೆಯ ದೂರಿನ ಪ್ರಕಾರ, ಮ್ಯಾಥ್ಯೂ ತನ್ನ ಖಾಸಗಿ ಕ್ಷಣಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾನೆ. ಈ ಆರೋಪಗಳಿಗೆ ಪುಷ್ಟಿ ನೀಡುವಂತೆ ಕೆಲವು ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳು ಸಂತ್ರಸ್ತೆಯ ಬಳಿಯಿವೆ. ಈ ವಿಡಿಯೋಗಳಲ್ಲಿ ಇತರ ಯುವತಿಯರು ಮತ್ತು ಮಹಿಳೆಯರ ಜೊತೆಗಿನ ದೃಶ್ಯಗಳೂ ಇವೆ ಎಂದು ಹೇಳಲಾಗಿದೆ.

ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿದೆ. ತನ್ನ ಪತಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿರುವ ಈ ಮಹಿಳೆ, ತನ್ನ ಮಗಳು ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಮ್ಯಾಥ್ಯೂ ಪರಿಚಯವಾಗಿದೆ.ವಮ್ಯಾಥ್ಯೂ ಆ ಶಾಲೆಯಲ್ಲಿ ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಪರಿಚಯ ಬೆಳೆದು, ಕೆಲವು ಕಾಲ ಜೊತೆಯಾಗಿ ವಾಸಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯಂತೆ ಇಬ್ಬರು ಚರ್ಚ್‌ನ ಮುಂದೆ ಮದುವೆಯಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ದೈಹಿಕ ಸಂಪರ್ಕದ ಕ್ಷಣಗಳನ್ನು ಮ್ಯಾಥ್ಯೂ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮದುವೆಯಾದ ನಂತರ ಮ್ಯಾಥ್ಯೂ ನ ನಿಜವಾದ ಸ್ವರೂಪ ತಿಳಿದುಬಂದಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ. “ನಾವು ಕೆಲ ವರ್ಷಗಳ ಕಾಲ ಜೊತೆಯಾಗಿದ್ದೆವು. ಆದರೆ, ಒಂದು ರಾತ್ರಿ ನಾನು ಮಲಗಿದ್ದಾಗ ನನ್ನ ಮೊಬೈಲ್ ಸಮೇತ ಆತ ಓಡಿಹೋಗಿದ್ದಾನೆ. ಆ ಮೊಬೈಲ್‌ನಲ್ಲಿ ಈತನ ಕೃತ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಾಕ್ಷಿಗಳಿದ್ದವು ಎಂದು ಸಂತ್ರಸ್ತೆ ಹೇಳಿದ್ದಾಳೆ. ಇನ್ನು ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ತೆಗೆದುಕೊಳ್ಳಲುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದು, ಕೊನೆಗೆ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ಬಳಿಕ ಮಹಿಳೆ ಮಾಡಿರುವ ಆರೋಪದ ಸತ್ಯಾಸತ್ಯತೆ ಆಚೆ ಬರಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

108 ಆ್ಯಂಬುಲೆನ್ಸ್ ಸೇವೆ ಬಲಪಡಿಸಲು ಹೊಸ ಯೋಜನೆ!! ಆಶಾ ಮೆಂಟರ್ಸ್ ಜವಾಬ್ದಾರಿ ಆರೋಗ್ಯ ಕೇಂದ್ರದ ಸಿಬಂದಿ ಹೆಗಲಿಗೆ!

108 ಆರೋಗ್ಯ ಕವಚ ಸೇವೆಯನ್ನು ಜಿವಿಕೆ ಸಂಸ್ಥೆಯಿಂದ ಹಿಂಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…