ಪುತ್ತೂರು: ಗೆಜ್ಜೆಗಿರಿ ನಂದನ ಬಿತ್ತ್’ಲ್’ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಧೂಮಾವತಿ ನೇಮ ಹಾಗೂ ಧೂಮಾವತಿ ಬಲಿ ಉತ್ಸವ ಜರಗಿತು.
ಬೆಳಿಗ್ಗೆ ಗಣಪತಿ ಹೋಮ, ಗುರುಪೂಜೆ, ದೈವಸಾನಿಧ್ಯದಲ್ಲಿ ಶುದ್ಧಿಕಲಶ ನಡೆದು, ಧೂಮಾವತಿ ದೈವದ ಭಂಡಾರ ಇಳಿಸಲಾಯಿತು. ಬಳಿಕ ಧೂಮಾವತಿ ನೇಮೋತ್ಸವ ಜರಗಿತು.
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಧೂಮಾವತಿ ಬಲಿ ಉತ್ಸವ, ಮಹಾಪೂಜೆ ಜರಗಿತು.
ರಾತ್ರಿ ಕುಪ್ಪೆ ಪಂಜುರ್ಲಿ, ಕಲ್ಲಲ್ತಾಯ, ಕೊರತಿ ದೈವಗಳ ನೇಮ ನಡೆಯಲಿದೆ.