Thursday, November 21
Share News

ಭಾರತೀಯ ರೈಲ್ವೆ ಇಲಾಖೆಯು (Railway department) ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ರೈಲ್ವೆ ಇಲಾಖೆಯ ರೈಲ್ವೇ ರಿಕ್ರೂಟ್‌ಮೆಂಟ್‌ ಬೋರ್ಡ್‌ನಿಂದ (Railway Recruitment Board) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ

ಐಟಿಐ ಪಾಸಾದವರಿಗೆ ಟೆಕ್ನೀಷಿಯನ್ ಗ್ರೇಡ್ III 13,206 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೆ. 6ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಈಗಾಗಲೇ ಗ್ರೇಡ್ 3ರ 8,052 ಓಪನ್ ಲೈನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ರೈಲ್ವೆ ಇಲಾಖೆಯ ವಿವಿಧ ವಲಯಗಳಿಂದ ಹೆಚ್ಚುವರಿಯಾಗಿ 22 ಕೆಟಗರಿಗಳಲ್ಲಿ ಟೆಕ್ನಿಷಿಯನ್ ಹುದ್ದೆಗಳಿಗೆ ಬೇಡಿಕೆ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ 22 ಕೆಟಗರಿಗಳನ್ನು ಸೇರಿಸಿ ವರ್ಕ್ ಶಾಪ್ & ಪಿಯು ವಿಭಾಗದ 5,154 ಹೆಚ್ಚುವರಿ ಹುದ್ದೆಗಳನ್ನು ಸೇರಿಸಿ ಒಟ್ಟು 13,206 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಟೆಕ್ನಿಷಿಯನ್ ಗ್ರೇಡ್ III (ಓಪನ್ ಲೈನ್) 8,052 ಹುದ್ದೆಗಳು ವರ್ಕ್ ಶಾಪ್ & ಪಿಯು ವಿಭಾಗದ 5,154 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಈ ಹುದ್ದೆಗಳ ಅನುಸಾರ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ 15 ದಿನಗಳ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕು. ಇನ್ನು ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಈ ಅಗತ್ಯ ಮಾನದಂಡಳಿಗೆ ನೀವು ಅರ್ಹರಾಗಿರಬೇಕು.

*ಅರ್ಜಿ ಸಲ್ಲಿಕೆಗೆ 10, 12ನೇ ತರಗತಿ ಜೊತೆಗೆ ಸಂಬಂಧಪಟ್ಟ ವಿಭಾಗದಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.

*18 ರಿಂದ 33 ವರ್ಷದೊಳಗಿನವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.

ಮೀಸಲಾತಿಗೆ ಅನುಗುಣವಾಗಿ ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ಪಿಡಬ್ಲ್ಯುಬಿಡಿ / ಮಹಿಳೆಯರು / ತೃತೀಯ ಲಿಂಗಿಗಳು / ಇಬಿಎಸ್‌ ಅಭ್ಯರ್ಥಿಗಳು 250 ರೂ. ಹಾಗೂ ಇತರ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

2024ರ ಸೆಪ್ಟಂಬರ್ 6ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಪರೀಕ್ಷೆ ಮತ್ತು ಆಯ್ಕೆ ವಿಧಾನ:

ಅರ್ಜಿ ಸಲ್ಲಿಕೆ ಮಾಡಿದ ಎಲ್ಲ ಅಭ್ಯರ್ಥಿಗಳಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (Computer Based Test -CBT) ನಡೆಸಲಾಗುತ್ತದೆ. ಇಲ್ಲಿ ಅತಿಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಅನುಸಾರ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ. ನಂತರ, ಮೆರಿಟ್ ಲಿಸ್ಟ್‌ನಲ್ಲಿ ಆಯ್ಕೆಯಾದವರಿಗೆ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಇನ್ನು ಎಲ್ಲ ಹಂತಗಳನ್ನು ಪೂರ್ಣಗೊಳಿಸಿ ಆಯ್ಕೆಯಾದ ಟೆಕ್ನಿಷಿಯನ್‌ ಗ್ರೇಡ್‌ III ಹುದ್ದೆಗಳ ನೌಕರರಿಗೆ 19,900 ರೂ. ಮಾಸಿಕ ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಲು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ (https://www.rrbapply.gov.in/) ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಕೆಗೆ ಹೆಸರು ನೋದಾಯಿಸಿ ಲಾಗಿನ್ ಮಾಡಿಕೊಳ್ಳಬೇಕು. ನಂತರ, ತೆರೆದುಕೊಳ್ಳುವ ಅರ್ಜಿಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಜಾತಿ, ಅಂಕಪಟ್ಟಿ ಮಾಹಿತಿ ದಾಖಲಿಸಬೇಕು. ನಂತರ ಅಗತ್ಯವಿರುವ ದಾಖಲೆಗಳ ಸಾಫ್ಟ್ ಕಾಪಿಗಳನ್ನು (ಫೋಟೋ, ಸಹಿ, ಅಂಕಪಟ್ಟಿ) ಅಪ್ಲೋಡ್ ಮಾಡಬೇಕು. ಬಳಿಕ ಆನ್‌ಲೈನ್‌ನಲ್ಲೇ ಅರ್ಜಿ ಶುಲ್ಕ ಪಾವತಿಸಬೇಕು. ಕೊನೆಗೆ, ಅರ್ಜಿಯ ಸಂಪೂರ್ಣ ಮಾಹಿತಿ ಮತ್ತೊಮ್ಮೆ ಪರಿಶೀಲಿಸಿ ಸಬ್ಮಿಟ್ (Submit) ಮಾಡಬೇಕು

ಹೆಚ್ಚಿನ ಮಾಹಿತಿಗಾಗಿ:

https://www.rrbapply.gov.in/

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಸೆಪ್ಟಂಬರ್ 6.


Share News

Comments are closed.

Exit mobile version