ಸಮಾಜಮುಖಿ ಚಟುವಟಿಕೆಗಳ ಮೂಲಕ ಮುಕ್ಕೂರು ನೇಸರ ಯುವತಿ ಮಂಡಲ ಹತ್ತೂರಿಗೆ ಮಾದರಿಯಾಗಿ ಬೆಳೆಯಲಿ ಎಂದು ನಿವೃತ್ತ ಶಿಕ್ಷಕಿ ರಾಜೀವಿ ಕಂಡಿಪ್ಪಾಡಿ ಹೇಳಿದರು.
ಮುಕ್ಕೂರು ನೇಸರ ಯುವತಿ ಮಂಡಲದ ಸದಸ್ಯೆಯರಿಗೆ ದಾನಿಗಳು ನೀಡಿದ ಟೀ ಶರ್ಟ್ ಅನ್ನು ಮಾ.15 ರಂದು ಮುಕ್ಕೂರು ಅಂಗನವಾಡಿ ವಠಾರದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಈಗಾಗಲೇ ಕಳೆದ ಹತ್ತು ವರ್ಷಗಳಿಂದ ನೇಸರ ಯುವಕ ಮಂಡಲ ತನ್ನ ಸಾಮಾಜಿಕ ಕಳಕಳಿಯನ್ನು ಸಮಾಜದ ಮುಂದೆ ಇರಿಸಿದೆ. ಊರ ನಂಬಿಕೆಯ ಸಂಸ್ಥೆಯಾಗಿ ಬೆಳೆದಿದೆ. ಅದೇ ದಾರಿಯಲ್ಲಿ ಯುವತಿ ಮಂಡಲವೂ ಸಾಗಬೇಕು. ಅದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದರು.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರಾದ ಸುಜಾತ ವಿ ರಾಜ್ ಮಾತನಾಡಿ, ಉತ್ತಮ ಕಾರ್ಯಕ್ರಮ, ಊರಿನಲ್ಲಿ ಐಕ್ಯ ಮತ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡು ಜನಪರ ಸಂಸ್ಥೆಯಾಗಿ ಹತ್ತೂರಿನಲ್ಲಿ ಮನೆ ಮಾತಾಗಲಿ ಎಂದರು.
ಗ್ರಾ.ಪಂ.ಮಾಜಿ ಸದಸ್ಯೆ ಗುಲಾಬಿ ಬೊಮ್ಮೆಮಾರು ಮಾತನಾಡಿ, ಜಾತಿ, ಮತ, ಪಕ್ಷ ಮೀರಿ ಯುವತಿ ಮಂಡಲ ಬೆಳೆಯಲಿ. ನಿಮ್ಮ ಎಲ್ಲ ಕಾರ್ಯಗಳಿಗೆ ನಮ್ಮ ಸಂಪೂರ್ಣ ಸಹಕಾರ, ಬೆಂಬಲ ಇದೆ ಎಂದರು.
ಮುಕ್ಕೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೂಪ ಮಾತನಾಡಿ, ನೇಸರ ಯುವಕ ಮಂಡಲದ ಹಾಗೆ ನೇಸರಯ ಯುವತಿ ಮಂಡಲವೂ ಮುಕ್ಕೂರಿನ ಹೆಮ್ಮೆಯ ಸಂಘಟನೆಯಾಗಿ ಮೂಡಿ ಬರಲಿ ಎಂದರು.
ಮುಕ್ಕೂರು ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪಿ ಮುಕ್ಕೂರು ಅಧ್ಯಕ್ಷತೆ ವಹಿಸಿದ್ದರು.
ಟೀ ಶರ್ಟ್ ಅನಾವರಣ
ದಾನಿಗಳಾದ ಸುಬ್ರಾಯ ಭಟ್ ನೀರ್ಕಜೆ, ಚಂದ್ರಹಾಸ ರೈ ಮುಕ್ಕೂರು, ಮಹೇಶ್ ಕುವೈತ್ ಅವರು ಕೊಡುಗೆ ಯಾಗಿ ನೀಡಿದ ಟೀ ಶರ್ಟ್ ಅನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ನೇಸರ ಯುವತಿ ಮಂಡಲದ ಕೋಶಾಧಿಕಾರಿ ಯಕ್ಷಿತಾ ಚಾಮುಂಡಿಮೂಲೆ, ವಂದಿಸಿ ನಿರೂಪಿಸಿದರು.
























