Gl jewellers
ಕ್ರೀಡೆ

ಪುತ್ತೂರು ಕಂಬಳ ಸಮಾಪನ: ಕೋಟಿ ಕರೆಯ ಕೋಣಗಳದ್ದೇ ಪಾರಮ್ಯ!! 4 ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ ಕೋಟಿ ಕರೆಯಲ್ಲಿ ಓಡಿದ ಕೋಣಗಳು!!

ಪುತ್ತೂರು: ಕೋಟಿ - ಚೆನ್ನಯ ಜೋಡುಕರೆ ಕಂಬಳದಲ್ಲಿ ನಡೆದ ಐದು ವಿಭಾಗದ ಸ್ಪರ್ಧೆಯಲ್ಲಿ ಎಲ್ಲದರಲ್ಲೂ ಕೋಟಿ ಕರೆಯಲ್ಲಿ ಓಡಿದ ಕೋಣಗಳೇ ಪ್ರಥಮ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿತ್ತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೋಟಿ – ಚೆನ್ನಯ ಜೋಡುಕರೆ ಕಂಬಳದಲ್ಲಿ ನಡೆದ ಐದು ವಿಭಾಗದ ಸ್ಪರ್ಧೆಯಲ್ಲಿ ನಾಲ್ಕರಲ್ಲಿ ಕೋಟಿ ಕರೆಯಲ್ಲಿ ಓಡಿದ ಕೋಣಗಳೇ ಪ್ರಥಮ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿತ್ತು.

Papemajalu garady
Karnapady garady

ಸಂಜೆ ವೇಳೆಗೆ ಕೋಣಗಳನ್ನು ಅದ್ದೂರಿಯಾಗಿ ಕರೆಗೆ ಇಳಿಸಲಾಯಿತು. ವಾದ್ಯಘೋಷದೊಂದಿಗೆ ಕರೆಗೆ ಇಳಿದ ಕಂಬಳಾಭಿಮಾನಿಗಳು ಪರಸ್ಪರ ಕೆಸರು ನೀರನ್ನು ಎರಚಿಕೊಳ್ಳುತ್ತಾ ಸಂಭ್ರಮಪಟ್ಟರು.

ನಂತರದಲ್ಲಿ ಫೈನಲ್ ಪಂದ್ಯ ನಡೆಯಿತು.

ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ರಾಜೆ ಹಾಗೂ ಶಬರೀಶ ಕೋಣಗಳು ಜಯ ಸಾಧಿಸಿವೆ. ಇದನ್ನು ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕಾರ್ತಿಕ್ ಗೌಡ. ನಂದಳಿಕೆ ಶ್ರೀಕಾಂತ್ ಭಟ್ ಅವರ ಮೋಡೆ ಹಾಗೂ ಕಾಟಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ. 

ಹಗ್ಗ ಕಿರಿಯದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ ಅವರ ಬೊಲ್ಲೆ ಹಾಗೂ ಪಾಂತೆ ಕೋಟಿ ಕರೆಯಲ್ಲಿ ಓಡಿ ಪ್ರಥಮ ಸ್ಥಾನ ಪಡೆದುಕೊಂಡಿತು. ಇದನ್ನು ಓಡಿಸಿದವರು ಮಂಗಲ್ಪಾಡಿ ರಕ್ಷಿತ್ ಶೆಟ್ಟಿ. ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ ಬಿ. ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಅಡ್ಡ ಹಲಗೆಯಲ್ಲಿ ಪುತ್ತೂರು ಸರೋವರ ಹವೀಶ ಹರೀಶ್ ಶಾಂತಿ ಅವರ ಬಾಬು ಹಾಗೂ ಕರ್ಣೆ ಕೋಣಗಳು ಗೆಲುವು ಪಡೆದುಕೊಂಡಿತು. ಇದನ್ನು ಓಡಿಸಿದವರು ಭಟ್ಕಳ ಹರೀಶ್. ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿತು.

ನೇಗಿಲು ಹಿರಿಯದಲ್ಲಿ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರ ದಾಸ ಹಾಗೂ ಹೊನ್ನು ಕೋಣ ಪ್ರಥಮ. ಇದನ್ನು ಓಡಿಸಿದವರು ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ. ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ಅವರ ಕೋಣಗಳು ದ್ವಿತೀಯ.

ನೇಗಿಲು ಕಿರಿಯದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಅಪ್ಪು ಹಾಗೂ ಜಿಂಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಇದು ಚೆನ್ನಯ ಕರೆಯಲ್ಲಿ ಓಡಿ ಜಯಿಸಿದೆ. ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಓಡಿಸಿದವರು. ಮಿಜಾರು ಹರಿಮೀನಾಕ್ಷಿ ದೋಟ ಹರಿಯಪ್ಪ ಶೆಟ್ಟಿ ಅವರ ಕೋಣಗಳು ದ್ವಿತೀಯ.

ಇನ್ನು ಕನಹಲಗೆಯಲ್ಲಿ ನಿಶಾನೆಗೆ ನೀರು ಹಾಯಿಸಿದ ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ ಪ್ರಥಮ, ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಓಡಿಸಿದವರು ಕ್ರಮವಾಗಿ ತೆಕ್ಕಟ್ಟೆ ಸುಧೀರ್ ದೇವಾಡಿಗ ಹಾಗೂ ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಕಾರ್ ರೇಸ್ ಚಮತ್ಕಾರ!ಫೆ. 9ರಂದು ಆತೂರಿನಲ್ಲಿ ನಡೆಯಲಿದೆ ಆಟೋ ಕ್ರಾಸ್ ಡರ್ಟ್ ರೇಸಿಂಗ್!

ಮೂಡುಬಿದರೆಯಲ್ಲಿ ನಡೆಯುತ್ತಿದ್ದ ಆಟೋ ಕ್ರಾಸ್ ಡರ್ಟ್ ರೇಸಿಂಗ್ ಈ ಬಾರಿ ಪುತ್ತೂರಿನ ಆತೂರಿನಲ್ಲಿ…