ವಿಶೇಷ

ಮಂಗಾಟಕ್ಕೆ ಬೆಸ್ತು ಬಿದ್ದ ಭಕ್ತ ಸಮೂಹ! ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆಗೈದ ಮಂಗ; ಹಿಂದೆ ಪಡೆದದ್ದಾದರೂ ಹೇಗೆ ಗೊತ್ತೇ?

tv clinic
ಭಕ್ತರೊಬ್ಬರ ಕೈಯಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಪರ್ಸ್ ಅನ್ನು ಮಂಗವೊಂದು ಕಸಿದುಕೊಂಡು ಪರಾರಿಯಾದ ಘಟನೆ ಮಥುರಾ ಸಮೀಪದ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನದ ಬೃಂದಾವನ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಭಕ್ತರೊಬ್ಬರ ಕೈಯಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಪರ್ಸ್ ಅನ್ನು ಮಂಗವೊಂದು ಕಸಿದುಕೊಂಡು ಪರಾರಿಯಾದ ಘಟನೆ ಮಥುರಾ ಸಮೀಪದ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನದ ಬೃಂದಾವನ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

core technologies

ಉತ್ತರಪ್ರದೇಶದ ಅಲಿಗಡ್ ನಿವಾಸಿ ಅಭಿಷೇಕ್ ಅಗರ್ವಾಲ್ ತಮ್ಮ ಕುಟುಂಬ ಸದಸ್ಯರ ಜತೆ ವೃಂದಾವನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ತೆರಳಿ ವಾಪಸ್ ಆಗುತ್ತಿದ್ದಾಗ ಅಗರ್ವಾಲ್ ಅವರ ಪತ್ನಿಯ ಕೈಯಲ್ಲಿದ್ದ ಪರ್ಸ್ ಅನ್ನು ಮಂಗ ಕಸಿದುಕೊಂಡು ಪರಾರಿಯಾಗಿತ್ತು.

akshaya college

ಪರ್ಸ್ ನಲ್ಲಿ ಬೆಲೆಬಾಳುವ ಚಿನ್ನಾಭರಣಳಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಹಾಗೂ ಸ್ಥಳೀಯರು ಮಂಗನ ಕೈಯಲ್ಲಿದ್ದ ಪರ್ಸ್ ಅನ್ನು ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರೂ ಕೂಡಾ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಭಕ್ತರು ಹಾಗೂ ಸ್ಥಳೀಯರು ಮಂಗನ ಕೈಯಲ್ಲಿದ್ದ ಪರ್ಸ್ ಅನ್ನು ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರೂ ಕೂಡಾ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಹಲವು ಗಂಟೆಗಳ ಕಾಲ ಹರಸಾಹಸ ಪಟ್ಟ ನಂತರ ಮಂಗನ ಕೈಯಲ್ಲಿದ್ದ ಪರ್ಸ್‌ ಅನ್ನು ತೆಗೆದುಕೊಳ್ಳಲು ಸಾಧ್ಯವಾಗಿರುವುದಾಗಿ ವರದಿ ವಿವರಿಸಿದೆ. ನಂತರ ಪರ್ಸ್ ಅನ್ನು ಅಗರ್ವಾಲ್ ಅವರಿಗೆ ಮರಳಿಸಲಾಯಿತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts