pashupathi
ರಾಜ್ಯ ವಾರ್ತೆ

ಬಸ್ಸಲ್ಲಿ ಏನೆಲ್ಲಾ ಗೂಡ್ಸ್ ಕೊಂಡೊಯ್ಯಬಹುದು: ವಿವರ ನೀಡಿದ KSRTC

tv clinic

ಈ ಸುದ್ದಿಯನ್ನು ಶೇರ್ ಮಾಡಿ

KSRTC: ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ತಮಗೆ ಮಾತ್ರ ಫ್ರೀ ಇರುವುದು ಅಲ್ಲದೆ ತಮ್ಮ ಲಗೇಜ್ ಗಳಿಗೂ ಕೂಡ ಫ್ರೀ ಕೊಡಬೇಕೆಂದು ಅನೇಕ ಮಹಿಳೆಯರು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿಯುತ್ತಾರೆ. ಕೆಲವೊಮ್ಮೆ ಪುರುಷರು ಕೂಡ ಈ ರೀತಿಯ ಕಿರಿಕ್ ಮಾಡುವುದು. ಇದೀಗ ಈ ಎಲ್ಲಾ ಸಮಸ್ಯೆಗಳಿಗೂ ತೆರೆ ಎಳೆಯಲು ಸಾರಿಗೆ ಸಂಸ್ಥೆ ನಿರ್ಧರಿಸಿದ್ದು ಲಗೇಜ್ ವಿಚಾರವಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

akshaya college

ಹೌದು, ಕೆಎಸ್‌ಆರ್ಟಿಸಿ ಸಂಸ್ಥೆಯು ಬಸ್ನಲ್ಲಿ ಎಷ್ಟು ಲಗೇಜ್ ಕೊಂಡೊಯ್ಯಬಹುದು ಎಂಬುದರ ಕುರಿತು ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದರಲ್ಲಿ ವಾಷಿಂಗ್ ಮೆಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಪಾತ್ರೆ, ಕಬ್ಬಿಣದ ಪೈಪ್, ಬೆಕ್ಕು, ನಾಯಿ, ಮೊಲವನ್ನು ಸಾಗಿಸಬಹುದಾಗಿದೆ ಎಂಬುದಾಗಿ ತಿಳಿಸಲಾಗಿದೆ.

ಕೆಎಸ್‌ಆರ್‌ಟಿಸಿಯ ಹೊಸ ನಿಯಮಗಳ ಪ್ರಕಾರ, ಪ್ರತಿ ವಯಸ್ಕ ಪ್ರಯಾಣಿಕನಿಗೆ 30 ಕೆ.ಜಿ. ಮತ್ತು ಮಕ್ಕಳಿಗೆ 15 ಕೆ.ಜಿ. ತೂಕದ ವೈಯಕ್ತಿಕ ಲಗೇಜ್‌ಗೆ ಯಾವುದೇ ಶುಲ್ಕವಿಲ್ಲದೆ ಸಾಗಿಸಲು ಅವಕಾಶವಿದೆ. ಈ ಉಚಿತ ಲಗೇಜ್‌ನಲ್ಲಿ ಬಟ್ಟೆ, ಪುಸ್ತಕಗಳು, ಪ್ರಯಾಣಕ್ಕೆ ಅಗತ್ಯವಾದ ಆಹಾರ, ಮತ್ತು ಇತರ ವೈಯಕ್ತಿಕ ವಸ್ತುಗಳು ಸೇರಿವೆ. ಆದರೆ, 30 ಕೆ.ಜಿ.ಗಿಂತ ಹೆಚ್ಚಿನ ತೂಕದ ಲಗೇಜ್‌ಗೆ, ವಾಣಿಜ್ಯ ವಸ್ತುಗಳಿಗೆ, ಮತ್ತು ಭಾರೀ ವಸ್ತುಗಳಾದ ಫ್ರಿಡ್ಜ್, ವಾಷಿಂಗ್ ಮಿಷಿನ್, ಟೈರ್‌ಗಳು, ಕಬ್ಬಿಣದ ಪೈಪ್‌ಗಳು, ಅಲ್ಯೂಮಿನಿಯಂ ಪೈಪ್‌ಗಳು, ಮತ್ತು ಖಾಲಿ ಕಂಟೈನರ್‌ಗಳಿಗೆ ಶುಲ್ಕವನ್ನು ವಿಧಿಸಲಾಗುತ್ತದೆ.

ಯಾವುದಕ್ಕೆ ಎಷ್ಟು ದರ?

ಟೇಬಲ್ ಫ್ಯಾನ್, ಹಾರ್ಮೋನಿಯಂ, ಟಿವಿ, ಕಂಪ್ಯೂಟ‌ರ್ ಮಾನಿಟರ್, ಸಿಪಿಯು, ಬ್ಯಾಟರಿ, 25 ಲೀಟರ್ ಖಾಲಿ ಕಂಟೈನರ್ ಗಳನ್ನು 20 ಕೆಜಿವರೆಗೆ 1 ಯೂನಿಟ್ ಎಂಬುದಾಗಿ ಪರಿಗಣಿಸಲಾಗುತ್ತದೆ. ರೇಷ್ಮೆ ಗೂಡನ್ನು ಪ್ರತಿ 15 ಕೆಜಿಗೆ ಒಂದು ಯೂನಿಟ್ ನಂತೆ ಪರಿಗಣಿಸಲಾಗುತ್ತದೆ. ನಾನ್ ಎಸಿ ಬಸ್ಸುಗಳಿಗೆ 1 ರಿಂದ 5 ಹಂತದವರೆಗೆ 5 ರೂಪಾಯಿಗಳ ದರವನ್ನು ನಿಗದಿ ಪಡಿಸಲಾಗಿದೆ. ಎಸಿ ಬಸ್ಸುಗಳಲ್ಲಿ 10 ರೂ ನಿಗದಿ ಪಡಿಸಲಾಗಿದೆ. 15 ರಿಂದ 55 ಹಂತದವರೆಗೆ ನಾನ್ ಎಸಿ ಬಸ್ಸಲ್ಲಿ 44 ರೂಪಾಯಿ, ಎಸಿ ಬಸ್ಸಿನಲ್ಲಿ 55 ರೂಪಾಯಿ ದರವನ್ನು ನಿಗದಿ ಪಡಿಸಲಾಗಿದೆ.

ಇನ್ನು ಕೆಎಸ್‌ಆರ್‌ಟಿಸಿಯ ಸಿಟಿ, ಸಬರ್ಬನ್, ಆರ್ಡಿನರಿ, ಮತ್ತು ಮೊಫಸಿಲ್ ಸೇವೆಗಳಲ್ಲಿ ಪ್ರಾಣಿ-ಪಕ್ಷಿಗಳ ಸಾಗಾಟಕ್ಕೆ ಅವಕಾಶವಿದೆ. ಮೊಲ, ನಾಯಿಮರಿ, ಬೆಕ್ಕು, ಮತ್ತು ಪಕ್ಷಿಗಳಂತಹ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅನುಮತಿಸಲಾಗಿದೆ, ಆದರೆ ನಾಯಿಗೂ ಒಬ್ಬ ವಯಸ್ಕರ ದರವನ್ನು ನಿಗದಿ ಪಡಿಸಲಾಗಿದೆ. ಆ ದರವನ್ನು ನೀಡಿ ಕೊಂಡೊಯ್ಯಬೇಕು. ಉಳಿದ ಪ್ರಾಣಿಗಳಿಗೆ ಮಕ್ಕಳ ಟಿಕೆಟ್ ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ.

ಇನ್ನೂ ಪ್ರಯಾಣಿಕರು 4 ಅಥವಾ 5 ಜನರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೇ ಒಂದು ಬ್ಯಾಗ್ ಅಥವಾ ಬಂಡಲ್‌ ಲಗೇಜ್ ಕೊಂಡೊಯ್ಯುತ್ತಿದ್ದರೇ ಉಚಿತ ಸಾಗಾಣೆಯ ಒಬ್ಬ ಪ್ರಯಾಣಿಕರಿಗೆ ಮಾತ್ರ 30 ಕೆಜಿವರೆಗೆ ಅನ್ವಯಿಸುತ್ತದೆ. ಒಬ್ಬರು ಮಾತ್ರವೇ ಉಚಿತವಾಗಿ ಲಗೇಜ್ ಕೊಂಡೊಯ್ಯೋದಕ್ಕೆ ಅವಕಾಶವಿದೆ ಎಂಬುದಾಗಿ ತಿಳಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

108 ಆ್ಯಂಬುಲೆನ್ಸ್ ಸೇವೆ ಬಲಪಡಿಸಲು ಹೊಸ ಯೋಜನೆ!! ಆಶಾ ಮೆಂಟರ್ಸ್ ಜವಾಬ್ದಾರಿ ಆರೋಗ್ಯ ಕೇಂದ್ರದ ಸಿಬಂದಿ ಹೆಗಲಿಗೆ!

108 ಆರೋಗ್ಯ ಕವಚ ಸೇವೆಯನ್ನು ಜಿವಿಕೆ ಸಂಸ್ಥೆಯಿಂದ ಹಿಂಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…