ಗೋಡೆ ಮೇಲಿನ ಕ್ಯಾಲೆಂಡರ್ ಬದಲಾಗಿದೆ. ಬದಲಾಗಿಲ್ಲ ಎಂದಾದರೆ ಬದಲಾಯಿಸಿಕೊಳ್ಳಿ. ಹಾಗೆಂದು ಹಳೆ ಕ್ಯಾಲೆಂಡರನ್ನು ಹೊಸಕಿ ಹಾಕದಿರಿ.
ಕ್ಯಾಲೆಂಡರ್ ಬದಲಾಯಿತು ಎಂದಾಕ್ಷಣ ಎಲ್ಲವೂ ಬದಲಾಗುತ್ತದೆ ಎಂದೇನಿಲ್ಲ. ಅದೇ ಜನ, ಅದೇ ಪರಿಸರ, ಅದೇ ಒತ್ತಡ, ಎಲ್ಲವೂ ಅದೇ… ಆದರೂ ಮನಸ್ಸಿಗೇನೋ ಒಂದಷ್ಟು ಸಂಭ್ರಮ ಇದೆಯಲ್ಲವೇ? ಅದನ್ನು ಖಂಡಿತಾ ಕಳೆದುಕೊಳ್ಳದಿರಿ. ಆ ಸಣ್ಣ ಸಂಭ್ರಮವೇ ಎಲ್ಲಾವನ್ನು ಬದಲಾಯಿಸುವಷ್ಟು ಶಕ್ತ.
ಮನದ ಮೂಲೆಯ ಆ ಸಂಭ್ರಮವನ್ನು ಮಿಸ್ ಮಾಡದೇ ಸರಳವಾಗಿ ಆಚರಿಸಿ, ಸಂಭ್ರಮಿಸಿ. ಹೊಸ ವರುಷ ತರಲಿ ಹರುಷ. ಗೋಡೆಯ ಮೇಲಿನ ಹೊಸ ಕ್ಯಾಲೆಂಡರ್ ನಿಮ್ಮ ವೈಭವದ 2025ರ ವರ್ಷಕ್ಕೆ ಸಾಕ್ಷಿಯಾಗಲಿ ಎಂಬ ಹಾರೈಕೆಯೊಂದಿಗೆ “ಹೊಸ ವರ್ಷದ ಹಾರ್ದಿಕ ಶುಭಾಶಯಗಳು”
-ಶಕ್ತಿ ನ್ಯೂಸ್