ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಯೋಗ ಬಂಧುಗಳ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಮತ್ತು ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಹಾಗೂ ಅರ್ಚನೆಯ ಕಾರ್ಯಕ್ರಮ ಸೆ. 28ರಂದು ನಡೆಯಿತು.

ಮುಂಜಾನೆ 4.30ಕ್ಕೆ ಆರಂಭವಾದ ಕಾರ್ಯಕ್ರಮದ ಭಜನೆಯನ್ನು ನಮ್ಮ ಮನೆ ಹಾಗೂ ಪಾಂಡುರಂಗ ಶಾಖೆ ಗುರುವಾಯನಕೆರೆಯ ಯೋಗಬಂಧುಗಳು ನಡೆಸಿಕೊಟ್ಟರೆ, ಅಮೃತ ವಚನ ವಾಚನ ಹಾಗೂ ಪಂಚಾಂಗ ಪಠಣವನ್ನು ಸಹಸ್ರಲಿಂಗೇಶ್ವರ ಶಾಖೆಯ ಯೋಗಬಂಧುಗಳಾದ ಪ್ರದೀಪ್ ಮತ್ತು ವಿಜೇತ ನಡೆಸಿದರು.
ಮಾನಸಿಕ ಸಿದ್ಧತೆಯಿಂದ ಯೋಗ ಗಣಪತಿ ನಮಸ್ಕಾರದ ಅವಧಿಯ ವಿವರಣೆಯನ್ನು ಸಹಸ್ರಲಿಂಗೇಶ್ವರ ಶಾಖೆಯ ಶಿಕ್ಷಕ ರಾಜೇಂದ್ರ ಭಟ್ ನಿರ್ವಹಿಸಿದರೆ ಪ್ರಾತ್ಯಕ್ಷಿಕೆಯಲ್ಲಿ ಪೂರ್ವಿ, ಯಶನ್, ಹರೀಶ್ ಹಾಗೂ ಜಯಶ್ರೀ ಸಹಕರಿಸಿದರು.
ನಂತರ ಸಾಮೂಹಿಕ ಯೋಗ ದುರ್ಗಾ ನಮಸ್ಕಾರದ ಆರಂಭಪೂರ್ವ ಉದ್ಘಾಟನೆಯನ್ನು ದೀಪ ಪ್ರಜ್ವಲನೆಯ ಮೂಲಕ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳದ ಮುಖ್ಯ ಅರ್ಚಕ ಹರೀಶ ಉಪಾಧ್ಯಾಯ ನಡೆಸಿಕೊಟ್ಟರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ರಮ್ಯಾ ರಾಜಾರಾಮ್, ದಂತ ವೈದ್ಯ ಡಾ. ರಾಜಾರಾಮ್ ಉಪ್ಪಿನಂಗಡಿ, ಗಾಣಿಗ ಸಮುದಾಯ ಭವನ ಉಪ್ಪಿನಂಗಡಿ ಶಾಖೆಯ ರಾಜೇಶ್, ಕಾರ್ಯಕ್ರಮ ಸಂಚಾಲಕ ಕೃಷ್ಣಪ್ಪ ಉಪಸ್ಥಿತರಿದ್ದರು.
ಉಪ್ಪಿನಂಗಡಿ, ಸಹಸ್ರಲಿಂಗೇಶ್ವರ ಶಾಖೆಯ ಯೋಗ ಬಂಧುವಾದ ಅವನೀಶ್ ಬೌದ್ದಿಕ್ ನೀಡುತ್ತಾ, ನವರಾತ್ರಿ ಆಚರಣೆಯ ವಿಶೇಷ ಹಾಗೂ ದುರ್ಗಾ ಮಾತೆಯ ಒಂಬತ್ತು ರೂಪಗಳ ಬಗ್ಗೆ ಮಾಹಿತಿ ನೀಡಿದರು.
3 ಹಂತಗಳಲ್ಲಿ 9 ಬಾರಿ ಯೋಗ ದುರ್ಗಾ ನಮಸ್ಕಾರವನ್ನು ನಡೆಸುವಾಗ ವಿವರಣೆಯಲ್ಲಿ ಯತೀಶ್, ಹೇಮಾವತಿ, ಹಾಗೂ ಗಿರೀಶ್ ನಿರ್ವಹಿಸಿದರೆ, ಪ್ರಾತ್ಯಕ್ಷಿಕೆಯಲ್ಲಿ ಪ್ರತಿಮಾ, ಪ್ರಶಾಂತ್, ಶರ್ಮಿಳಾ, ಬಾಲಚಂದ್ರ, ಸುಧಾ, ಶಿವಪ್ರಸಾದ್, ಪ್ರಿಯಾ ಹಾಗೂ ಭುಜಂಗ ಸಹಕರಿಸಿದರು.
ಉಸಿರಾಟದ ಜೊತೆಗೆ ಬೆಸೆದು ಮಾಡಿದ ಯೋಗಾಭ್ಯಾಸಗಳ ನಂತರ ಶರೀರವನ್ನು ಚೈತನ್ಯ ಹಾಗೂ ಮನಸ್ಸನ್ನು ಪ್ರಶಾಂತಗೊಳಿಸುವ ಅಮೃತಾಸನವನ್ನುಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಾರ್ಗದರ್ಶಕ ರವೀಶ್ ನಡೆಸಿಕೊಟ್ಟರು.
ಶ್ರೀ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣವನ್ನು ಗಾಣಿಗ ಭವನ ಶಾಖೆ, ಉಪ್ಪಿನಂಗಡಿ ಹಾಗೂ ಶ್ರೀ ಭಾರತಿ ಶಾಖೆ, ಆಲಂಕಾರು ಇದರ ಯೋಗ ಬಂಧುಗಳು ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆಯನ್ನು ಪಾಂಡುರಂಗ, ಲತಾ ನಿರ್ವಹಿಸಿದರೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ಶಿಕ್ಷಣ ಸಹಪ್ರಮುಖ ಕೃಷ್ಣಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ, ಆಲಂಕಾರು, ಕೊಯಿಲ, ನೆಲ್ಯಾಡಿ, ಗುರುವಾಯನಕೆರೆ, ಪೊಳಲಿ ಹಾಗೂ ಮಂಗಳೂರು ಭಾಗದ 291 ಯೋಗ ಬಂಧುಗಳು ಹಾಗೂ 45 ಯೋಗೇತರ ಬಂಧುಗಳು ಭಾಗವಹಿಸಿದ್ದರು. 7.15ರ ವೇಳೆಗೆ ಪ್ರಸಾದೋಪಹಾರದೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮವು ಸಮಿತಿಯ ಮಂಗಳೂರು ಮಹಾನಗರ ಸಂಚಾಲಕರು, ಮಂಗಳೂರು ನಗರ ಪ್ರಮುಖರು, ಉಪ್ಪಿನಂಗಡಿ ನಗರ ಸಂಚಾಲಕರು, ನಗರ ಪ್ರಮುಖರುಗಳು ಹಾಗೂ ಶಾಖಾ ಶಿಕ್ಷಕರುಗಳ ಮಾರ್ಗದರ್ಶನದಲ್ಲಿ ಮೂಡಿ ಬಂದಿತು.
























