Friday, November 22
Share News

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧ ಹೊಂದಿದ್ದ

ಧಾರ್ಮಿಕ ಕ್ಷೇತ್ರವಾದ ಖಾಜಾ ಬಂದೇನವಾಜ್ ದರ್ಗಾದ ಪೀಠಾಧಿಕಾರಿ ಮುತ್ಸದ್ಧಿ ಡಾ.ಸಯ್ಯದ್ ಷಾ ಬ್ರುಸ್ರೋ ಹುಸೈನಿ ಸಾಹೇಬ (79) ಇಂದು ವಯೋಸಹಜದಿಂದ ನಿಧನರಾಗಿದ್ದಾರೆ.

ಇವರು ಇಬ್ಬರು ಗಂಡು ಮತ್ತು ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ವರ್ಗ ಅಸಂಖ್ಯಾತ ಭಕ್ತವರ್ಗವನ್ನು ಅಗಲಿದ್ದಾರೆ.

ಪ್ರಸಿದ್ಧ ಸೂಫಿ ಸಂತ ಹಜರತಗ ಖಾಜಾ ಬಂದೇನವಾಜ್ ರ 23 ನೇ ವಂಶಸ್ಥರಾಗಿದ್ದು, ಇವರು ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಹೊಂದಿದ್ದರು. ಅಲ್ಲದೆ ಶೈಕ್ಷಣಿಕ ತಜ್ಞರು ಮತ್ತು ನ್ಯಾಯವಾದಿ ಆಗಿದ್ದ ಇವರು KBN ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಆಧುನಿಕ ತಂತ್ರಜ್ಞಾನದೊಂದಿಗೆ ಸೂಫಿ ಪರಂಪರೆಯ ಸೇತುವೆ ಆಗಿ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ಇಂದಿನ ಪೀಳಿಗೆಗಳಿಗೆ ಸೂಫಿ ಪರಂಪರೆಯನ್ನು ತಿಳಿಸುವ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

ಅವರ ಬದುಕು ಉತ್ತಮ ಸಂಸ್ಕಾರ, ಸಂಸ್ಕೃತಿಯಿಂದ ಕೂಡಿತ್ತು. ಅವರ ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಗುರುಗಳ ನಿಧನದಿಂದ ಅವರ ಅಪಾರ ಅನುಯಾಯಿ ಮತ್ತು ಸೂಫಿ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ


Share News

Comments are closed.

Exit mobile version