ಧಾರ್ಮಿಕ

ನಿಮ್ಮ ವ್ಯಕ್ತಿತ್ವವೇ ಹಾಸ್ಯಕ್ಕೆ ವಸ್ತು: ಮದ್ಯಪ್ರಿಯರಿಗೆ ಎಚ್ಚರಿಕೆ ನೀಡಿದ ವೀರೇಂದ್ರ ಹೆಗ್ಗಡೆ | ತೆಂಕಿಲ ಗೌಡ ಸಮುದಾಯ ಭವನದಲ್ಲಿ ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ ಸಮಾವೇಶ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಿನಿಮಾ, ನಾಟಕದ ಹಾಸ್ಯ ಸನ್ನಿವೇಶಗಳಿಗೆ ಕುಡುಕರ ಜೀವನವೇ ವಸ್ತು ಆಗುತ್ತಿದೆ. ಮದ್ಯಪ್ರಿಯರು ಇದನ್ನು ಗಮನಿಸಿ, ಮದ್ಯದಿಂದ ದೂರ ಇರಬೇಕು. ಇಲ್ಲದೇ ಹೋದರೆ, ನಾಳೆ ನೀವೂ ಹಾಸ್ಯಕ್ಕೆ ವಸ್ತು ಆಗಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ಪುತ್ತೂರಿನ ತೆಂಕಿಲ ಗೌಡ ಸಮುದಾಯ ಭವನದಲ್ಲಿ ಜರಗಿದ ಗಾಂಧಿಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

akshaya college

ದೇಶದಲ್ಲೇ ಮೊದಲು ಮದ್ಯವನ್ನು ನಿಷೇಧ ಮಾಡುವಂತೆ ಪ್ರತಿಭಟನೆ ನಡೆಸಿದವರು, ಜಾಗೃತಿ ಮೂಡಿಸಿದವರು ಮಹಾತ್ಮಾ ಗಾಂಧಿ. ಇಂದು ಅದನ್ನು ಜಾರಿಗೊಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದು ಸಾಕಾರ ರೂಪ ಪಡೆದು, ಕುಟುಂಬಗಳು ನೆಮ್ಮದಿಯಿಂದ ಬದುಕುವಂತಾಗಬೇಕು ಎಂದು ಆಶಿಸಿದರು.

ಮದ್ಯವರ್ಜನ ಶಿಬಿರ ನಡೆಸಿದ ಬಳಿಕ ಏನು ಮಾಡುವುದು ಎಂಬ ಪ್ರಶ್ನೆ ಮೂಡಿಬಂದಿತು. ಅದಕ್ಕಾಗಿ ಸ್ವ ಉದ್ಯೋಗದ ಯೋಚನೆಯನ್ನು ಮುಂದಿಟ್ಟೇವು. ಇಂದು ಸಾಕಷ್ಟು ಮಂದಿ ಮದ್ಯ ವ್ಯಸನದಿಂದ ದೂರವಾಗಿ, ಸ್ವ ಉದ್ಯೋಗದ ದಾರಿ ಹಿಡಿದಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಕುಟುಂಬದಲ್ಲಿ ಹಲವು ವೈರುದ್ಯಗಳಿರುತ್ತವೆ. ಅವನ್ನು ಮೀರಿ ಕುಟುಂಬದಲ್ಲಿ ನೆಮ್ಮದಿಯಾಗಿ ಬದುಕಬೇಕು. ಇದೇ ದೃಷ್ಟಿಕೋನದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಕಾರ್ಯೋನ್ಮುಖರಾಗಿದ್ದಾರೆ. ಅವರ ಪರಿಶ್ರಮದ ಫಲವಾಗಿ ನಾರೀಶಕ್ತಿ ಸದೃಢವಾಗಿದೆ. ಸ್ವದೇಶಿ ಚಿಂತನೆಗೆ ಬಲ  ಬಂದಿದೆ. ನರೇಂದ್ರ ಮೋದಿ ಅವರು ಕಂಡ ಕನಸಾದ ಬಡತನ ನಿರ್ಮೂಲನೆಯನ್ನು ವೀರೇಂದ್ರ ಹೆಗ್ಗಡೆ ಅವರು ಜಾರಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಹಿಂಸೆ, ಪಾನಮುಕ್ತ, ಸ್ವದೇಶಿ ಚಿಂತನೆ, ಸ್ವಾವಲಂಬನೆಯ ಜೀವನವನ್ನು ನೀಡುವ ದೃಷ್ಟಿಕೋನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಕೆಲಸ ಮಾಡುತ್ತಿದೆ. ಇಂತಹ ಕ್ಷೇತ್ರಕ್ಕೆ ಅಪವಾದ ತರುವ ಕೆಲಸ ನಡೆಯುತ್ತಿದೆ. ರಾಮ, ಕೃಷ್ಣರನ್ನು ಅಪವಾದ ಬಿಟ್ಟಿಲ್ಲ. ಅದರಂತೆ ಧರ್ಮಸ್ಥಳಕ್ಕೂ ತಟ್ಟಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ಜೊತೆಯಾಗಿ ನಿಂತು, ಅವರೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದೇವೆ ಎಂದರು.

ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಆಶಯ ಭಾಷಣ ಮಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ ಮಾತನಾಡಿದರು.

ಭಾಸ್ಕರ ಮೂಲ್ಯ ಕೆದಿಲ ಹಾಗೂ ವಸಂತ ಬನ್ನೂರು ಅವರ ಪರವಾಗಿ ಶೈಲಜಾ ವಸಂತ ಬನ್ನೂರು ಪಾನಮುಕ್ತರ ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ಜನಮಂಗಲ ಕಾರ್ಯಕ್ರಮದಡಿ ಸಲಕರಣೆ ಹಾಗೂ ಸುಜ್ಆನವಿಧಿ ಶಿಷ್ಯವೇತನ ನೀಡಲಾಯಿತು. ಶಾಲಾ ಆವರಣ ಗೋಡೆಯ ಪತ್ರವನ್ನು ವಿತರಿಸಲಾಯಿತು.

ನವ್ಯ ಆಚಾರ್ಯ ಪ್ರಾರ್ಥಿಸಿದರು. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಮಾಣಿ ಹಾಗೂ ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…