Friday, November 22
Share News

ಪುತ್ತೂರು: ರಾಜ್ಯ ರಾಜಕೀಯವೇ ಹಿಂದಿರುಗಿ ನೋಡುವಂತೆ ಮಾಡಿದ್ದ ಪುತ್ತೂರು ರಾಜಕೀಯದ ಬಿರುಗಾಳಿ ಶಮನವಾಗುವ ಕಾಲ ಸನ್ನಿಹಿತವಾಗಿದೆ.

ಇದೀಗ ಬಂದ ಮಾಹಿತಿಯಂತೆ, ಅರುಣ್ ಕುಮಾರ್ ಪುತ್ತಿಲ ಅವರು ಇದೀಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾದಂತಾಗಿದೆ.

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ. ಬ್ರಿಜೇಶ್ ಚೌಟ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ, ಪುತ್ತಿಲ ಪರಿವಾರದ ವಿರೋಧ ಶಮನವಾದಂತಾಗಿದೆ. ಇದರ ಬೆನ್ನಲ್ಲೇ ಅಂದರೆ ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಪುತ್ತೂರು ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ಅವರು ಅರುಣ್ ಕುಮಾರ್ ಪುತ್ತಿಲ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆ ಮಾತುಕತೆ ನಡೆದು, ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು.

ಅಧ್ಯಕ್ಷ ಗಾದಿಯಲ್ಲಿ ಪುತ್ತಿಲ!

ಇದೀಗ ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆ ನೀಡಿತ್ತಾರೆ ಎನ್ನುವುದೇ ಬಹುದೊಡ್ಡ ಪ್ರಶ್ನೆ. ಜಿಲ್ಲೆಯ ಏಳು ಮಂಡಲಗಳ ಪೈಕಿ ಬಾಕಿ ಇಟ್ಟಿರುವ ಪುತ್ತೂರು ಮಂಡಲ ಅಧ್ಯಕ್ಷತೆಗೆ ಆಯ್ಕೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ. ಇದಕ್ಕೆ ಅರುಣ್ ಪುತ್ತಿಲ ಅವರ ಹೆಸರನ್ನೇ ಸೂಚಿಸುವ ಸಾಧ್ಯತೆ ಇದೆ.


Share News

Comments are closed.

Exit mobile version