ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ದೇವಸ್ಥಾನದ ಅನ್ನಸಂತರ್ಪಣೆಗೆ ಅಕ್ಕಿ, ಇನ್ನಿತರ ಸಾಮಗ್ರಿಗಳನ್ನು ಸಮರ್ಪಿಸಲಾಯಿತು.

331 ಕೆಜಿ ಅಕ್ಕಿ, 250 ಕೆಜಿ ಬೆಲ್ಲ, 180 ಕೆಜಿ ಕಡ್ಲೆಬೇಳೆ, 120 ಕೆಜಿ ತೊಗರಿಬೇಳೆ, 100 ಕೆಜಿ ಕೊತ್ತಂಬರಿ, 100 ಕೆಜಿ ಸಕ್ಕರೆ ಹೀಗೆ 73390 ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಸಮರ್ಪಣೆ ಮಾಡಲಾಯಿತು.
ದೇವಳದ ಪ್ರಧಾನ ಅರ್ಚಕ ವೇ.ಮೂ. ವಿ.ಎಸ್. ಭಟ್ ಪ್ರಾರ್ಥನೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಈಶ್ವರ್ ಬೆಡೆಕರ್, ಕೃಷ್ಣವೇಣಿ, ಮಾಜಿ ಸದಸ್ಯರಾದ ರಾಮ್ ದಾಸ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.





















