ರಾಜ್ಯ ವಾರ್ತೆ

ಮಂಗಳೂರು:ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ‘ಬಗ್ಗಿ ಆ್ಯಂಬುಲೆನ್ಸ್’ ಸೇವೆ ಆರಂಭ!!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರಿನ ವೆಸ್ಲಾಕ್ ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ನೂತನ ಸರ್ಜಿಕಲ್ ಬ್ಲಾಕ್ ಬಳಿಕ ಶಸ್ತ್ರಚಿಕಿತ್ಸೆಯ ಬಳಿಕ ವಾರ್ಡ್‌ಗೆ ಶಿಫ್ಟ್ ಮಾಡಲು ಕೊಂಚ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಮಂಗಳೂರಿನ ವೆನ್ಸಾಕ್ ಜಿಲ್ಲಾಸ್ಪತ್ರೆಯಲ್ಲಿ ‘ಬಗ್ಗಿ ಆ್ಯಂಬುಲೆನ್ಸ್’ ಸೇವೆ ಆರಂಭಗೊಂಡಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ 7 ಲಕ್ಷ ರೂ. ಅನುದಾನದಲ್ಲಿ ಈ ಬಗ್ಗಿ ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಲಾಗಿದೆ. ಚಿಕಿತ್ಸೆ ಪಡೆಯಲು ಆಗಮಿಸುವ ರೋಗಿಗಳು, ಅಸೌಖ್ಯವಿರುವವರು, ವೃದ್ಧರನ್ನು ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಸುಲಭವಾಗಿ ತೆರಳಲು ಈ ಬಗ್ಗಿ ಆ್ಯಂಬುಲೆನ್ಸ್ ಅನುಕೂಲವಾಗಲಿದೆ.

akshaya college

ರೋಗಿಗಳ ಶಿಫ್ಟ್ ಗೆ ಸಹಾಯ

ಸರಕಾರಿ ವೆನ್ಸಾಕ್ ಆಸ್ಪತ್ರೆಯಲ್ಲಿ ನೋಂದಣಿ ವಿಭಾಗ ಹೊರರೋಗಿ ವಿಭಾಗ, ವಾರ್ಡ್, ಸ್ಕ್ಯಾನಿಂಗ್, ಎಕ್ಸ್ರೆ ಇತ್ಯಾದಿ ವ್ಯವಸ್ಥೆಗಳು ಆಸ್ಪತ್ರೆಯ ವಿವಿಧ ಕಟ್ಟಡಗಳಲ್ಲಿದೆ. ಆದ್ದರಿಂದ ರೋಗಿಗಳನ್ನು ಅವಶ್ಯಕತೆ ಇರುವೆಡೆಗೆ ವೀಲ್ ಚೇರ್ ಗಳಲ್ಲಿ ಆಸ್ಪತ್ರೆಯ ಹೊರಗಿನ ರಸ್ತೆಯಲ್ಲಿ ಕರೆದುಕೊಂಡು ಹೋಗಲು, ಶಿಫ್ಟ್ ಮಾಡಲು ಕಷ್ಟವಾಗುತ್ತಿತ್ತು. ಅಲ್ಲದೆ ಆಸ್ಪತ್ರೆಯಲ್ಲಿ ಒಂದೇ ಆಂಬ್ಯುಲೆನ್ಸ್ ಇರುವ ಕಾರಣ ಕಾಯುವ ಸ್ಥಿತಿ ಎದುರಾಗುತ್ತಿತ್ತು. ಇದೇ ಕಾರಣಕ್ಕೆ”ಬಗ್ಗಿ ಆ್ಯಂಬುಲೆನ್ಸ್” ರೋಗಿಗಳಿಗೆ ಸಹಾಯಕ್ಕೆ ಬರಲಿದೆ.

ಎಲೆಕ್ಟ್ರಿಕ್ ಗಾಡಿ

ಲಿಥಿಯನ್ ಈಯೋನ್ ಬ್ಯಾಟರಿ ಮಾದರಿಯ ಸ್ಟೀಲ್ ಸ್ಟೆಚರ್ ಸಹಿತ ಎಲೆಕ್ನಿಕ್ ಆ್ಯಂಬುಲೆನ್ಸ್ ಈ ಬಗ್ಗಿಯಲ್ಲಿದೆ. ರೋಗಿಯೊಬ್ಬಮಲಗಿ ಸಂಚರಿಸಲು, ಚಾಲಕ ಮತ್ತು ರೋಗಿಯ ಕಡೆಯವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 400 ರಿಂದ 500 ಕೆ.ಜಿ. ಭಾರ ಹೊರುವ ಸಾಮಾರ್ಥ್ಯ ಹೊಂದಿದೆ.

ವಿದ್ಯುತ್ ಚಾಲಿತ ಈ ಬಗ್ಗಿ ಆ್ಯಂಬುಲೆನ್ಸ್ ಒಂದು ಬಾರಿ ಸಂಪೂರ್ಣ ಚಾರ್ಜ್ ಆದಲ್ಲಿ 45-50 ಕಿ.ಮೀ. ಸಂಚರಿಸುವ ಸಾಮಾರ್ಥ್ಯವಿದೆ. ಗಂಟೆಗೆ ಸುಮಾರು 25 ಕಿ.ಮೀ. ವೇಗ ಹೊಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts