ಹಾಸನ: ಕಿಲ್ಲರ್ ಅಟ್ಯಾಕಿಗೆ ಹಾಸನದಲ್ಲಿ ಮತ್ತೊಂದು ಬಲಿಯಾಗಿದೆ.
ಮೃತರನ್ನು ಬೆಂಗಳೂರಿನ ಜಯನಗರ ನಿವಾಸಿ ರಂಗನಾಥ್ (57) ಎಂದು ಗುರುತಿಸಲಾಗಿದೆ.
ಹಾಸನದಲ್ಲಿ ಇತ್ತೀಚಿಗೆ ಹಾರ್ಟ್ ಅಟ್ಯಾಕ್ ಮರಣ ಮೃದಂಗ ಹೆಚ್ಚುತ್ತಿದ್ದು, 25ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಈ ಲಿಸ್ಟ್ ಗೆ ಮತ್ತೊಂದು ಸೇರ್ಪಡೆಯಾಗಿದೆ. ದಿನದಿಂದ ದಿನಕ್ಕೆ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಲೇ ಇದೆ. ಸರಕಾರ ಸಮಿತಿ ರಚಿಸಿದ್ದು, ಸಮಿತಿ ವರದಿಯನ್ನು ಸಲ್ಲಿಸಿದೆ.
ಬೆಂಗಳೂರಿನಿಂದ ಹಾಸನಕ್ಕೆ ಟ್ರಿಪ್ ಬಂದಿದ್ದ ಕುಟುಂಬಕ್ಕೆ ಇದೀಗ ಬರಸಿಡಿಲು ಬಡಿದಂತಹ ಪರಿಸ್ಥಿತಿ.
ಬೆಂಗಳೂರಿಗೆ ವಾಪಾಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಾರು ಹಾಸನ ನಗರದ ಡಿಸಿ ಕಚೇರಿ ಬಳಿ ತಲುಪಿದಾಗ ರಂಗನಾಥ್ ಅವರಿಗೆ ಹೃದಯ ನೋವು ಕಾಣಿಸಿಕೊಂಡಿದೆ.
ಕಾರನ್ನು ಮೃತರ ಪುತ್ರ ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ.