G L Acharya Jewellers
ವಿಶೇಷ

ಮಹಾರಾಷ್ಟ್ರದ ಹಳ್ಳಿಗಳಲ್ಲಿ ಕಾಣಿಸಿಕೊಂಡ ವಿಚಿತ್ರ ಸಮಸ್ಯೆ.!!

Karpady sri subhramanya
ಮಹಾರಾಷ್ಟ್ರದ ಬುಲ್ಲಾನ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಕಳೆದ ಸುಮಾರು ಎರಡು ವಾರದಿಂದ ಜನರು ವಿಚಿತ್ರವಾದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಮಕ್ಕಳು, ವಯಸ್ಕರು, ಪುರುಷರು, ಮಹಿಳೆಯರು, ವೃದ್ಧರೆನ್ನದೆ ಈ ಹಳ್ಳಿಗಳಲ್ಲಿ ಜನರು ಹಠಾತ್ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

Karpady jathre

ಮುಂಬಯಿ : ಮಹಾರಾಷ್ಟ್ರದ ಬುಲ್ಲಾನ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಕಳೆದ ಸುಮಾರು ಎರಡು ವಾರದಿಂದ ಜನರು ವಿಚಿತ್ರವಾದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಮಕ್ಕಳು, ವಯಸ್ಕರು, ಪುರುಷರು, ಮಹಿಳೆಯರು, ವೃದ್ಧರೆನ್ನದೆ ಈ ಹಳ್ಳಿಗಳಲ್ಲಿ ಜನರು ಹಠಾತ್ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮಾರು 50 ಜನ ಈಗಾಗಲೇ ಕೂದಲು ಉದುರಿ ಹೋಗಿ ಬೊಕ್ಕ ತಲೆಯವರಾಗಿದ್ದಾರೆ. ವಿಶೇಷ ಎಂದರೆ ಕೆಲವು ಮಕ್ಕಳ ತಲೆಕೂದಲು ಕೂಡ ಉದುರಿ ಹೋಗಿದೆ. ಕೆಲವು ಯುವಕರ ಗಡ್ಡ ಉದುರುತ್ತಿದೆ. ಕೆಲವು ಮಂದಿ ಒಂದೇ ದಿನದಲ್ಲಿ ಕೂದಲು ಉದುರಿ ಹೋಗಿ ಹೈರಾಣರಾಗಿದ್ದಾರೆ. ಈ ವಿಚಿತ್ರ ಸಮಸ್ಯೆ ಆರೋಗ್ಯ ಇಲಾಖೆಗೂ ಸವಾಲಾಗಿದ್ದು, ವೈದ್ಯರು, ಚರ್ಮರೋಗ ತಜ್ಞರು ಠಿಕಾಣಿ ಹೂಡಿ ಪರಿಶೀಲನೆ ಮಾಡುತ್ತಿದ್ದಾರೆ.

SRK Ladders

ನೀರಿನಿಂದಾಗಿ ಈ ಸಮಸ್ಯೆ ತಲೆದೋರಿದೆಯೇ ಎಂದು ತಿಳಿದುಕೊಳ್ಳಲು ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬುಲ್ಮಾನ ಜಿಲ್ಲೆಯ ಬೋಂಡ್ಯಾಂವ್, ಕಲ್ವಾಡ್ ಮತ್ತು ಹಿಂಗ್ನ ಎಂಬ ಹಳ್ಳಿಗಳಲ್ಲಿ ಈ ಸಮಸ್ಯೆ ಕಾಣಿಸಿದೆ. ಕೂದಲು ಉದುರುವುದರಿಂದ ಹೈರಣಾಗಿರುವ ಜನ ಈಗ ತಾವಾಗಿಯೇ ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳುತ್ತಿದ್ದಾರೆ. ಆದರೆ ಇದರಿಂದ ಪುರುಷರ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿಯುತ್ತಿದ್ದರೂ ಮಹಿಳೆಯರು ಮಾತ್ರ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ದೇವರ ಶಾಪ ಎಂದು ಭಾವಿಸಿ ಗ್ರಾಮದಲ್ಲಿ ಪೂಜೆಪುನಸ್ಕಾರಗಳನ್ನೂ ನಡೆಸಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.

ಕಳೆದ ಹತ್ತು ದಿನಗಳಿಂದ ನನ್ನ ಕೂದಲು ನಿರಂತರವಾಗಿ ಉದುರುತ್ತಿದೆ. ಕೂದಲು ಮಾತ್ರವಲ್ಲ ಗಡ್ಡ ಮೀಸೆ ಉದುರುತ್ತಿರುವುದರಿಂದ ನಾನು ಪೂರ್ಣವಾಗಿ ಶೇವಿಂಗ್ ಮಾಡಿಕೊಳ್ಳಬೇಕಾಯಿತು ಎಂದು ಓರ್ವ ಯುವಕ ಸಮಸ್ಯೆಯನ್ನು ವಿವರಿಸಿದ್ದಾರೆ. ಕೂದಲು ಉದುರುವ ಸಮಸ್ಯೆ ಜನರನ್ನು ಭಯಭೀತರನ್ನಾಗಿಸಿದ್ದು, ಕೆಲವರು ಊರು ಬಿಟ್ಟುಹೋಗುವ ಬಗ್ಗೆ ಚಿಂತಿಸುತ್ತಿದ್ದಾರೆ. ಅದರಲ್ಲೂ ಮದುವೆ ವಯಸ್ಸಿಗೆ ಬಂದ ಮಕ್ಕಳಿರುವವರು ಬಹಳ ಹೆದರಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Kerala Astrologer

Related Posts

ನಿದ್ದೆ ಮಾಡಿದ್ದಕ್ಕೆ 4 ಕೋಟಿ ರೂ. ಪರಿಹಾರ ಸಿಕ್ತು!!ಮರುಮಾತನಾಡದೇ ಕಂಪೆನಿ ಪರಿಹಾರ ನೀಡಬೇಕೆಂದು ಕೋರ್ಟ್ ಹೇಳಿದ್ದಾದರೂ ಯಾಕೆ?

ಕಚೇರಿಯಲ್ಲಿ ತೂಕಡಿಸುತ್ತಿದ್ದ ಉದ್ಯೋಗಿ ಕೆಲಸದ ನಡುವೆ ಡೆಸ್ಕ್ ಮೇಲೆ ಮಲಗಿದ್ದಾನೆ. ಕಂಪನಿ…