ಬಹುನಿರೀಕ್ಷಿತ ಐಸಿಸಿ ವುಮೆನ್ಸ್ ಇಂಟರ್ ನ್ಯಾಷನಲ್ ವರ್ಲ್ಡ್ ಕಪ್ ನಲ್ಲಿ ಭಾರತದ ವನಿತೆಯರು ಮೇಲುಗೈ ಸಾಧಿಸಿಯೇ ಬಿಟ್ಟಿದ್ದಾರೆ. ಈ ಮೂಲಕ ಹಿಂದೆ ಫೈನಲ್ ನಲ್ಲಿ ಅನುಭವಿಸಿದ ಎರಡು ಸೋಲುಗಳಿಗೆ ಉತ್ತರ ಕಂಡುಕೊಂಡಿದ್ದಾರೆ.
ವಿಶ್ವಕಪ್ ನಲ್ಲಿ ಈ ವರ್ಷ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತದ ವನಿತೆಯರು, ಕಪ್ ಎತ್ತಿ ಹಿಡಿದಿದ್ದಾರೆ.
ಟಾಸ್ ಗೆದ್ದ ಸೌತ್ ಆಫ್ರಿಕ್ ಬೌಲಿಂಗ್ ಆರಿಸಿಕೊಂಡಿತು. ಬ್ಯಾಟಿಂಗಿಗೆ ಧುಮುಕಿದ ಭಾರತ ಒಟ್ಟು 7 ವಿಕೆಟ್ ಪತನಕ್ಕೆ 298 ರನ್ ಖಾತೆಗೆ ಸೇರಿಸಿತು. ಇದರಲ್ಲಿ ಭಾರತದ ಶೆಫಾಲಿ 87 ರನ್ ಪಡೆದು, 2 ವಿಕೆಟ್ ಕಿತ್ತಿದ್ದಾರೆ. ದೀಪ್ತಿ ಶರ್ಮಾ 58 ರನ್ ಗಳಿಸಿ, 5 ವಿಕೆಟ್ ಕಬಳಿಸಿದ್ದಾರೆ. ಸ್ಮೃತಿ ಮಂದಣ್ಣ 45 ರನ್, ಜೆಮಿಮಾ ರೋಡ್ರಿಗಸ್ 24 ರನ್, ಹರ್ಮನ್ ಪ್ರೀತ್ ಕೌರ್ 20 ರನ್, ಅಮನ್ ಜೋದ್ ಕೌರ್ 12 ರನ್, ರಿಚಾ ಘೋಷಾ 34 ರನ್, ರಾಧಾ ಯಾದವ್ 3 ರನ್ ಗಳಿಸಿದ್ದಾರೆ.
ಭಾರತದ 298 ರನ್ ಬೆನ್ನತ್ತಿದ ಸೌತ್ ಆಫ್ರಿಕಾ ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಂಡಿತು.
ವೋಲ್ವಾರ್ಟ್ 101 ರನ್ ಗಳಿಸಿ ಶತಕ ಸಾಧನೆ ಮೆರೆದರು. ಬ್ರಿಡ್ಸ್ 23 ರನ್, ಲೂಸ್ 25, ಕಾಪ್ 4, ಜಫ್ಟಾ 16, ಡೇರ್ಕ್ ಸಿನ್ 35, ಟ್ರಯಾನ್ 9, ಅಯಾಬೊಂಗಾ ಕಾಕಾ 1, ಡಿ ಕ್ಲಾರ್ಕ್ 18 ರನ್ ಪೇರಿಸಿದರು. ಒಟ್ಟು 246 ರನ್ ಗಳಿಗೆ ಸೌತ್ ಆಫ್ರಿಕಾ ಪಂದ್ಯ ಕೈಚೆಲ್ಲಿತು.

























