ಪುತ್ತೂರು: ದ.ಕ.ಜಿ.ಪಂ.ಹಿ ಪ್ರಾ ಶಾಲೆ ಸಜಂಕಾಡಿ ಯಲ್ಲಿ 2024-25ನೇ ಸಾಲಿನ ಮಂತ್ರಿಮಂಡಲ ರಚನೆ ನಡೆಯಿತು .ಮುಖ್ಯಮಂತ್ರಿ ಯಾಗಿ ಫಾತಿಮತ್ ತಪ್ಸಿಯಾ (7ನೇ) , ಉಪಮುಖ್ಯಮಂತ್ರಿಯಾಗಿ ಮಹಮ್ಮದ್ ತಮೀಮ್ (6ನೇ) ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಮಹಮ್ಮದ್ ರುಪೈಝ್(6ನೇ ) ,ಉಪಶಿಕ್ಷಣ ಮಂತ್ರಿ ಫಾಝಿಲ(5ನೇ ), ಫಾತಿಮ ಬತೂಲ್ (4ನೇ) ಆರೋಗ್ಯ ಮತ್ತು ಆಹಾರ ಮಂತ್ರಿ ಫಾತಿಮ(6ನೇ) ,ಉಪ ಆರೋಗ್ಯ ಮತ್ತು ಆಹಾರ ಮಂತ್ರಿ ಧನ್ವಿತ್ (5ನೇ ) ಅಫೀಫ (4ನೇ ) ಕ್ರೀಡಾಮಂತ್ರಿ ಮೂಸಾ ಆಸಫ್ (7ನೇ ) ,ಅಜ್ಮಲ್ (5ನೇ) ಉಝೈರ್ (4ನೇ) ,ರಕ್ಷಣಾ ಮಂತ್ರಿ ಜೈಪ್ರೀತ್ (6ನೇ ) ,ಉಪ ರಕ್ಷಣಾ ಮಂತ್ರಿ ಮಹಮ್ಮದ್ ಆಸಿಫ್ (4ನೇ ),ಮಹಮ್ಮದ್ ಆಕಿಫ್ (4ನೇ) ನೀರಾವರಿ ಮಂತ್ರಿ ಮತ್ತು ತೋಟಗಾರಿಕಾ ಮಂತ್ರಿ ,ಶಿವಾನಿ (6ನೇ),ಉಪ ತೋಟಗಾರಿಕಾ ಮತ್ತು ನೀರಾವರಿ ಮಂತ್ರಿ ಮಹಮ್ಮದ್ ಯಾಸೀರ್ (5ನೇ) ,ಹಿಮಾನಿ (4ನೇ) ವಾರ್ತಾಮಂತ್ರಿ ಫಾತಿಮತ್ ತನ್ಸಿಯಾ(7ನೇ) ,ಉಪ ವಾರ್ತಾ ಮಂತ್ರಿ ಫಾಹಿಲಾ (5ನೇ) ಮನುಪ್ರೀತ್ (4ನೇ) ಸ್ವಚ್ಛತಾ ಮಂತ್ರಿ ವಿಶ್ಮಯ್ (6ನೇ),ಉಪಸ್ವಚ್ಚತಾ ಮಂತ್ರಿ ನಿಶಿಕಾ (4ನೇ) ,ಸಹದಿಯಾ (4ನೇ) ಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ.
ಆರೋಗ್ಯ ಮತ್ತು ನೈರ್ಮಲ್ಯ ಸಂಘ ,ಮಕ್ಕಳ ಹಕ್ಕುಗಳನ್ನು ಸಂಘ ,ಕಲಾಸಂಘ ,ಕ್ರೀಡಾ ಸಂಘ ,ಭಾಷಾ ಸಂಘ ,ಇಕೋ ಕ್ಲಬ್ ಗಳ ಅಧ್ಯಕ್ಷ ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು .ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಇ.ವಿ.ಎಂ ಮೂಲಕ ಮತದಾನ ಪ್ರಕ್ರಿಯೆ ನಡೆಯಿತು .ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು . ಈ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮತ್ತು ಮತದಾನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಲಾಯಿತು .ಪ್ರಭಾರ ಮುಖ್ಯಗುರು ಶ್ರೀಮತಿ ಸುಮಲತಾ ಪಿ.ಕೆ , ಹಿರಿಯ ಶಿಕ್ಷಕಿ ಶಶಿಕಲಾ ಪಿ.ಎನ್ ,ಶಿಕ್ಷಕ ಗಣೇಶ ನಾಯಕ್ ಪುತ್ತೂರು ಚುನಾವಣಾಧಿಕಾರಿಗಳಾಗಿ ಸಹಕರಿಸಿದರು.