ರಾಜ್ಯ ವಾರ್ತೆ

ಬೀದಿನಾಯಿ ಮುಕ್ತ ಪ್ರದೇಶ – ಆದೇಶಕ್ಕೆ ತಡೆ | ಪ್ರಾಣಿ ಪ್ರಿಯರಿಗೆ ಸಂತಸ ನೀಡಿದ ಸುಪ್ರೀಂ ನಡೆ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ : ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಆಗಸ್ಟ್ 8ರಂದು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಾಡಿಸಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ಲಸಿಕೆ ನಂತರ ನಾಯಿಗಳನ್ನು ಅದೇ ಪ್ರದೇಶಕ್ಕೆ ಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

akshaya college

ಈ ತೀರ್ಪು ಪ್ರಾಣಿ ಪ್ರಿಯರಿಗೆ ಸಮಾಧಾನವನ್ನು ತಂದಿದೆ. ಆದರೆ, ರೇಬೀಸ್ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ಹೊಂದಿರುವ ನಾಯಿಗಳಿಗೆ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯಗಳಲ್ಲಿ ಇರಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

“ದಿಲ್ಲಿಯ ಎಲ್ಲಾ ಪ್ರದೇಶಗಳನ್ನು ಬೀದಿನಾಯಿ ಮುಕ್ತಗೊಳಿಸಬೇಕೆಂಬ ಇತ್ತೀಚಿನ ಆದೇಶಕ್ಕೆ ತಡೆಹಿಡಿಯಲಾಗಿದೆ. ಅವುಗಳಿಗೆ ಜಂತುಹುಳು ನಿವಾರಣಾ ಲಸಿಕೆ ಹಾಕಿ ಅದೇ ಪ್ರದೇಶಕ್ಕೆ ವಾಪಾಸ್ಸು ಬಿಡಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣವನ್ನು ವಿವರವಾಗಿ ಆಲಿಸಿದ ನಂತರ ಈ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ರಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠವು ಆಗಸ್‌ 8ರ ಆದೇಶಕ್ಕೆ ಹಲವಾರು ಮಾರ್ಪಾಡುಗಳನ್ನು ಸೂಚಿಸಿದೆ.

ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದನ್ನು ಅನುಮತಿಸಲಾಗುವುದಿಲ್ಲ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಕಟ್ಟುನಿಟ್ಟಾಗಿ ಹೇಳಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts