Gl harusha
ಧಾರ್ಮಿಕ

ಸಂನ್ಯಾಸತ್ವ ಸ್ವೀಕರಿಸಿದ ದಕ್ಷಿಣ ಭಾರತದ ನಟಿ!!

ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಜನಪ್ರಿಯರಾಗಿದ್ದ 90ರ ದಶಕದ ಬಾಲಿವುಡ್ ನ ಹಾಟ್ ನಟಿ ಜೀವನದ ಐಷಾರಾಮದ ವೈಭೋಗ ಬದುಕಿಗೆ ವಿದಾಯ ಹೇಳಿ ಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವಿಕರಿಸಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಜನಪ್ರಿಯರಾಗಿದ್ದ 90ರ ದಶಕದ ಬಾಲಿವುಡ್ ನ ಹಾಟ್ ನಟಿ ಜೀವನದ ಐಷಾರಾಮದ ವೈಭೋಗ ಬದುಕಿಗೆ ವಿದಾಯ ಹೇಳಿ ಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಕೈಗೊಂಡು ಆಧ್ಯಾತ್ಮ ಹಾದಿ ಹಿಡಿದಿದ್ದಾರೆ.

srk ladders
Pashupathi
Muliya

ಕುಂಭಮೇಳದ ಕಿನ್ನರ ಅಖಾಡದಲ್ಲವರು ಮಹಾಮಾಂಡಲೇಶ್ವರಿಯಾಗಿದ್ದಾರೆ.

ಕನ್ನಡ, ಮಲಯಾಳಂ ಸಹಿತ ದ.ಭಾರತೀಯ ಚಿತ್ರಗಳಲ್ಲೂ ನಟಿಸಿದ್ದ ಅವರು 90ರ ದಶಕದಲ್ಲಿ ಪಡ್ಡೆ ಹೈದರ ನಿದ್ದೆಗೆಡಿಸಿದ ಹಾಟ್ ನಟಿಯಾಗಿ ಜನಪ್ರಿಯರಾಗಿದ್ದರು. ಐಷಾರಾಮದ ಬದುಕಿಗೆ ವಿರಾಮವಿತ್ತು ದಿಢೀರನೆ ಸಾಧ್ವಿಯಾದ ಅವರು ಕಿನ್ನರ ಅಖಾಡಕ್ಕೆ ಮಹಾಮಂಡಲೇಶ್ವರಿಯಾಗಿ ನೇಮಕಗೊಂಡರು.

ಕಿನ್ನರ ಅಖಾಡ ಎಂದರೆ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015ರಲ್ಲಿ ಆರಂಭವಾದ ಈ ಅಖಾಡ ಅಂತರಾಷ್ಟ್ರೀಯ ಸಂತರ ಸಂಘಟನೆಯ ಆಧೀನದಲ್ಲಿದೆ. ಈ ಸಂಘಟನೆಗೆ ನಟಿ ಮಮತಾ ಕುಲಕರ್ಣಿ ಇನ್ನು ಮಹಾಮಂಡಲೇಶ್ವರಿಯಾಗಿದ್ದಾರೆ. ಇದೊಂದು ಧಾರ್ಮಿಕ ಮಹತ್ವದ ಜವಾಬ್ದಾರಿಯಾಗಿದು, ಜ.24ರಂದು ಮಮತಾ ಕುಲಕರ್ಣಿ ಅವರಿಂದ ಪಿಂಡಪ್ರಧಾಪ ಮಾಡಿಸಿ ಮಹಾಮಂಡಲೇಶ್ವರಿ ಪೀಠಾರೋಹಣ ನಡೆಯಲಿದೆ. ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮೆರೆದಿದ್ದ ಅವರು ದೇಶದ ಪ್ರಮುಖ ನಟರೊಂದಿಗೆ ನಟಿಸಿ ಜನಪ್ರಿಯರಾಗಿದ್ದರು. ಬದುಕಿನ ಯಾನದಲ್ಲಿ ಐಷಾರಾಮದ ಸುಖಭೋಗಕ್ಕೆ ವಿದಾಯವಿತ್ತು ಆಧ್ಯಾತ್ಮದತ್ತ ಮುಖ ಮಾಡಿದ ಅವರ ಆಯ್ಕೆ ಚರ್ಚಿತವಾಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿ ಕಲ್ಲು ಹಾಕಿದ ವಿಚಾರ:ಸೋಶಿಯಲ್ ಮೀಡಿಯಾ ದೂರಿಗೆ ಸ್ಪಂದಿಸಿದ ಶಾಸಕರು

ಪುತ್ತೂರು: ಪುತ್ತೂರಿನ‌ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಅಂಚೆ ಕಚೇರಿ ಬಳಿ…

ಮಹಾಕುಂಭಮೇಳ: 90 ಸಾವಿರ ಖೈದಿಗಳಿಗೆ ಸ್ನಾನ ಭಾಗ್ಯ! ಪವಿತ್ರ ಸ್ನಾನ ಮಾಡಿಸಿದ ಬಗೆಯಾದರೂ ಹೇಗೆ ಬಲ್ಲಿರಾ?

ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು…