ರಾಜ್ಯ ವಾರ್ತೆ

ನೀರು ಕುಡಿಯಲು ಪ್ರೋತ್ಸಾಹ; ರಾಜ್ಯದ ಶಾಲೆಗಳಲ್ಲೂ “ವಾಟರ್ ಬೆಲ್” ಅನುಷ್ಠಾನ!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಶಾಲಾ ಅವಧಿಯಲ್ಲಿ ಮಕ್ಕಳಿಗೆ ನೀರು ಕುಡಿಯೋಕೆ ಉತ್ತೇಜಿಸಲು ರಾಜ್ಯದ ಶಾಲೆಗಳಲ್ಲಿ ‘ವಾಟ‌ರ್ ಬೆಲ್’ ಕಾರ್ಯಕ್ರಮ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ.

chennai-shopping
Shani-pooja

ಕೇರಳ ಶಾಲೆಗಳಲ್ಲಿ ಈಗಾಗಲೇ ‘ವಾಟರ್ ಬೆಲ್’ ಕಾರ್ಯಕ್ರಮ ಅನುಷ್ಠಾನದಲ್ಲಿದೆ. ದಿನಕ್ಕೆ ಎರಡು ಬಾರಿ ಕೇರಳದ ಶಾಲೆಗಳಲ್ಲಿ ವಾಟರ್ಅ ಬೆಲ್ ಆಗಲಿದೆ. ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2:30 ರ ಅವಧಿಯಲ್ಲಿ ವಾಟರ್ ಬೆಲ್ ಆಗುತ್ತದೆ. ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯಬೇಕು.

ಕೇರಳದಲ್ಲಿ ಪ್ರಾರಂಭ ಆಗಿರುವ ವಾಟರ್ ಬೆಲ್ ಕಾರ್ಯಕ್ರಮ ಕರ್ನಾಟಕದ ಶಾಲೆಗಳಲ್ಲೂ ಅನುಷ್ಠಾನಕ್ಕೆ ತರಲು ಚಿಂತನೆ ನಡೆದಿದೆ. ಈಗಾಗಲೇ ಶಿಕ್ಷಣ ಇಲಾಖೆ ಹಂತದಲ್ಲಿ ವಾಟರ್ ಬೆಲ್ ಜಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶೀಘ್ರವೇ ರಾಜ್ಯದ ಶಾಲೆಗಳಲ್ಲೂ ಈ ಕಾರ್ಯಕ್ರಮ ಅನುಷ್ಠಾನ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಶಾಲೆಗಳಲ್ಲಿ ಮಕ್ಕಳು ಹೆಚ್ಚು ನೀರು ಕುಡಿಯಲು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶ.

ಮಕ್ಕಳು ಹೆಚ್ಚು ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ, ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು.

ಕೇರಳದಲ್ಲಿ ದಿನಕ್ಕೆ ಎರಡು ಬಾರಿ ವಾಟರ್ ಬೆಲ್ ಮಾಡೋ ಮೂಲಕ ಮಕ್ಕಳು ನೀರು ಕುಡಿಯಲು ಉತ್ತೇಜಿಸಲಾಗುತ್ತಿದೆ.

ದಿನಕ್ಕೆ 2-3 ಬಾರಿ ವಾಟರ್ ಬೆಲ್ ಹೊಡೆದು ಮಕ್ಕಳಿಗೆ ಆರೋಗ್ಯದ ಕಾಳಜಿ ಜತೆ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts