ಪುತ್ತೂರು: ಕುರಿಯ ಗ್ರಾಮದ ಬೈಲಾಡಿ ನೆಕ್ಕಿಲ್ ಶ್ರೀ ರಾಜಾ ಗುಳಿಗ ಸಾನಿಧ್ಯದಲ್ಲಿ ಭಾನುವಾರ ರಾಜಾ ಗುಳಿಗ ದೈವದ ನೇಮ ನಡೆಯಿತು.
ಬೆಳಿಗ್ಗೆ ಗಣಹೋಮ, ಶುದ್ಧ ಕಲಶ, ತಂಬಿಲ ಸೇವೆ ನಡೆದು ರಾಜಾ ಗುಳಿಗ ದೈವದ ನೇಮ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ನೆಕ್ಕಿಲ್ ಶ್ರೀ ರಾಜಾ ಗುಳಿಗ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.