ರಾಜ್ಯ ವಾರ್ತೆ

ಸಲೂನ್‌, ಬ್ಯೂಟಿ ಪಾರ್ಲ‌ರ್ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಆರೋಗ್ಯ ಇಲಾಖೆ ಚಿಂತನೆ!!

ಈ ಸುದ್ದಿಯನ್ನು ಶೇರ್ ಮಾಡಿ

ಸಲೂನ್‌ ಗಳಿಗೆ ಬ್ಯೂಟಿ ಪಾರ್ಲ‌್ರಗಳಿಗೆ ಹೋಗಿ ಫೇಶಿಯಲ್ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಚಿಕಿತ್ಸೆಗಳನ್ನು ಜನರು ಪಡೆಯುತ್ತಾರೆ. ಆದರೆ, ಅದೆಷ್ಟೋ ಕಡೆಗಳಲ್ಲಿ ಪರಿಣತರಿಲ್ಲದೆಯೇ, ಪಾರ್ಲರ್ ಹೆಸರಿನಲ್ಲಿ ಶಾಪ್‌ಗಳು ಇದೀಗ ನಾಯಿಕೊಡೆಗಳಂತೆ ಎತ್ತಿವೆ. ಇವುಗಳಲ್ಲಿ ಯಾವುದು ನಕಲಿ, ಯಾವುದು ಅಸಲಿ ಎಂಬುದು ತಿಳಿಯದೆ ಜನರು ಗೊಂದಲದಲ್ಲಿದ್ದಾರೆ. ಇನ್ನು ರಾಜಧಾನಿ ಬೆಂಗಳೂರಿನ ಕಥೆಯಂತು ಕೇಳೋದೇ ಬೇಡ, ಬ್ಯೂಟಿ ಪಾರ್ಲರ್, ಸಲೂನ್ ಸೆಂಟರ್, ಸ್ಕಿನ್ ಸೆಂಟರ್ ಎಂದು ಬೇಕಾಬಿಟ್ಟಿ ಚಿಕಿತ್ಸೆ ನೀಡುವ ಅನೇಕ ಶಾಪ್‌ಗಳಿವೆ.ಇದೀಗ ಕೆಲವು ನಕಲಿ ಸಲೂನ್‌ಗಳಿಗೆ ಬ್ಯೂಟಿ ಪಾರ್ಲ‌್ರಗಳಿಗೆ ಬ್ರೇಕ್ ಬೀಳಲಿದೆ.

akshaya college

ಕೆಲವು ಬ್ಯೂಟಿ ಪಾರ್ಲ‌ರ್ಗಗಳು ಹಾನಿಕಾರಕ ಸ್ಟೀರಾಯ್ಡ್ ಬೇಸ್ಟ್ ಔಷಧ, ಕ್ರೀಮ್ ಹಾಗೂ ಕಾಸ್ಕೆಟಿಕ್ಸ್ ಬಳಕೆ ಮಾಡಿಕೊಂಡು ಜನರ ಆರೋಗ್ಯಕ್ಕೆ ಕುತ್ತು ತರುತ್ತಿವೆ. ಸಲೂನ್‌ ಸೆಂಟರ್‌ಗಳಲ್ಲಿಯೂ ಕೂಡಾ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಪ್ರಾಕ್ಟಿಸ್‌ಗಳನ್ನು ಮಾಡಿ ಜನರ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಎಂಬಿಬಿಎಸ್ ಪ್ರಾಕ್ಟಿಸ್ ಮಾಡದೇ ಬ್ಯೂಟಿ ಕ್ಲಿನಿಕ್‌ಗಳಲ್ಲಿ ಕೆಲವರು ರಾಸಾಯನಿಕ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪವಿದ್ದು, ಪ್ಲಾಸ್ಟಿಕ್ ಸರ್ಜರಿ ಯಲ್ಲಿ MD, DNB, DVL, DDV Mch,ಪ್ಲಾಸ್ಟಿಕ್ ಸರ್ಜರಿ, ಪಿಜಿ ಅರ್ಹತೆ ಇಲ್ಲದೇ ಚಿಕಿತ್ಸೆ ಕೊಡುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಎಲ್ಲಾ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಸಲೂನ್ ಸೆಂಟರ್, ಮಸಾಜ್ ಸೆಂಟರ್ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಮುಂದಾಗಿದೆ. ಸಾಕಷ್ಟು ದೂರುಗಳು ಬಂದ ಕಾರಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಒಟ್ಟಿನಲ್ಲಿ, ಮಾರ್ಗಸೂಚಿಗೆ ಎಲ್ಲಾ ರೀತಿಯ ತಯಾರಿ ಮಾಡಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಲೂನ್, ಬ್ಯೂಟಿಪಾರ್ಲ‌್ರಗಳಿಗೆ ನಿಯಮ ಜಾರಿಯಾಗಲಿದೆ. ಉಲ್ಲಂಘಿಸಿದಲ್ಲಿ, ಪರವಾನಗಿ ರದ್ದು ಮಾಡಲು ಕೂಡಾ ಚಿಂತನೆ ನಡೆಯುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts