ಪುತ್ತೂರು: ಆರ್ಯಾಪು ಗ್ರಾಮದ ಬಾರಿಕೆ ಮನೆತನದ ಪುತ್ತೂರು ಸೀಮೆ ದೈವಗಳಾದ ಶ್ರೀ ಪೂಮಾಣಿ ಮತ್ತು ಕಿನ್ನಿಮಾಣಿ ದೈವಸ್ಥಾನದಲ್ಲಿ ಮಾ. 9ರಂದು ನೇಮೋತ್ಸವ ಜರಗಲಿದೆ.
ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರ ಉಪಸ್ಥಿತಿಯಲ್ಲಿ ನೇಮೋತ್ಸವ ನಡೆಯಲಿದೆ.
ಶನಿವಾರ ರಾತ್ರಿ ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆದು, ಭಾನುವಾರ ಬೆಳಗ್ಗಿನಿಂದ ಪೂಮಾಣಿ, ಕಿನ್ನಿಮಾಣಿ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಅನುವಂಶೀಯ ಆಡಳಿತ ಮೊಕ್ತೇಸರರಾದ ಬಿ. ಮಂಜಪ್ಪ ರೈ ಬಾರಿಕೆ ಮನೆ, ವಿದ್ಯಾಧರ ಜೈನ್ ಉಪ್ಪಿನಂಗಡಿ, ಚಾರಿತ್ರಾವತಿ ಬಾರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.