ವಿಶೇಷ

ಮಂಗಳೂರು: ಮೊದಲ ಖಾಸಗಿ ಇ_ ಬಸ್‌ಗೆ ಹಸಿರು ನಿಶಾನೆ : ನಗರ ಸಾರಿಗೆಯಲ್ಲಿ ಹೊಸ ಅಧ್ಯಾಯ

GL

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ನಗರದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದ್ದು, ಗುರುವಾರ ಮಾರ್ಗನ್ಸ್ ಗೇಟ್ ಸಮೀಪದ ಪಾಲಾ ಮಾರ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರಿನ ಮೊದಲ ಖಾಸಗಿ ವಿದ್ಯುತ್ ಬಸ್ ಸೇವೆಗೆ ಅಧಿಕೃತ ಚಾಲನೆ ನೀಡಲಾಯಿತು.

chennai-shopping
maithri

ನಗರದ ಪ್ರಮುಖ ಮಾರ್ಗವಾಗಿರುವ ‘ಮಾರ್ಗ ಸಂಖ್ಯೆ ೨೭’ರಲ್ಲಿ ಹವಾನಿಯಂತ್ರಿತ (ಎಸಿ) ಸೌಲಭ್ಯ ಹೊಂದಿರುವ ಈ ವಿದ್ಯುತ್ ಬಸ್ ಓಡಾಟ ಆರಂಭಿಸಿದೆ. ಪರಿಸರ ಸ್ನೇಹಿ ಹಾಗೂ ಆರಾಮದಾಯಕ ಪ್ರಯಾಣವನ್ನು ನಾಗರಿಕರಿಗೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಖಾಸಗಿ ಸಾರಿಗೆ ವಲಯದಲ್ಲಿ ಈ ಕ್ರಮವನ್ನು ಗಮನಾರ್ಹ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಬಸ್‌ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿ, ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸಲು ಹಸಿರು ಇಂಧನ ಆಧಾರಿತ ವಾಹನಗಳ ಬಳಕೆ ಅನಿವಾರ್ಯವಾಗಿದೆ ಎಂದರು. ವಿದ್ಯುತ್ ಚಾಲಿತ ವಾಹನಗಳು ಭವಿಷ್ಯದ ಸಾರಿಗೆ ವ್ಯವಸ್ಥೆಯ ಪ್ರಮುಖ ಅಂಗವಾಗಲಿದ್ದು, ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಸ್ ಮಾಲೀಕ ದಿಲ್‌ರಾಜ್ ಆಳ್ವ, ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪಾರ್ತಿಪ್ಪಾಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಖಾಸಗಿ ವಲಯದಲ್ಲಿ ವಿದ್ಯುತ್ ಬಸ್ ಸೇವೆ ಆರಂಭಗೊಂಡಿರುವುದು ಇನ್ನಷ್ಟು ನಿರ್ವಾಹಕರನ್ನು ಹಸಿರು ಸಾರಿಗೆ ಆಯ್ಕೆಮಾಡಲು ಪ್ರೇರೇಪಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದ್ದು, ಸ್ವಚ್ಛ ಮತ್ತು ನಿಶ್ಶಬ್ದ ಮಂಗಳೂರಿನ ದಿಕ್ಕಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts