Gl jewellers
ಕ್ರೀಡೆ

ಫೆ. 9ರಂದು 8ನೇ ವರ್ಷದ ಬಾಂಧವ್ಯ ಟ್ರೋಫಿ 2025 | ಮೊಟ್ಟಮೊದಲ ಬಾರಿ ಮಹಿಳಾ ಅಂಡರ್ ಆರ್ಮ್ ಕ್ರಿಕೆಟ್ ಆಡಿಸಿದ ಬಾಂಧವ್ಯ ಫ್ರೆಂಡ್ಸ್’ನಿಂದ ಈ ಬಾರಿ ಮಹಿಳಾ ತ್ರೋಬಾಲ್ ಪಂದ್ಯ

Karpady sri subhramanya
ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 8ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ. 9ರಂದು ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಪುತ್ತೂರು: ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 8ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ. 9ರಂದು ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಪುತ್ತೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಂದ ಅಂಡರ್ ಆರ್ಮ್ ಕ್ರಿಕೆಟ್ ಆಡಿಸಿರುವ ಹೆಗ್ಗಳಿಕೆ ಹೊಂದಿರುವ ಬಾಂಧವ್ಯ ಫ್ರೆಂಡ್ಸ್ ಈ ಬಾರಿ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ ಏರ್ಪಡಿಸಿದೆ. ಇದರೊಂದಿಗೆ ಕ್ರೀಡಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

Sampya jathre

ಸ್ಕರಿಯ ಎಂ.ಎ., ಫಾರೂಕ್ ಶೇಖ್ ಮುಕ್ವೆ ಹಾಗೂ ಪ್ರಶಾಂತ್ ರೈ ನೇತೃತ್ವದಲ್ಲಿ ನಡೆಯುತ್ತಿರುವ ಬಾಂಧವ್ಯ ಟ್ರೋಫಿಯ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ನಡೆಸಿಕೊಡಲಿದ್ದಾರೆ. ಡಿವೈಎಸ್ಪಿ ಅರುಣ್ ನಾಗೇಗೌಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪೊಲೀಸ್ ನಿರೀಕ್ಷಕ ಜಾನ್ಸನ್ ಕಿರಣ್ ಡಿಸೋಜ, ವೃತ್ತ ನಿರೀಕ್ಷಕ ರವಿ ಬಿ.ಎಸ್., ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಜಿ.ಎಲ್. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ, ನಗರಸಭೆ ಸದಸ್ಯ ಜೀವಂಧರ್ ಜೈನ್, ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ, ಸವಿತಾ, ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲ್, ಎಸಿಸಿಇ(ಐ) ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್, ಉದ್ಯಮಿ ಸಹಜ್ ರೈ ಬಳಜ್ಜ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಶಿವರಾಮ ಆಳ್ವ ಮುಖ್ಯ ಅತಿಥಿಗಳಾಗಿರುವರು.

ಒಟ್ಟು 10 ತಂಡಗಳು ಪಂದ್ಯದಲ್ಲಿ ಭಾಗವಹಿಸಲಿದ್ದು, ಪೊಲೀಸ್ ಇಲೆವೆನ್ 1, ಪೊಲೀಸ್ ಇಲೆವೆನ್ 2, ಅರಣ್ಯ ಇಲಾಖೆ, ಹೋಂ ಗಾರ್ಡ್ ಇಲೆವೆನ್, ಮೆಸ್ಕಾಂ ಇಲೆವೆನ್, ದೈಹಿಕ ಶಿಕ್ಷಕ ಶಿಕ್ಷಣ ಇಲಾಖೆ, ಡಾಕ್ಟರ್ಸ್ ಇಲೆವೆನ್, ಪುತ್ತೂರು ಪ್ರೆಸ್ ಕ್ಲಬ್ ಇಲೆವೆನ್, ಲಾಯರ್ಸ್ ಇಲೆವೆನ್, ಜ್ಯುವೆಲ್ಲರ್ಸ್ ಇಲೆವೆನ್, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು, ಕೆ.ಎಸ್.ಆರ್.ಟಿ.ಸಿ. ಇಲೆವೆನ್, ವಿವೇಕಾನಂದ ವಿದ್ಯಾವರ್ಧಕ ಸಂಘ, ಕ್ಯಾಂಪ್ಕೋ ಇಲೆವೆನ್, ಸೊಸೈಟಿ ಟೀಮ್, ಸರಕಾರಿ ನೌಕರರ ಸಂಘ ಭಾಗವಹಿಸಲಿವೆ.

ಬಹುಮಾನ:

ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 15025 ರೂ. ನಗದು ಹಾಗೂ ಬಾಂಧವ್ಯ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10025 ರೂ. ಹಾಗೂ ಬಾಂಧವ್ಯ ಟ್ರೋಫಿ, ತೃತೀಯ ಸ್ಥಾನ ತಂಡಕ್ಕೆ 8025 ರೂ. ಹಾಗೂ ಬಾಂಧವ್ಯ ಟ್ರೋಫಿ, ಚತುರ್ಥ ಸ್ಥಾನ ಪಡೆದ ತಂಡಕ್ಕೆ 6025 ರೂ. ಹಾಗೂ ಬಾಂಧವ್ಯ ಟ್ರೋಫಿ ನೀಡಿ ಗೌರವಿಸಲಾಗುವುದು. ಇದರೊಂದಿಗೆ ಸರಣಿ ಶ್ರೇಷ್ಠ, ಪ್ರತೀ ಪಂದ್ಯದ ಪಂದ್ಯಶ್ರೇಷ್ಠ, ಅತೀ ಹೆಚ್ಚು ರನ್, ಅತೀ ಹೆಚ್ಚು ವಿಕೆಟ್, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗುವುದು.

ಮಹಿಳಾ ತಂಡಗಳ ನಡುವಿನ ತ್ರೋಬಾಲ್ ಪಂದ್ಯಾಟದ ಬಹುಮಾನವಾಗಿ ಪ್ರಥಮ ಸ್ಥಾನಕ್ಕೆ 3025 ರೂ. ಹಾಗೂ ಬಾಂಧವ್ಯ ಟ್ರೋಫಿ, ದ್ವಿತೀಯ ಸ್ಥಾನಕ್ಕೆ 2025 ರೂ ಹಾಗೂ ಬಾಂಧವ್ಯ ಟ್ರೋಫಿ ನೀಡಲಾಗುವುದು.

ಸಮಾರೋಪ:

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಪೊಲೀಸ್ ಉಪನಿರೀಕ್ಷಕರಾದ ಸುನಿಲ್ ಕುಮಾರ್, ಆಂಜನೇಯ ರೆಡ್ಡಿ, ಜಂಬೂರಾಜ್ ಮಹಾಜನ್, ಅವಿನಾಶ್, ಉದಯ ರವಿ, ಕುಟ್ಟಿ ಎಂ.ಕೆ., ಸುದಾನ ವಸತಿಯುತ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಪುತ್ತೂರು ಮುಳಿಯ ಜ್ಯುವೆಲ್ಲರ್ಸ್‍’ನ ಮುಳಿಯ ಕೇಶವ ಭಟ್, ಪದ್ಮ ಸೋಲಾರ್ ಮಾಲಕ ಸೀತಾರಾಮ ರೈ, ದರ್ಬೆ ಪ್ರೇಮ ಬೇಕರಿ ಮಾಲಕ ವಿನೋದ್, ಉದ್ಯಮಿ ಸುರೇಶ್ ನಾಡಾಜೆ, ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್’ನ ಜನಾರ್ದನ ಪೂಜಾರಿ, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಜುನೈದ್ ಬಿ.ಜಿ., ಎಸ್.ಡಿ.ಎಂ. ಕನ್’ಸ್ಟ್ರಕ್ಷನ್’ನ ಸಂದೀಪ್ ಮುಖ್ಯ ಅತಿಥಿಗಳಾಗಿರುವರು.

ಇದೇ ಸಂದರ್ಭ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಜಾಕ್ ಬಪ್ಪಳಿಗೆ, ಪುತ್ತೂರು ತಾಲೂಕು ಯುವ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಪೊರ್ದಾಲ್, ರಾಷ್ಟ್ರೀಯ ಈಜುಪಟು ಪ್ರಾಧಿ ಕ್ಲೇರ್ ಪಿಂಟೊ, ಬೀರಮಲೆ ಪ್ರಜ್ಆ ಆಶ್ರಮದ ಅನ್ನಪ್ಪ ವಿ.ಎಂ. ಅವರನ್ನು ಸನ್ಮಾನಿಸಲಾಗುವುದು.

ಇಲಾಖಾ ಆಟಗಾರರು ದ.ಕ. ಜಿಲ್ಲೆಯವರು ಆಗಿದ್ದು, ದ.ಕ. ಜಿಲ್ಲೆಯಲ್ಲಿ ಉದ್ಯೋಗದಲ್ಲಿರುವವರಿಗೆ ಮಾತ್ರ ಅಡಲು ಅವಕಾಶ ನೀಡಲಾಗಿದೆ. ಎಲ್ಲಾ ತಂಡದ ಆಟಗಾರರು ಬೆಳಿಗ್ಗೆ 8ಕ್ಕೆ ಸರಿಯಾಗಿ ಮೈದಾನದಲ್ಲಿ ಹಾಜರಿರಬೇಕು. ಆಟಗಾರರು ಸಂಸ್ಥೆಯ ಐಡಿ ಕಾರ್ಡ್ ಅಥವಾ ಮೇಲಾಧಿಕಾರಿಗಳ ಸಹಿಯುಳ್ಳ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಕಾರ್ ರೇಸ್ ಚಮತ್ಕಾರ!ಫೆ. 9ರಂದು ಆತೂರಿನಲ್ಲಿ ನಡೆಯಲಿದೆ ಆಟೋ ಕ್ರಾಸ್ ಡರ್ಟ್ ರೇಸಿಂಗ್!

ಮೂಡುಬಿದರೆಯಲ್ಲಿ ನಡೆಯುತ್ತಿದ್ದ ಆಟೋ ಕ್ರಾಸ್ ಡರ್ಟ್ ರೇಸಿಂಗ್ ಈ ಬಾರಿ ಪುತ್ತೂರಿನ ಆತೂರಿನಲ್ಲಿ…