ಧಾರ್ಮಿಕ

ಮದುವೆ ಹೆಸರಿನಲ್ಲಿ ದುಂದುವೆಚ್ಚ ಬೇಡ: ಮಾದರಿ ಮದುವೆ ವಿಶೇಷ ಅಭಿಯಾನ | ಕೂರ್ನಡ್ಯದಲ್ಲಿ ಫೆ. 19ರಂದು ‘ಮಾದರಿ ಮದುವೆ’ ಜಾಗೃತಿ ಸಮಾವೇಶ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮದುವೆ ಹೆಸರಿನಲ್ಲಿ ದುಂದುವೆಚ್ಚ ಮತ್ತು ಅನಾಚಾರದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಭಾಗವಾಗಿ ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಮಿತಿ ಶತದಿನ 2025 ನವೆಂಬರ್ 8ರಿಂದ ಮಾದರಿ ಮದುವೆ ವಿಶೇಷ ಅಭಿಯಾನ ಆರಂಭವಾಗಿದ್ದು, ಪಬ್ರವರಿ 15ರತನಕ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವೀನರ್ ಅಬೂಶಝ ಅಬ್ದುರ್ರಝಾಕ್ ಖಾಸಿಮಿ ಕೂರ್ನಡ್ಕ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಖುತಬಾ ಸಂಗಮ, ಜಮಾಅತ್ ಸಮ್ಮಿಲನ, ಸೆಮಿನಾರ್, ಪತ್ರಕರ್ತರ ಸಭೆ, ಜಾಗೃತಿ ಸಭೆ, ಮೋಟಿವೇಶನ್ ತರಗತಿಗಳ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳು ನಡೆದಿವೆ. ಇದೀಗ ಅದರ ಮತ್ತೊಂದು ಹಂತ ಯೂನಿಟ್ ಕಾನ್ಫರೆನ್ಸ್ ಎಂಬ ಹೆಸರಿನಲ್ಲಿ ಪ್ರತಿ ಶಾಖೆಗಳಲ್ಲಿ ಸಾರ್ವಜನಿಕ ಪ್ರಭಾಷಣ ನಡೆಯುತ್ತಿದೆ ಎಂದರು.

ಯೂನಿಟ್ ಕಾನ್ಫರೆನ್ಸ್ ಭಾಗವಾಗಿ ಜ. 19ರಂದು ಸಂಜೆ 6.30ಕ್ಕೆ ಕೂರ್ನಡ್ಯದಲ್ಲಿ ‘ಮಾದರಿ ಮದುವೆ’ ಎಂಬ ವಿಷಯದಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯ ಪ್ರಭಾಷಣಗಾರರಾಗಿ ಖೇರೋಡ್ ಮುಹಮ್ಮದ್ ಅಝ್ ಹರಿ ಕುಟ್ಟಾಡಿ ಆಗಮಿಸಲಿದ್ದಾರೆ. ಸಮಾವೇಶದ ಉದ್ಘಾಟನೆಯನ್ನು ಕೂರ್ನಡ್ಕ ಪೀರ್ ಮೊಹಲ್ಲಾ ಮುಹ್ಯುದ್ದೀನ್ ಜುಮಾ ಮಸೀದಿ ಖತೀಬ ಅಬ್ದುಲ್ ಬಾಸಿತ್ ಹುದವಿ ಅಲ್ ಅಝ್ ಹರಿ ನೆರವೇರಿಸಲಿದ್ದಾರೆ. ಎಸ್ ವೈ ಎಸ್ ಝನ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಧಾರ್ಮಿಕ ಸಾಮಾಜಿಕ ನಾಯಕರು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ವೈಸ್ ಚೇರ್ಮಾನ್ ಅಬ್ದುಲ್ ಕರೀಮ್ ಹಾಜಿ ಕಾವೇರಿ, ಎಸ್.ವೈ.ಎಸ್. ಪುತ್ತೂರು ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್,  ಶಾಧಿಕಾರಿ ಸಮೀರ್ ಕೊಡಿಪ್ಪಾಡಿ, ಸಂಚಾಲಕ ಅಬ್ದುರ್ರಝಕ್ ಹಿಮಮಿ ರೆಂಜ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಆರ್ ಆರ್ ಸ್ಕ್ರ್ಯಾಪ್ ಮಾಲಕ ಎಸ್.ಎ. ಇಸ್ಮಾಯಿಲ್

ಮಾಣಿ: ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ ಮದ್ರಸಾ ಹಾಲ್ ನಲ್ಲಿ ನಡೆಯಿತು.…

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಭಾಗವತೆ ಕಾವ್ಯಶ್ರೀ ಅಜೇರು, ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಉಮೇಶ್ ಮಿಜಾರು ಆಯ್ಕೆ

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ…