ರಾಜಕೀಯ

ಡಿಕೆಶಿ ಸಿಎಂ ಆಗಿ ಬರುವಾಗ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ: ಅಶೋಕ್ ರೈ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಬರುವಾಗ ಪುತ್ತೂರಿನ ನೂತನ ಕಾಂಗ್ರೆಸ್ ಕಚೇರಿಯ ಉದ್ಘಾಟನೆ ನೆರವೇರಿಸುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

chennai-shopping
maithri

ಪುತ್ತೂರು ksrtc ಬಸ್ ನಿಲ್ದಾಣ ಮುಂಭಾಗ ಶುಕ್ರವಾರ ಸಂಜೆ ನಡೆದ ಕಾಂಗ್ರೆಸ್ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

16 ಸಾವಿರ ಚದರ ಅಡಿಯ ದೊಡ್ಡ ಕಚೇರಿ ಕಟ್ಟಡ ಇಲ್ಲಿ ತಲೆ ಎತ್ತಲಿದೆ. ಮುಂದಿನ 8 ತಿಂಗಳಿನಲ್ಲಿ ಉದ್ಘಾಟನೆಗೆ ಸಜ್ಜಾಗಲಿದೆ. ಇದರ ಕಾಮಗಾರಿಗಾಗಿ ರಶೀದಿ ವ್ಯವಸ್ಥೆ ಇದೆ. 100 ರೂನಿಂದ ಲಕ್ಷ ರೂ.ವರೆಗೂ ಅನುದಾನ ನೀಡಬಹುದು. ಆದರೆ ಒತ್ತಡವಿಲ್ಲ ಎಂದರು.

ಪಕ್ಷ ಎಂದರೆ ದೊಡ್ಡ ಮಾವಿನ ಮರದಂತೆ. ಕೈಬೆರಳಲ್ಲಿ ವ್ಯತ್ಯಾಸ ಇರುವಂತೆ ಸಂಘಟನೆಯ ಒಳಗೂ ಇರುತ್ತದೆ. ಈ ವ್ಯತ್ಯಾಸಗಳನ್ನು ನಮ್ಮೊಳಗೆ ಹಂಚಿಕೊಂಡು ಸರಿಪಡಿಸಿಕೊಳ್ಳಬೇಕು. ಮಾವಿನ ಮರದಿಂದ ಹಣ್ಣು ತಿನ್ನುವವರು ತಿನ್ತಾರೆ, ನೆರಳು ಪಡೆಯುವವರು ನೆರಳು ಪಡೆದುಕೊಳ್ತಾರೆ. ಆದರೆ ಎಲ್ಲರೂ ಒಟ್ಟಾಗಿ ಸೇರಿ ಬೆಳೆಸುವ ಕೆಲಸ ಮಾಡಬೇಕು ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts