Gl jewellers
ಧಾರ್ಮಿಕ

ಇಂದು ನಾಳೆ ಕರ್ಮಲ ಜಾತ್ರಾ ಮಹೋತ್ಸವ | ಮೈಯಲ್ಲಿ ಬಂದ ಕಟೀಲಿನ ತಾಯಿ, ನೀರಿನ ರೂಪದಿ ನೆಲೆಸಿದ ದುರ್ಗೆ: ರಾಜಣ್ಣ | ಭಕ್ತರ ಸಹಕಾರದಲ್ಲಿ ವಸಂತ ಕಟ್ಟೆ ದೇವಿಗೆ ಅರ್ಪಣೆ: ಲೊಕೇಶ್ ಹೆಗ್ಡೆ

ಬನ್ನೂರಿನ ಕರ್ಮಲದಲ್ಲಿ ನೆಲೆನಿಂತಿರುವ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 22 ಹಾಗೂ 23ರಂದು ಭಕ್ತಿ – ಸಡಗರದಿಂದ ನಡೆಯಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರಿನ ಕರ್ಮಲದಲ್ಲಿ ನೆಲೆನಿಂತಿರುವ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 22 ಹಾಗೂ 23ರಂದು ಭಕ್ತಿ – ಸಡಗರದಿಂದ ನಡೆಯಲಿದೆ.

Papemajalu garady
Karnapady garady

ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಫೆ. 15ರಂದು ಗೊನೆ ಮುಹೂರ್ತ ನಡೆದಿದ್ದು, ಫೆ.22ರಂದು ಬೆಳಿಗೆ ಗಣಪತಿ ಹವನ ನಡೆದು, ಕಲಶ ಪೂಜೆ ಕಲಶಾಭಿಷೇಕ ನಡೆಯಿತು. ಇದೇ ಸಂದರ್ಭ ನೂತನವಾಗಿ ನಿರ್ಮಾಣಗೊಂಡ ವಸಂತ ಕಟ್ಟೆಯನ್ನು ದೇವಿಗೆ ಅರ್ಪಣೆ ಮಾಡಲಾಯಿತು.ಬಳಿಕ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಿತು. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ನೇತೃತ್ವ ವಹಿಸಿದ್ದರು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7.30ಕ್ಕೆ ಸಂಗಮ್ ಬ್ರದರ್ಸ್ ಪುತ್ತೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀ ದೇವರ ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ. 23ರ ಭಾನುವಾರ ಬೆಳಿಗ್ಗೆ 9.30ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ರಿಂದ ಮಹಾಪೂಜೆ ಶ್ರೀ ದರ್ಶನ ಪಾತ್ರಿಯವರಿಂದ ಶ್ರೀ ದೇವಿ ದರ್ಶನ ಮತ್ತು ಅಭಯ ನುಡಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯಿಂದ ಭಜನೆ, ರಾತ್ರಿ 7.30ರಿಂದ ಕೀರ್ತಿಶೇಷ ಚಿದಾನಂದ ಕಾಮತ್ ಕಾಸರಗೋಡು ಅವರ ಶಿಷ್ಯವರ್ಗದ ಡಿಂಡಿಮ ಕಲಾವಿದರಿಂದ ಮತ್ತು ರಾಜ್ಯ ಪಶಸ್ತಿ ವಿಜೇತ ನೆಹರುನಗರ ಮುರಳಿ ಬ್ರದರ್ಸ್ ಡ್ಯಾನ್ಸ್ ಕ್ರ್ಯೂ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 9 ಗಂಟೆಯಿಂದ ದೈವಗಳ ಭಂಡಾರ ಆಗಮಿಸಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಜರಗಲಿದೆ ಎಂದು ದೇವಳದ ಪಕಟಣೆ ತಿಳಿಸಿದೆ.

ಭಕ್ತರ ಸಹಕಾರದಲ್ಲಿ ವಸಂತ ಕಟ್ಟೆ ದೇವಿಗೆ ಅರ್ಪಣೆ:

ಸುಮಾರು 45 ವರ್ಷಗಳ ಹಿಂದೆ ಬನ್ನೂರಿನ ಕರ್ಮಲದಲ್ಲಿ ಧರ್ಮದರ್ಶಿಗಳೂ ಸಂಚಾಲಕರೂ ಆಗಿರುವ ರಾಜಣ್ಣ ಅವರು ಕಟೀಲಿನ ಅಸಣ್ಣರ ಆಶೀರ್ವಾದದಿಂದ ಸಣ್ಣ ಭಜನಾ ಮಂದಿರ ನಿರ್ಮಿಸಿದರು. ಸುಮಾರು 12 ವರ್ಷಗಳ ಹಿಂದೆ ಎಲ್ಲರ ಸಹಕಾರದಿಂದ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು. ಇಲ್ಲಿ ಪ್ರಮುಖವಾಗಿ ನೆನಪಿಸ ಬೇಕಾದ ಹೆಸರು ಆಡಳಿತ ಸಮಿತಿ ಗೌರವಾಧ್ಯಕ್ಷರೂ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಚಂದ್ರಹಾಸ ರ್ರ ಬಾಳಿಕೆ ಅವರ ಸಹಕಾರ. ಹಣಕಾಸಿನ ವಿಚಾರ ಬಂದಾಗ ದೊಡ್ಡಮಟ್ಟಿನ ಸಹಕಾರ ನೀಡಿದ್ದಾರೆ. ಇದುವರೆಗೆ ತಟ್ಟೆಯಲ್ಲಿ ನಿರ್ಮಿಸಿದ ವಸಂತ ಕಟ್ಟೆಯಲ್ಲಿ ದೇವರು ಪೂಜೆ ಪಡೆದುಕೊಳ್ಳುತ್ತಿದ್ದರು. ಇದೀಗ ಎಲ್ಲರ ಸಹಕಾರದಿಂದ ಸುಂದರವಾದ ವಸಂತ ಕಟ್ಟೆ ನಿರ್ಮಿಸಲಾಗಿದೆ. ಕುಕ್ಕಾಡಿ ತಂತಿ ಪ್ರೀತಂ ಪುತ್ತೂರಾಯ ಅವರು ಪ್ರತಿಷ್ಠೆ ಮಾಡಿದ ಬಳಿಕ ಅಂದರೆ ಕಳೆದ 12 ವರ್ಷಗಳಿಂದ 1 ದಿನ ಜಾತ್ರೆ ಮರುದಿನ ದೈವಗಳ ನೇಮ ನಡೆಸಿಕೊಂಡು ಬರಲಾಗುತ್ತಿದೆ. ಎರಡನೇ ದಿನ ಧರ್ಮದರ್ಶಿಗಳಾಗಿರುವ ರಾಜಣ್ಣ ಅವರು ದೇವಿದರ್ಶನ ನಡೆಸಿಕೊಡಲಿದ್ದಾರೆ. ಆಡಳಿತ ಸಮಿತಿಯ ಜೊತೆಗೆ ಉತ್ಸವ ಸಮಿತಿಯನ್ನು ರಚಿಸಿದ್ದು, ಅಧ್ಯಕ್ಷರಾಗಿ ನಿವೃತ್ತ ಎ.ಎಸ್.ಐ. ಚಂದ್ರಶೇಖರ, ಉಪಾಧ್ಯಕ್ಷರಾಗಿ ಮಹಾಲಿಂಗ ಪಾಟಾಳಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಯ್ಯ ಕರ್ಮಲ ಹಾಗೂ ಗಣೇಶ್, ತಾರನಾಥ ಮೊದಲಾದವರು ಸೇವೆ ಸಲ್ಲಿಸುತ್ತಿದ್ದಾರೆ. ಕ್ಷೇತ್ರದ ಆಡಳಿತ ಸಮಿತಿಯ ಸಂಚಾಲಕರಾಗಿ ರಾಜಣ, ಗೌರವಾಧ್ಯಕ್ಷರಾಗಿ ಚಂದಹಾಸ ಎಂ.ರ ಬಾಳಿಕೆ ಮನೆ, ಉಪಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ದಿನಕರ ಗೌಡ ಬುಡ್ಡೆ ಗುತ್ತು ಹಾಗೂ ಗಣೇಶ್ ಕರ್ಮಲ, ಕೋಶಾಧಿಕಾರಿಯಾಗಿ ದಿನೇಶ್ ಕರ್ಮಲ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಗೌಡ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.ಧರ್ಮದರ್ಶಿ ರಾಜಣ ಅವರಿಗೆ ಇನ್ನೂ ಹಲವಾರು ಅಭಿವೃದ್ಧಿಯ ಆಲೋಚನೆಗಳಿವೆ. ತಾಯಿಯ ಆಶೀರ್ವಾದದಿಂದ ಊರವರ ಸಹಕಾರದಿಂದ ಅವೆಲ್ಲಾ ನೆರವೇರಲಿ.

ಯು.ಲೊಕೇಶ್ ಹೆಗ್ಡೆ, ಅಧ್ಯಕ್ಷರು, ಆಡಳಿತ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕರ್ಮಲ

ಮೈಯಲ್ಲಿ ಬಂದ ಕಟೀಲಿನ ತಾಯಿ, ನೀರಿನ ರೂಪದಿ ನೆಲೆಸಿದ ದುರ್ಗೆ:

1982ರಲಿ ಮನೆಯಲ್ಲಿ ನೀರಿನ ಅಭಾವ ಕಾಣಿಸಿಕೊಂಡಿತು. ಆಗ ಬಾವಿ ತೋಡುವ ಕಾರ್ಯಕ್ಕೆ ಮುಂದಾದಾಗ ದುರ್ಗಾಪರಮೇಶ್ವರಿ ತಾಯಿ ಮೈಯಲ್ಲಿ ಬಂದರು. ನೀರಿನ ರೂಪದಲ್ಲಿ ತಾಯಿಯ ಆಗಮನವಾಗಿದೆ ಎಂಬ ನುಡಿ ಆಯಿತು. ಬಳಿಕ ಕಟೀಲಿಗೆ ತೆರಳಿ ಆಗಿನ ಗೋಪಾಲ ಅಸುಣ್ಣ ಅವರನ್ನು ಭೇಟಿಯಾದೆ. ದೇವಿ ದುರ್ಗಾಪರಮೇಶ್ವರಿಯ ಸ್ಥಾಪನೆ ಮಾಡಿ ವಾರಕ್ಕೆ 2 ದಿನ ಭಜನೆ ಮಾಡಿಕೊಂಡು ಬರುವಂತೆ ತಿಳಿಸಿದರು. ಅದರಂತೆ ಭಜನೆಯ ಸೇವೆ ನೆರವೇರಿಸಿಕೊಂಡು ಬಂದೆ. ಮಂಗಳೂರಿನಲಿದ ನಾನು ಸರಕಾರಿ ಉದ್ಯೋಗವನ್ನು ಬಿಟ್ಟು ಊರಿಗೆ ಮರಳಿದ ಕಾರಣ ಬಹಳ ಕಷ್ಟದ ದಿನಗಳನ್ನು ನೋಡುವಂತಾಯಿತು. ಆದರೂ ಕಷ್ಟಪಟ್ಟು ಬೀಡಿ ಕಟ್ಟಿ, ಬೇಕಾದ ಅಗತ್ಯ ಸಾಮಾಗ್ರಿಗಳನ್ನು ತರುತ್ತಿದೆ. ಎಲ್ಲರ ಸಹಕಾರ ಸಿಕ್ಕಿತು. ಸಣ್ಣ ಗುಡಿ ಕಟ್ಟಿದೆ. ಆಗ ಲಿಂಗಪ್ಪ ಸ್ವಾಮಿ ಜೊತೆಯಾದರು. ದೇವಸ್ಥಾನ ನಿರ್ಮಿಸಲು ಧೈರ್ಯ ತುಂಬಿದರು. ಸಣ್ಣ ದೇವಸ್ಥಾನ ನಿರ್ಮಿಸಿದ್ದು, ಕೇಶವ ತಂತ್ರಿಗಳು ಪ್ರತಿಷ್ಠಾ ಕಾರ್ಯ ನೆರವೇರಿಸಿಕೊಟ್ಟರು. ಈಗ ಪ್ರತಿವರ್ಷ ಕುಕಾಡಿ ತಂತ್ರಿ ಪೀತಂ ಪುತ್ತೂರಾಯರ ನೇತೃತ್ವದಲ್ಲಿ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ದೇವಸ್ಥಾನ ಬೆಳಗುತ್ತಾ ಅಭಿವೃದ್ಧಿಯಾಗುತ್ತಾ ಬರುತಿದೆ. ಇದರೊಂದಿಗೆ ನಮ್ಮ ಕುಟುಂಬಕ್ಕೂ ಒಳ್ಳೆಯದಾಗಿದೆ. ಮೊದಲು ಸಣ್ಣ ಮೂರ್ತಿ ಇತ್ತು.ದಿವಂಗತ ಮುತ್ತಪ್ಪ ರೈ ಅವರ ಸಹಕಾರ ಕೇಳಿದಾಗ ಸುಮಾರು 1.5 ಅಡಿ ಎತರದ ಮೂರ್ತಿಯನ್ನು ನಿರ್ಮಿಸಿಕೊಟ್ಟರು. ಚಂದ್ರಹಾಸ ರೈ ಬಾಳಿಕೆ, ಲೊಕೇಶ್ ಹೆಗ್ಡೆ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಮಹಾಲಿಂಗ ಪಾಟಾಳಿ ಮೊದಲಾದವರು ಪ್ರಮುಖವಾಗಿ ನಿಂತುಕೊಂಡು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಹೆಗಲು ಕೊಡುತ್ತಿದ್ದಾರೆ. ಸಮಿತಿಯ ಸಹಕಾರದಿಂದ ಅತ್ಯುತಮವಾಗಿ ದೇವಳದ ಕಾರ್ಯ ನಡೆದುಬರುತ್ತಿದೆ. ಇದೀಗ ವಸಂತ ಕಟ್ಟೆಯನ್ನು ಸರ್ವರ ಸಹಕಾರದಿಂದ ನಿರ್ಮಾಣ ಮಾಡಿ ದೇವಿಗೆ ಅರ್ಪಣೆ ಮಾಡಲಾಗಿದೆ.

ರಾಜಣ್ಣ, ಧರ್ಮದರ್ಶಿ ಹಾಗೂ ಸಂಚಾಲಕರು, ಆಡಳಿತ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕರ್ಮಲ


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಮಾ. 14ರಿಂದ 23ರವರೆಗೆ ಶರವೂರು ಜಾತ್ರೋತ್ಸವ | ಮಾ. 21ರಂದು ದರ್ಶನ ಬಲಿ, 22ರಂದು ಶ್ರೀ ಮಹಾರಥೋತ್ಸವ, 16, 17, 24ರಂದು ದೈವಗಳ ನೇಮೋತ್ಸವ

ಕಡಬ ತಾಲೂಕಿನ ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ…