Gl jewellers
ವಿಶೇಷ

ಹಾರೋ ಕಾರು! ಅಲೆಫ್ ಏರೊನಾಟಿಕ್ಸ್ ಸಿದ್ಧಪಡಿಸಿರುವ ಈ ಕಾರಿನಲ್ಲಿದೆ ಹಲವು ವೈಶಿಷ್ಟ್ಯ!

ಹಾರುವ ಕಾರಿಗೆ ಪೆಟ್ರೋಲ್, ಡಿಸೇಲ್ ಬೇಕಾಗಿಲ್ಲ. ಇದು ಎಲೆಕ್ಟಿಕ್ ಕಾರಾಗಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿಲೋಮೀಟರ್ ದೂರ ಓಡಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹಾರುವ ಕಾರು ಸಿದ್ಧವಾಗಿದೆ ಎರಡು ವರ್ಷಗಳ ಹಿಂದೆಯೇ ಹಾರಾಡುವ ಕಾರಿಗೆ ಅಮೆರಿಕಾ ಅನುಮತಿ ನೀಡಿತ್ತು.

Papemajalu garady
Karnapady garady

ಹಾರುವ ಕಾರಿನ ಟೆಸ್ಟಿಂಗ್ ಕೂಡ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾರುತ್ತಿರುವ ಕಾರಿನ ವಿಡಿಯೋ ವೈರಲ್ ಆಗಿದೆ.

ಸಿನಿಮಾ, ಸೀರಿಯಲ್‌ನಲ್ಲಿ ಮಾತ್ರ ನಾವು ಕಾರು ಹಾರಾಡೋದನ್ನು ನೋಡ್ತಿದ್ವಿ. ಇನ್ಮುಂದೆ ನಿಜವಾಗ್ಲೆ ಕಾರು ಹಾರುವುದನ್ನು ನೋಡಬಹುದು. ಹಾರುವ ಕಾರಿನಲ್ಲಿ ಕುಳಿತುಕೊಳ್ಳುವ ಸಮಯವೂ ಶೀಘ್ರವೇ ಬರಲಿದೆ.

ಹಾರುವ ಕಾರಿಗೆ ಪೆಟ್ರೋಲ್, ಡಿಸೇಲ್ ಬೇಕಾಗಿಲ್ಲ. ಇದು ಎಲೆಕ್ಟಿಕ್ ಕಾರಾಗಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿಲೋಮೀಟರ್ ದೂರ ಓಡಲಿದೆ.

ಅಮೆರಿಕದ ವಾಹನ ತಯಾರಕ ಕಂಪನಿ ಅಲೆಫ್ ಏರೊನಾಟಿಕ್ಸ್ (Aleph Aeronautics) ಈ ಕಾರನ್ನು ತಯಾರಿಸಿದೆ. ಅಲೆಫ್ ಮಾಡೆಲ್ ಎ ಕಾರಿನ ಪರೀಕ್ಷೆಯನ್ನು ಕಂಪನಿ ನಡೆಸುತ್ತಿದೆ.

ಹಾರುವ ಕಾರನ್ನು ಕ್ಯಾಲಿಫೋರ್ನಿಯಾದ ಸುರಕ್ಷಿತ ರಸ್ತೆಯಲ್ಲಿ ಪರೀಕ್ಷಿಸಲಾಗಿದೆ. ನಿಧಾನವಾಗಿ ಮೇಲೆ ಹಾರುವ ಕಾರು, ಕೆಳಗೆ ನಿಂತಿದ್ದ ಬಿಳಿ ಕಾರನ್ನು ದಾಟಿ ಮುಂದೆ ಹೋಗಿ ಲ್ಯಾಂಡ್ ಆಗುತ್ತೆ. ಈ ಕಾರು ಚಲಿಸಲು ಯಾವುದೆ ರನ್ ವೇ ಅಗತ್ಯವಿಲ್ಲ. ಕಾರು ಮೇಲೆ ಹಾರಿದ ವಿಡಿಯೋವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದು ಇದೇ ಮೊದಲು ಎಂದು ಅಲೆಫ್ ಏರೋನಾಟಿಕ್ಸ್‌ನ ಸಿಇಒ ಜಿಮ್ ಡುಖೋವಿ ಹೇಳಿದ್ದಾರೆ.

ವಿಡಿಯೋದಲ್ಲಿ ಕಂಡುಬರುವ ಕಾರು ಅಲೆಫ್‌ನ ಮಾಡೆಲ್ ಝೀರೋದ ಅಲ್ಮಾಲೈಟ್ ಆವೃತ್ತಿಯಾಗಿದ್ದು ನಂತರ ಅದನ್ನು ಕಮರ್ಶಿಯಲ್ ಮಾಡೆಲ್ ಆಗಿ ಸಿದ್ಧಪಡಿಸಲಾಗಿದೆ.

ಈ ಕಾರಿನಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಇದು ಆಟೋಪೈಲಟ್ ಮೋಡ್‌ನಲ್ಲಿಯೂ ಹಾರಲು ಸಾಧ್ಯವಾಗುತ್ತದೆ. ಈ ಕಾರಿಗೆ ಜಾಲರಿ ಭಾಗವನ್ನು ಅಳವಡಿಸಲಾಗಿದೆ. ಅದರ ಕೆಳಗೆ ಎಂಟು ತಿರುಗುವ ರೋಟರ್‌ಗಳಿವೆ. ಇದು ಕಾರಿನ ಹಾರಾಟವನ್ನು ಆರಾಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದನ್ನು ನೆಲದ ಮೇಲೂ ಓಡಿಸಬಹುದು. ಆಗ ಕಾರಿನಲ್ಲಿ ಅಳವಡಿಸಲಾದ ನಾಲ್ಕು ಸಣ್ಣ ಎಂಜಿನ್ ರಸ್ತೆಯಲ್ಲಿ ಓಡಲು ನೆರವಾಗುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 40 ಕಿ.ಮೀ ಎಂದು ಕಂಪನಿ ಹೇಳಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ನಿದ್ದೆ ಮಾಡಿದ್ದಕ್ಕೆ 4 ಕೋಟಿ ರೂ. ಪರಿಹಾರ ಸಿಕ್ತು!!ಮರುಮಾತನಾಡದೇ ಕಂಪೆನಿ ಪರಿಹಾರ ನೀಡಬೇಕೆಂದು ಕೋರ್ಟ್ ಹೇಳಿದ್ದಾದರೂ ಯಾಕೆ?

ಕಚೇರಿಯಲ್ಲಿ ತೂಕಡಿಸುತ್ತಿದ್ದ ಉದ್ಯೋಗಿ ಕೆಲಸದ ನಡುವೆ ಡೆಸ್ಕ್ ಮೇಲೆ ಮಲಗಿದ್ದಾನೆ. ಕಂಪನಿ…