ಧಾರ್ಮಿಕ

ನಾಳೆ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ; ಆಂಜನೇಯ ಹುಟ್ಟಿದ ಅಂಜನಾದ್ರಿ ಬೆಟ್ಟದಲ್ಲಿ ಸಮರೋಪಾದಿಯಲ್ಲಿ ಸಿದ್ಧತೆ

ಆಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತರು ಹನುಮಮಾಲೆ ವಿಸರ್ಜನೆಗೆ ದಿನಗಣನೆ ಪ್ರಾರಂಭವಾಗಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.  ಡಿ.13 ರಂದು ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದ್ದು ಅಂದು ಬೆಳಿಗ್ಗೆ ಗಂಗಾವತಿ ನಗರದಲ್ಲಿ  ಹನುಮಮಾಲಾಧಾರಿಗಳ ಮೆರವಣಿಗೆ ಜರುಗಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಗಂಗಾವತಿ:  ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತರು ಹನುಮಮಾಲೆ ವಿಸರ್ಜನೆಗೆ ದಿನಗಣನೆ ಪ್ರಾರಂಭವಾಗಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.  ಡಿ.13 ರಂದು ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದ್ದು ಅಂದು ಬೆಳಿಗ್ಗೆ ಗಂಗಾವತಿ ನಗರದಲ್ಲಿ  ಹನುಮಮಾಲಾಧಾರಿಗಳ ಮೆರವಣಿಗೆ ಜರುಗಲಿದೆ.

ಅಂಜನಾದ್ರಿಗೆ ಬರುವ ಭಕ್ತರಿಗೆ ಪ್ರಸಾದ ವಿತರಿಸುವುದಕ್ಕಾಗಿ ಸಿದ್ಧತೆ ನಡೆದಿದೆ. ಅಂಜನಾದ್ರಿ ಬೆಟ್ಟದ ಹಿಂಭಾಗದ ಚಿಕ್ಕರಾಂಪುರ ಬಳಿ ಇವರು ವೇಧ ಪಾಠ ಶಾಲೆಯ ಆವರಣದಲ್ಲಿ ಕೌಂಟರ್‌ಗಳನ್ನ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

SRK Ladders

ಬಿಗಿ ಭದ್ರತೆಃ 

ಅಂಜನಾದ್ರಿ ಬಳಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ 1500 ಪೊಲೀಸರನ್ನು ನಿಯೋಜಿಸಲಾಗಿದೆ. ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳನ್ನು ಕರೆಯಿಸಲಾಗಿದೆ.

ಪ್ರಮುಖರ ಆಗಮನಃ  

ಡಿ.13 ರಂದು ಹನುಮದ್ ವೃತ ಹಿನ್ನಲೆ ಮತ್ತು ಹನುಮಮಮಾಲೆ ವಿಸರ್ಜನೆ ಹಿನ್ನೆಯಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಆರ್ ಎಸ್ ಎಸ್  ಸಂಘದ ಪ್ರಮುಖರು ಆಗಮಿಸಲಿದ್ದಾರೆ. ನಗರದಲ್ಲಿ ಹನುಮಮಾಲಾ ಧಾರಿಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರಮುಖರು ನಂತರ ಅಂಜನಾದ್ರಿಗೆ ತೆರಳಲಿದ್ದಾರೆ.

ಗಂಗಾವತಿ ನಗರ ಮತ್ತು ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದು ಪರಿಷತ್ ಮತ್ತು ಆರ್ ಎಸ್ ಎಸ್  ಸಂಘದ ಪ್ರಮುಖರು ಆಗಮಿಸಲಿದ್ದಾರೆ.  ಅಂಜನಾದ್ರಿಗೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. 

ಅಂಜನಾದ್ರಿಯಲ್ಲಿ ಕಂಗೊಳಿಸುತ್ತಿರುವ ವಿದ್ಯುತ್ ದೀಪಗಳ ಅಲಂಕಾರ

ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹನುಮ ಜನಿಸಿದ ಸ್ಥಳ ಅಂಜನಾದ್ರಿಯಲ್ಲಿ ಹನುಮದ್ ವೃತ್ತ ಮತ್ತು ಹನುಮಮಾಲೆ ವಿಸರ್ಜನೆ ಹಿನ್ನಲೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು ಕಂಗೊಳಿಸುತ್ತಿದೆ.

ಬೆಟ್ಟದ ಸುತ್ತಲು ವಿವಿಧ ಬಣ್ಣಗಳ ವಿದ್ಯುತ್‌ ದೀಪಗಳನ್ನು ಹಾಕಲಾಗಿದ್ದು, ನಿಮಿಷಕ್ಕೊಮ್ಮೆ ದೀಪಗಳ ಬಣ್ಣ ಬದಲಾವಣೆಯಾಗುತ್ತಿದೆ. ಮೆಟ್ಟಿಲು ಮಾರ್ಗದಲ್ಲಿಯೂ ಸಹ ದೀಪಗಳನ್ನು ಹಾಕಲಾಗಿದೆ. ಆನೆಗೊಂದಿ ಗ್ರಾಮದಿಂದ ಹನುಮನಹಳ್ಳಿ ಮಾರ್ಗದ ರಸ್ತೆಯ ಎಡ ಮತ್ತು ಬಲ ಭಾಗಗಳ ಮಾರ್ಗಗಳಲ್ಲಿಯೂ ವಿದ್ಯುತ್‌ ದೀಪಗಳನ್ನು ಹಾಕಲಾಗಿದೆ. ಇದರಿಂದ ಅಂಜನಾದ್ರಿ ಬೆಟ್ಟ ಕಂಗೊಳಿಸುತ್ತಿದೆ. 

ಗಂಗಾವತಿ:  ತಾಲೂಕಿನ ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿ ದೇಗುಲದ ಗೋಪುರಕ್ಕೆ ಚಿನ್ನದ ಲೇಪನ ಮಾಡುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದರು.

ಸೋಮವಾರ ಪಂಪಾ ಸರೋವರದಲ್ಲಿ ಹನುಮಮಾಲೆ ಧರಿಸಿ ಅಂಜನಾದ್ರಿ ಬೆಟ್ಟದ ಕೆಳಗೆ ಆಂಜನೇಯಸ್ವಾಮಿ ಪಾದುಕೆಗಳಿಗೆ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಕ್ತರ ಸಹಕಾರ ಪಡೆದು ಗೋಪುರಕ್ಕೆ ಚಿನ್ನದ ಲೇಪ ಮಾಡುವುದಾಗಿ ತಿಳಿಸಿದ್ದರು. 

ಹಿಂದಿನ ಬಿಜೆಪಿ ಸರ್ಕಾರ ಈ 100 ಕೋಟಿ, ಇಂದಿನ ಕಾಂಗ್ರೆಸ್ ಸರ್ಕಾರ ₹100 ಕೋಟಿ ಸೇರಿದಂತೆ ಅಂಜನಾದ್ರಿ ಅಭಿವೃದ್ಧಿಗೆ ಒಟ್ಟು ₹240 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕೊಠಡಿಗಳು, ರಸ್ತೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದಿದ್ದರು


ಈ ಸುದ್ದಿಯನ್ನು ಶೇರ್ ಮಾಡಿ

Related Posts